ಟಿಆರ್ ಎಸ್ ಪಕ್ಷ ತೊರೆದ ಇಟಾಲಾ ರಾಜೇಂದರ್; ಶಾಸಕ ಸ್ಥಾನಕ್ಕೆ ರಾಜಿನಾಮೆ: ಬಿಜೆಪಿ ಸೇರ್ಪಡೆ ಸಾಧ್ಯತೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಜಿ ಸಚಿವ ಇಟಾಲಾ ರಾಜೇಂದರ್ ಟಿಆರ್ ಎಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.
ಇಟಾಲಾ ರಾಜೇಂದರ್
ಇಟಾಲಾ ರಾಜೇಂದರ್

ಹೈದರಾಬಾದ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಜಿ ಸಚಿವ ಇಟಾಲಾ ರಾಜೇಂದರ್ ಟಿಆರ್ ಎಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿತ್ತು. ಶೀಘ್ರದಲ್ಲೇ ಅವರು ತಮ್ಮ ರಾಜಿನಾಮೆ ಪತ್ರವನ್ನು ವಿಧಾನಸಭೆ ಸ್ಪೀಕರ್ ಗೆ ರಾಜಿನಾಮೆ ಪತ್ರ ರವಾನಿಸುವ ಸಾಧ್ಯತೆಯಿದೆ. ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು, ಶೀಘ್ರದಲ್ಲೇ ರಾಜೇಂದರ್ ಬಿಜೆಪಿ ಸೇರುವ ಸಾಧ್ಯತೆಯಿದೆ.

ನನ್ನ ಪ್ರಯತ್ನದ ಫಲವಾಗಿ ಕರೀಮ ನಗರ ಜಿಲ್ಲೆಯಲ್ಲಿ ಟಿಆರ್ ಎಸ್  ಹಲವು ಚುನಾವಣೆಗಳಲ್ಲಿ ಗೆಲುವು ಸಾಧಿಸಿದೆ. ಹುಜುರಾಬಾದ್ ಅಸೆಂಬ್ಲಿ ವಿಭಾಗವನ್ನು ಬಹುಮತದೊಂದಿಗೆ ಗೆದ್ದಿದ್ದೇನೆ ಜನರ ಬೆಂಬಲದಿಂದಾಗಿ ಗೆಲುವು ಸಾಧಿಸಿದ್ದೇನೆಯೇ ಹೊರತು ಟಿಆರ್ ಎಸ್  ಬಿ-ಫಾರ್ಮ್ ನಿಂದ ಅಲ್ಲ ಎಂದು ಕಿಡಿ ಕಾರಿದ್ದಾರೆ.

ಟಿಆರ್ ಎಸ್ ಬಿ ಫಾರಂ ನಿಂದ ನಿಜಾಮಾಬಾದ್ ಲೋಕಸಭೆಯಲ್ಲಿ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ಸಹ ಸೋತಿದ್ದರು ಎಂದು ರಾಜೇಂದರ್ ನೆನಪಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com