ಗಡಿ ನಿವಾಸಿಗಳಿಗಾಗಿ 8000 ಬಂಕರ್ ಗಳ ನಿರ್ಮಿಸಿದ ಸೇನೆ; ಸಂಘರ್ಷ ಸಂದರ್ಭದಲ್ಲಿ ಬಳಕೆಗೆ ಅನುಕೂಲ

ಸಂಘರ್ಷದ ಸಂದರ್ಭದಲ್ಲಿ ಗಡಿಯಲ್ಲಿ ಗ್ರಾಮಸ್ಥರು ಜೀವ ಉಳಿಸಿಕೊಳ್ಳಲು ಭಾರತೀಯ ಸೇನೆ ಗಡಿಯಲ್ಲಿ ಸುಮಾರು 8000 ಬಂಕರ್ ಗಳನ್ನು ನಿರ್ಮಾಣ ಮಾಡಿದೆ.
ಗಡಿಯಲ್ಲಿ ಬಂಕರ್ ನಿರ್ಮಾಣ
ಗಡಿಯಲ್ಲಿ ಬಂಕರ್ ನಿರ್ಮಾಣ

ಶ್ರೀನಗರ: ಸಂಘರ್ಷದ ಸಂದರ್ಭದಲ್ಲಿ ಗಡಿಯಲ್ಲಿ ಗ್ರಾಮಸ್ಥರು ಜೀವ ಉಳಿಸಿಕೊಳ್ಳಲು ಭಾರತೀಯ ಸೇನೆ ಗಡಿಯಲ್ಲಿ ಸುಮಾರು 8000 ಬಂಕರ್ ಗಳನ್ನು ನಿರ್ಮಾಣ ಮಾಡಿದೆ.

ಹೌದು.. ಜಮ್ಮು ಪ್ರಾಂತ್ಯದ ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ವಾಸಿಸುವ ಗ್ರಾಮಸ್ಥರ ಸುರಕ್ಷತೆಗಾಗಿ ಭಾರತೀಯ ಸೇನೆ ಸುಮಾರು 8,000 ಭೂಗರ್ಭ ಬಂಕರ್‌ಗಳನ್ನು ನಿರ್ಮಾಣ ಮಾಡಿದೆ ಎಂದು ಸೇನಾಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಇದನ್ನೂ ಓದಿ: ಯುದ್ಧದ ಸ್ವರೂಪ ಬದಲಾಗುತ್ತಿರುವ ಸನ್ನಿವೇಶದಲ್ಲಿ ಸೇನೆಯ ಮೂರೂ ಪಡೆಗಳ ಜಂಟಿ ಕಾರ್ಯಾಚರಣೆ ಮುಖ್ಯ: ನೌಕಾಪಡೆ ಮುಖ್ಯಸ್ಥ 
  
