'ನನಗೆ 55 ಲಕ್ಷ ರೂ. ಪಾವತಿಸಿ ಇಲ್ಲವೆ ಬಾಂಬ್ ಸ್ಫೋಟಿಸುವೆ' ಎಂದು ಬ್ಯಾಂಕ್ ಸಿಬ್ಬಂದಿಗೆ ಬೆದರಿಕೆ ಹಾಕಿದವ ಸೆರೆ

ಮಹಾರಾಷ್ಟ್ರದ ವಾರ್ಧಾದಲ್ಲಿನ ಬ್ಯಾಂಕೊಂದಕ್ಕೆ ವ್ಯಕ್ತಿಯೊಬ್ಬ ಮಾಸ್ಕ್ ಧರಿಸಿ ಆಗಮಿಸಿದ್ದು ಒಂದು ಕಾಗದದ ತುಂಡನ್ನು ಸಿಬ್ಬಂದಿಗೆ ಹಸ್ತಾಂತರಿಸಿದ ನಂತರ ಅಲ್ಲೊಂದು ಸಿನಿಮೀಯ ಘಟನೆ ನಡೆದಿದೆ. ಇನ್ನು 15 ನಿಮಿಷಗಳಲ್ಲಿ ತನಗೆ , 55 ಲಕ್ಷ ರೂ.ಗಳ ಪಾವತಿ ಮಾಡದಿದ್ದರೆ ತಾನು ಸಾಗಿಸುತ್ತಿದ್ದ ಬಾಂಬ್ ಅನ್ನು ಇಲ್ಲೇ ಸ್ಫೋಟಿಸುವುದಾಗಿ ಹೇಳಿದ್ದಾಗಿ ಪೊಲೀಸರು ಶನಿವಾರ ತಿಳಿಸಿದ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾರ್ಧಾ: (ಮಹಾರಾಷ್ಟ್ರ): ಮಹಾರಾಷ್ಟ್ರದ ವಾರ್ಧಾದಲ್ಲಿನ ಬ್ಯಾಂಕೊಂದಕ್ಕೆ ವ್ಯಕ್ತಿಯೊಬ್ಬ ಮಾಸ್ಕ್ ಧರಿಸಿ ಆಗಮಿಸಿದ್ದು ಒಂದು ಕಾಗದದ ತುಂಡನ್ನು ಸಿಬ್ಬಂದಿಗೆ ಹಸ್ತಾಂತರಿಸಿದ ನಂತರ ಅಲ್ಲೊಂದು ಸಿನಿಮೀಯ ಘಟನೆ ನಡೆದಿದೆ. ಇನ್ನು 15 ನಿಮಿಷಗಳಲ್ಲಿ ತನಗೆ , 55 ಲಕ್ಷ ರೂ.ಗಳ ಪಾವತಿ ಮಾಡದಿದ್ದರೆ ತಾನು ಸಾಗಿಸುತ್ತಿದ್ದ ಬಾಂಬ್ ಅನ್ನು ಇಲ್ಲೇ ಸ್ಫೋಟಿಸುವುದಾಗಿ ಹೇಳಿದ್ದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಸೇವಾಗ್ರಾಮ್ ನ ಬ್ಯಾಂಕ್‌ವೊಂದರಲ್ಲಿ ಈ ಘಟನೆ ನಡೆದಿದ್ದು, ಅಧಿಕಾರಿಯೊಬ್ಬರು, "ಆತ್ಮಹತ್ಯಾ ಬಾಂಬರ್" ಮಾರಕ ಕಾಯಿಲೆಯಿಂದ ಬಳಲುತ್ತಿದ್ದುದಾಗಿ ಚಿಕಿತ್ಸೆಗೆ ದೊಡ್ಡ ಪ್ರಮಾಣದ ಹಣದ ಅವಶ್ಯಕತೆಯಿದೆ ಎಂದು ಬರೆದ ಪತ್ರವೊಂದನ್ನು ನೀಡಿದ್ದಾನೆ" ಎಂದರು.

ಬ್ಯಾಂಕ್ ಪೋಲೀಸ್ ಠಾಣೆಯ ಎದುರಿಗೆ ಇದೆ.ಮತ್ತು ಆರೋಪಿಗಳು ಬೆದರಿಕೆ ಹಾಕುವ ಬಗ್ಗೆ ಸಹ ಸಿಬ್ಬಂದಿ ಪೋಲೀಸರಿಗೆ ತಿಳಿಸಲು ಯಶಸ್ವಿಯಾಗಿದ್ದಾರೆ.

ಸಧ್ಯ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನಿಂದ ಡಿಜಿಟಲ್ ವಾಚ್ ಮತ್ತು ನಕಲಿ ಬಾಂಬ್ ಮತ್ತು ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ತುಂಬಿದ ಆರು ಕೊಳವೆಗಳನ್ನು ಒಳಗೊಂಡ ನಕಲಿ ಬಾಂಬ್, ಒಂದು ಚಾಕು ಮತ್ತು ಏರ್ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಂಧಿತನನ್ನು ಸೈಬರ್ ಕೆಫೆ ನಡೆಸುತ್ತಿರುವ ಯೋಗೇಶ್ ಕುಬಾಡೆ ಎಂದು ಗುರುತಿಸಲಾಗಿದೆ. ಸಾಲವನ್ನು ಮರುಪಾವತಿಗೆ ಅವನು ಹೆಣಗಿತ್ತಿದ್ದ, ಆನ್‌ಲೈನ್‌ನಲ್ಲಿ ನೋಡಿ ನಕಲಿ ಬಾಂಬ್ ತಯಾರಿಕೆ ನಡೆಸಲು ಉದ್ದೇಶಿಸಿದ್ದಾನೆ. ಎಂದು ಸಬ್ ಇನ್ಸ್‌ಪೆಕ್ಟರ್ ಗಣೇಶ್ ಸಾಯಕರ್ ಹೇಳಿದ್ದಾರೆ. ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸೇವಾಗ್ರಾಮ್  ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com