ಉಪರಾಷ್ಟ್ರಪತಿ ನಾಯ್ಡು ಬಳಿಕ ಆರ್‌ಎಸ್‌ಎಸ್ ಮುಖಂಡ ಭಾಗವತ್ ಖಾತೆಯ 'ಬ್ಲೂ ಟಿಕ್' ತೆಗೆದ ಟ್ವಿಟ್ಟರ್

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ವೈಯಕ್ತಿಕ ಖಾತೆಯಿಂದ ಅಲ್ಲದೆ ಸಂಘಟನೆಯ ಹಲವಾರು ನಾಯಕರ ಖಾತೆಗಳಿಂದ "ಬ್ಲೂ ಟಿಕ್" ಬ್ಯಾಡ್ಜ್ ಅನ್ನು ಟ್ವಿಟ್ಟರ್ ಶನಿವಾರ ತೆಗೆದುಹಾಕಿದೆ.
ಮೋಹನ್ ಭಾಗವತ್ ಟ್ವಿಟ್ಟರ್  ಹ್ಯಾಂಡಲ್
ಮೋಹನ್ ಭಾಗವತ್ ಟ್ವಿಟ್ಟರ್ ಹ್ಯಾಂಡಲ್

ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ವೈಯಕ್ತಿಕ ಖಾತೆಯಿಂದ ಅಲ್ಲದೆ ಸಂಘಟನೆಯ ಹಲವಾರು ನಾಯಕರ ಖಾತೆಗಳಿಂದ "ಬ್ಲೂ ಟಿಕ್" ಬ್ಯಾಡ್ಜ್ ಅನ್ನು ಟ್ವಿಟ್ಟರ್ ಶನಿವಾರ ತೆಗೆದುಹಾಕಿದೆ.

ಇದಕ್ಕೆ ಮುನ್ನ ಮೈಕ್ರೋಬ್ಲಾಗಿಂಗ್ ಸೈಟ್ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಖಾತೆಯ "ಬ್ಲೂ ಟಿಕ್" ತೆಗೆದುಹಾಕಿತ್ತು.

ಟ್ವಿಟ್ಟರ್ ಹ್ಯಾಂಡಲ್‌ಗಳಲ್ಲಿನ "ಬ್ಲೂ ಟಿಕ್" ಎಂದರೆ ಸಾಮಾಜಿಕ ಮಾಧ್ಯಮ ಖಾತೆಯು ಅಧಿಕೃತವಾಗಿದೆ ಎಂದು ಜನರಿಗೆ ಮನವರಿಕೆ ಮಾಡುವುದಾಗಿದೆ.

ಒಬ್ಬರು "ಬ್ಲೂ ಟಿಕ್" ಬ್ಯಾಡ್ಜ್ ಸ್ವೀಕರಿಸಲು ವ್ಯಕ್ತಿಯ ಖಾತೆಯು ಅಧಿಕೃತ, ಗಮನಾರ್ಹ ಮತ್ತು ಸಕ್ರಿಯವಾಗಿರಬೇಕು.

ಸಂಘ ಮೂಲಗಳ ಪ್ರಕಾರ, ಕಳೆದ ಹಲವು ದಿನಗಳಿಂದ ಟ್ವಿಟ್ಟರ್  ಅನೇಕ ಆರ್‌ಎಸ್‌ಎಸ್ ನಾಯಕರ ಖಾತೆಗಳಿಂದ "ಬ್ಲೂ ಟಿಕ್" ಬ್ಯಾಡ್ಜ್ ಅನ್ನು ತೆಗೆದುಹಾಕಿದೆ, ಅವರ ಖಾತೆಗಳನ್ನು 2019 ರಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆ ಪರಿಶೀಲನೆ ನಡೆಸಿದೆ. ಈ ಪಟ್ಟಿಯಲ್ಲಿ ಗೋಪಾಲ್ ಕೃಷ್ಣ, ಅರುಣ್ ಕುಮಾರ್, ಮತ್ತು ಮಾಜಿ ನಾಯಕರಾದ ಸುರೇಶ್ ಸೋನಿ ಮತ್ತು ಸುರೇಶ್ ಬಿ ಜೋಶಿ ಸೇರಿದಂತೆ ಪ್ರಮುಖ ಸಂಘ ನಾಯಕರು ಸೇರಿದ್ದಾರೆ. ಆರ್‌ಎಸ್‌ಎಸ್ ನಾಯಕ ರಾಜೀವ್ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.

"ಟ್ವಿಟ್ಟರ್ ಅನೇಕ ಆರ್‌ಎಸ್‌ಎಸ್ ಕಾರ್ಯಕರ್ತರ ಖಾತೆಗಳಿಂದ ಪರಿಶೀಲನಾ ಅಂಕಗಳನ್ನು ಹಿಂತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ನಾವು ಟ್ವಿಟ್ಟರ್ ಅನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ ಆದರೆ ಯಾರೂ ಪ್ರತಿಕ್ರಿಯಿಸಲಿಲ್ಲ" ಎಂದು ಅವರು ಹೇಳಿದರು.

13 ಲಕ್ಷ ಅನುಯಾಯಿಗಳನ್ನು ಹೊಂದಿರುವ ಭಾರತದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟ್ಟರ್ ಹ್ಯಾಂಡಲ್‌ನಿಂದ ಟ್ವಿಟ್ಟರ್ "ಬ್ಲೂ ಟಿಕ್" ಅನ್ನು ತೆಗೆದುಹಾಕಿ ಮತ್ತೆ ಮರಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com