ಜಮ್ಮು, ಕಥುವಾ ಮತ್ತು ಸಾಂಬಾ ಸೇರಿದಂತೆ ಒಟ್ಟು ಐದು ಜಿಲ್ಲೆಗಳಲ್ಲಿನ ಗಡಿ ನಿವಾಸಿಗಳಿಗೆ 14,460 ವೈಯುಕ್ತಿಕ ಮತ್ತು ಸಮುದಾಯ ಬಂಕರ್‌ಗಳನ್ನು ನಿರ್ಮಿಸಲು ಈ ಹಿಂದೆ ಕೇಂದ್ರವು ಅನುಮತಿ ನೀಡಿತ್ತು. ಬಳಿಕ ಮತ್ತೆ ಹೆಚ್ಚು ಹೆಚ್ಚುವರಿ 4,000 ಬಂಕರ್‌ಗಳನ್ನು ಮಂಜೂರು ಮಾಡಿತ್ತು. ಇದೀಗ ಸೇನೆ  ಸುಮಾರು 8,000 ಭೂಗರ್ಭ ಬಂಕರ್‌ಗಳ ನಿರ್ಮಾಣ ಪೂರ್ಣಗೊಳಿಸಿದೆ. ಜಮ್ಮು ವಿಭಾಗದಲ್ಲಿ ಈವರೆಗೆ 6,964 ವೈಯಕ್ತಿಕ ಮತ್ತು 959 ಸಮುದಾಯ ಬಂಕರ್‌ಗಳು ಸೇರಿದಂತೆ ಒಟ್ಟು 7,923 ಬಂಕರ್‌ಗಳು ಪೂರ್ಣಗೊಂಡಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಜಮ್ಮು ವಿಭಾಗೀಯ ಆಯುಕ್ತ ರಾಘವ್ ಲ್ಯಾಂಗರ್ ಅವರು ಸುರಕ್ಷತಾ ರಚನೆಗಳ ನಿರ್ಮಾಣದ ಪ್ರಗತಿಯನ್ನು ಪರಿಶೀಲಿಸಿದ ಬಳಿಕ ಮಾಹಿತಿ ನೀಡಿದರು. ಬಳಿಕ ಮಾತನಾಡಿದ ಅವರು, ಈ ವರೆಗೂ ಒಟ್ಟು 7,923 ಬಂಕರ್‌ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ನಿರ್ಮಾಣದ ವಿವಿಧ ಹಂತಗಳಲ್ಲಿರುವ  9,905 ಬಂಕರ್‌ಗಳ ಕೆಲಸವೂ ಪ್ರಗತಿಯಲ್ಲಿದೆ. ಸಾಂಬಾದಲ್ಲಿ 1,592, ಜಮ್ಮುವಿನಲ್ಲಿ 1,228, ಕಥುವಾದಲ್ಲಿ 1,521, ರಾಜೌರಿಯಲ್ಲಿ 2,656 ಮತ್ತು ಪೂಂಚ್‌ನಲ್ಲಿ 926 ಬಂಕರ್‌ಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.

ಅಂತೆಯೇ ಬಾಕಿ ಉಳಿದಿರುವ ಬಂಕರ್‌ಗಳ ಕಾಮಗಾರಿ ಟೆಂಡರ್ ವಿಳಂಬದ ಬಗ್ಗೆಯೂ ಮಾತನಾಡಿದ ಲ್ಯಾಂಗರ್, ಬಂಕರ್‌ಗಳ ನಿರ್ಮಾಣಕ್ಕಾಗಿ ಟೆಂಡರ್‌ಗಳನ್ನು ಕರೆಯುವಂತೆ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. ಅಂತೆಯೇ ಈಗಾಗಲೇ ಕಾರ್ಯರೂಪಕ್ಕೆ ಬಂದಿರುವ  ಕೆಲಸವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವಂತೆ ವಿಭಾಗೀಯ ಆಯುಕ್ತರು ಉಪ ಆಯುಕ್ತರಿಗೆ ನಿರ್ದೇಶನ ನೀಡಿದರು, ಕಾರ್ಯಗತಗೊಳಿಸುವ ಏಜೆನ್ಸಿಗಳಿಗೆ ಕೆಲಸದ ವೇಗವನ್ನು ತ್ವರಿತಗೊಳಿಸಲು ಮತ್ತು ಪೂರ್ಣಗೊಳ್ಳಲು ನಿಗದಿತ ಸಮಯವನ್ನು ಅನುಸರಿಸಲು ತಿಳಿಸಲಾಗಿದೆ.

ಈ ವರ್ಷ ಫೆಬ್ರವರಿ 25 ರಂದು ಗಡಿಗಳಲ್ಲಿ ಶಾಂತಿ ಕಾಪಾಡಿಕೊಳ್ಳಲು ಭಾರತ ಮತ್ತು ಪಾಕಿಸ್ತಾನ ಹೊಸ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮೂರು ತಿಂಗಳುಗಳಲ್ಲಿ ಯಾವುದೇ ದೊಡ್ಡ ಕದನ ವಿರಾಮ ಉಲ್ಲಂಘನೆ ನಡೆದಿಲ್ಲ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com