ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲು ಸೀರಮ್ ಇನ್‌ಸ್ಟಿಟ್ಯೂಟ್​ಗೆ ಡಿಸಿಜಿಐ ಷರತ್ತುಬದ್ಧ ಅನುಮತಿ!

ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ತಯಾರಿಕೆಗೆ ಕೆಲವು ಷರತ್ತುಗಳೊಂದಿಗೆ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯ (ಡಿಸಿಜಿಐ) ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಸ್ಥೆಗೆ ಅನುಮತಿ ನೀಡಿದೆ.
ಸ್ಪುಟ್ನಿಕ್ ವಿ
ಸ್ಪುಟ್ನಿಕ್ ವಿ

ನವದೆಹಲಿ: ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆ ತಯಾರಿಕೆಗೆ ಕೆಲವು ಷರತ್ತುಗಳೊಂದಿಗೆ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯ (ಡಿಸಿಜಿಐ) ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಸ್ಥೆಗೆ ಅನುಮತಿ ನೀಡಿದೆ. 

ಈಗಾಗಲೇ ದೇಶದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿರುವ ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಸ್ಥೆ ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆ ಮತ್ತು ಲಸಿಕೆಯ ವಿಶ್ಲೇಷಣೆ ಮತ್ತು ಪರೀಕ್ಷೆಗೆ ಅನುಮೋದನೆ  ನೀಡುವಂತೆ ಡಿಸಿಜಿಐಗೆ ನಿನ್ನೆ ಮನವಿ ಮಾಡಿತ್ತು. 

ಪುಣೆ ಮೂಲದ ಸಂಸ್ಥೆಯು ಹಡಪ್ಸರ್ ಸೌಲಭ್ಯದಲ್ಲಿ ಸ್ಪುಟ್ನಿಕ್ ವಿ ಅನ್ನು ಅಭಿವೃದ್ಧಿಪಡಿಸಲು ರಷ್ಯಾದ ಮಾಸ್ಕೋದ ಗಮಲೇಯ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿಯೊಂದಿಗೆ ಸಹಯೋಗ ಹೊಂದಿದೆ.

ಡಿಸಿಜಿಐ ನಿಗದಿಪಡಿಸಿದ ನಾಲ್ಕು ಷರತ್ತುಗಳ ಪ್ರಕಾರ, ಸೆರಮ್ ಇನ್ಸ್ಟಿಟ್ಯೂಟ್ ಮತ್ತು ಗಮಲೇಯ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ನಡುವಿನ ಒಪ್ಪಂದದ ಪ್ರತಿಯನ್ನು ಸೆಲ್ ಬ್ಯಾಂಕ್ ಮತ್ತು ವೈರಸ್ ಸ್ಟಾಕ್ ವರ್ಗಾವಣೆಗಾಗಿ ತಂತ್ರಜ್ಞಾನ ವರ್ಗಾವಣೆಗೆ ಒಪ್ಪಂದದ ನಕಲನ್ನು ಸಲ್ಲಿಸಬೇಕಾಗುತ್ತದೆ. ಇದಲ್ಲದೆ, ಎಸ್‌ಐಐ ಸೆಲ್ ಬ್ಯಾಂಕ್ ಮತ್ತು ವೈರಸ್ ಸ್ಟಾಕ್ ಅನ್ನು ಆಮದು ಮಾಡಿಕೊಳ್ಳಲು ಬಯೋಟೆಕ್ನಾಲಜಿ ವಿಭಾಗದ ಜೆನೆಟಿಕ್ ಮ್ಯಾನಿಪ್ಯುಲೇಷನ್(ಆರ್‌ಸಿಜಿಎಂ) ಅನುಮತಿಯ ಪ್ರತಿ, ವೈರಲ್ ವೆಕ್ಟರ್ ಲಸಿಕೆ ಸ್ಪುಟ್ನಿಕ್ ವಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಪ್ರಾರಂಭಿಸಲು ಆರ್‌ಸಿಜಿಎಂ ಅನುಮತಿಯ ನಕಲನ್ನು ಸಲ್ಲಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಪರವಾನಗಿಯನ್ನು ಅಮಾನತುಗೊಳಿಸದ ಅಥವಾ ಹಿಂತೆಗೆದುಕೊಳ್ಳದ ಹೊರತು, ಜೂನ್ 4ರಂದು ವಿತರಿಸಿದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಜಾರಿಗೊಳಿಸಲಾಗುತ್ತದೆ. ಎಸ್‌ಐಐ ಮೇ 18ರಂದು ಸೆಲ್ ಬ್ಯಾಂಕುಗಳ ಆಮದು ಅನುಮತಿ, ಸಂಶೋಧನೆ ಮತ್ತು ಅಭಿವೃದ್ಧಿಗೆ ಅನುಮತಿ ಕೋರಿ ಆರ್‌ಸಿಜಿಎಂ ಪರಿಶೀಲನಾ ಸಮಿತಿಗೆ ಅರ್ಜಿ ಸಲ್ಲಿಸಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಆರ್‌ಸಿಜಿಎಂ ಸೀರಮ್ ಸಲ್ಲಿಸಿದ್ದ ಅರ್ಜಿಯ ಕುರಿತು ಕೆಲವು ಪ್ರಶ್ನೆಗಳನ್ನು ಎತ್ತಿದ್ದು, ಸೀರಮ್ ಸಂಸ್ಥೆ ಮತ್ತು ಗಮಲೇಯ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ನಡುವೆ ವಸ್ತು ವರ್ಗಾವಣೆ ಒಪ್ಪಂದದ ನಕಲನ್ನು ಕೋರಿದೆ.

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಪ್ರಸ್ತುತ ಭಾರತದ ಡಾ. ರೆಡ್ಡಿ ಅವರ ಪ್ರಯೋಗಾಲಯಗಳು ತಯಾರಿಸುತ್ತಿವೆ. ಭಾರತದಲ್ಲಿ ಲಸಿಕೆಯ ನಿರ್ಬಂಧಿತ ತುರ್ತು ಬಳಕೆಯ ಅನುಮತಿಯನ್ನು ಪಡೆಯಲು ಎಸ್‌ಐಐ ಯೋಜಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com