15 ರಾಜ್ಯಗಳಿಗೆ 26, 281 ಟನ್ ಆಕ್ಸಿಜನ್ ಪೂರೈಕೆ ಮಾಡಿರುವ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು!

ದೇಶದ ಒಟ್ಟು 15 ರಾಜ್ಯಗಳಿಗೆ ಭಾರತೀಯ ರೈಲ್ವೆಯ ಆಕ್ಸಿಜನ್ ಎಕ್ಸ್ ಪ್ರೆಸ್ ವಿಶೇಷ ರೈಲು 26 ಸಾವಿರ ಟನ್ ಗೂ ಅಧಿಕ ವೈದ್ಯಕೀಯ ಆಮ್ಲಜನಕವನ್ನು ಪೂರೈಕೆ ಮಾಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಆಕ್ಸಿಜನ್ ಎಕ್ಸ್ ಪ್ರೆಸ್
ಆಕ್ಸಿಜನ್ ಎಕ್ಸ್ ಪ್ರೆಸ್

ನವದೆಹಲಿ: ದೇಶದ ಒಟ್ಟು 15 ರಾಜ್ಯಗಳಿಗೆ ಭಾರತೀಯ ರೈಲ್ವೆಯ ಆಕ್ಸಿಜನ್ ಎಕ್ಸ್ ಪ್ರೆಸ್ ವಿಶೇಷ ರೈಲು 26 ಸಾವಿರ ಟನ್ ಗೂ ಅಧಿಕ ವೈದ್ಯಕೀಯ ಆಮ್ಲಜನಕವನ್ನು ಪೂರೈಕೆ ಮಾಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಸಾರಿಗೆ ಸಚಿವಾಲಯ, ದೇಶದ ಒಟ್ಟು 15 ರಾಜ್ಯಗಳಿಗೆ 26,281 ಟನ್ ದ್ರವ ವೈದ್ಯಕೀಯ ಆಮ್ಲಜನಕ (LMO-Liquid Medical oxygen)ವನ್ನು ತಲುಪಿಸಿದೆ. ಅಂತೆಯೇ ದೇಶದ 39 ನಗರಗಳಿಗೆ ಟ್ಯಾಂಕರ್‌ಗಳ ಮುಖಾಂತರ 1,534 ಟ್ಯಾಂಕ್  ಆಮ್ಲಜನಕವನ್ನು ತಲುಪಿಸಲಾಗಿದೆ. 376 ರೈಲುಗಳು ಈ ಯೋಜನೆಯಲ್ಲಿ ಪಾಲ್ಗೊಂಡಿದ್ದು, ಪ್ರಸ್ತುತ 6 ಲೋಡೆಡ್ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳು 483 ಟನ್ ಆಮ್ಲಜನಕವನ್ನು 26 ಟ್ಯಾಂಕರ್ ಗಳ ಮೂಲಕ ರವಾನಿಸುತ್ತಿದೆ.

ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು ಮತ್ತು ಕರ್ನಾಟಕಕ್ಕೆ ಆಕ್ಸಿಜನ್ ಎಕ್ಸ್‌ಪ್ರೆಸ್‌ನಿಂದ ತಲಾ 3,000 ಟನ್‌ಗಿಂತ ಹೆಚ್ಚು ಆಮ್ಲಜನಕವನ್ನು ಸರಬರಾಜು ಮಾಡಲಾಗಿದ್ದು, ಆಂಧ್ರಪ್ರದೇಶಕ್ಕೆ 2,800 ಟನ್‌ಗಿಂತ ಹೆಚ್ಚು ಆಕ್ಸಿಜನ್ ಪೂರೈಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಕಳೆದ ಏಪ್ರಿಲ್ 24 ರಂದು ಮಹಾರಾಷ್ಟ್ರಕ್ಕೆ ಮೊದಲ ಬಾರಿಗೆ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು 126 ಟನ್ ಆಕ್ಸಿಜನ್ ವಿತರಣೆ ಮಾಡುವ ಮೂಲಕ ತನ್ನ ಕೆಲಸ ಆರಂಭಿಸಿತ್ತು. ಆ ಬಳಿಕ ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ತೆಲಂಗಾಣ,  ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಅಸ್ಸಾಂ ರಾಜ್ಯಗಳಿಗೆ ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಈವರೆಗೂ 614 ಟನ್ ಆಮ್ಲಜನಕ ಪೂರೈಕೆ ಮಾಡಲಾಗಿದ್ದು, ಉತ್ತರಪ್ರದೇಶದಲ್ಲಿ ಸುಮಾರು 3,797 ಟನ್, ಮಧ್ಯಪ್ರದೇಶದಲ್ಲಿ 656 ಟನ್, ದೆಹಲಿಯಲ್ಲಿ  5,790 ಟನ್, ಹರಿಯಾಣದಲ್ಲಿ 2,212 ಟನ್, ರಾಜಸ್ಥಾನದಲ್ಲಿ 98 ಟನ್, ಕರ್ನಾಟಕದಲ್ಲಿ 3,097 ಟನ್, ಉತ್ತರಾಖಂಡದಲ್ಲಿ 320 ಟನ್, ತಮಿಳುನಾಡಿನಲ್ಲಿ 3,237 ಟನ್, ಆಂಧ್ರಪ್ರದೇಶದಲ್ಲಿ 2,804 ಟನ್, ಪಂಜಾಬ್ ನಲ್ಲಿ 225 ಟನ್, ಕೇರಳದಲ್ಲಿ 513 ಟನ್, ತೆಲಂಗಾಣದಲ್ಲಿ 2,474 ಟನ್, ಜಾರ್ಖಂಡ್ ನಲ್ಲಿ 38 ಟನ್  ಮತ್ತು ಅಸ್ಸಾಂನಲ್ಲಿ 400 ಟನ್ ಆಕ್ಸಿಜನ್ ಪೂರೈಕೆ ಮಾಡಲಾಗಿದೆ.

ಭಾರತೀಯ ರೈಲ್ವೆ ಹಪಾ, ಬರೋಡಾ, ಮುಂಡ್ರಾ ಮತ್ತು ಪೂರ್ವದ ರೂರ್ಕೆಲಾ, ದುರ್ಗಾಪುರ, ಟಾಟಾನಗರ, ಅಂಗುಲ್ ಮುಂತಾದ ಜಿಲ್ಲೆಗಳಿಂದ ಆಮ್ಲಜನಕವನ್ನು ತೆಗೆದುಕೊಂಡು ನಂತರ ಅದನ್ನು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ,  ತೆಲಂಗಾಣ, ಪಂಜಾಬ್, ಕೇರಳ, ದೆಹಲಿ, ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಿಗೆ ತಲುಪಿಸುತ್ತಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com