ಮಕ್ಕಳ ಮೇಲೆ ಕೊವಾಕ್ಸಿನ್ ಲಸಿಕೆ ಪ್ರಯೋಗ: ಪರೀಕ್ಷೆ ಆರಂಭಿಸಿದ ದೆಹಲಿಯ ಏಮ್ಸ್ ಸಂಸ್ಥೆ

ಭಾರತದ ಮೊದಲ ಸ್ವದೇಶಿ ಕೋವಿಡ್-19 ಲಸಿಕೆ ಕೊವಾಕ್ಸಿನ್ ನ್ನು 2 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಲಾಗುವುದು ಎಂದು ದೆಹಲಿಯ ಏಮ್ಸ್ ಸಂಸ್ಥೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದ ಮೊದಲ ಸ್ವದೇಶಿ ಕೋವಿಡ್-19 ಲಸಿಕೆ ಕೊವಾಕ್ಸಿನ್ ನ್ನು 2ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಲಾಗುವುದು ಎಂದು ದೆಹಲಿಯ ಏಮ್ಸ್ ಸಂಸ್ಥೆ ತಿಳಿಸಿದೆ.

ಪಾಟ್ನಾದ ಏಮ್ಸ್ ಸಂಸ್ಥೆಯಲ್ಲಿ ಈಗಾಗಲೇ ಮಕ್ಕಳ ಮೇಲೆ ಕೊವಾಕ್ಸಿನ್ ಪ್ರಯೋಗ ಆರಂಭವಾಗಿದ್ದು ಭಾರತ್ ಬಯೋಟೆಕ್ ಸ್ವದೇಶಿ ಸಂಸ್ಥೆಯ ಲಸಿಕೆ ಮಕ್ಕಳಿಗೆ ಹೊಂದಾಣಿಕೆಯಾಗುತ್ತದೆಯೇ ಎಂದು ಪರೀಕ್ಷೆ ಮಾಡಲಾಗುತ್ತಿದೆ. ತಪಾಸಣೆ ವರದಿ ಬಂದ ಮೇಲೆ ಯಾವ್ಯಾವ ಮಕ್ಕಳ ಮೇಲೆ ಪ್ರಯೋಗ ನಡೆಯಿತು ಎಂದು ಏಮ್ಸ್ ಬಹಿರಂಗಪಡಿಸಲಿದೆ.

ಈ ಪ್ರಯೋಗವನ್ನು 525 ಆರೋಗ್ಯ ಕಾರ್ಯಕರ್ತರ ಮೇಲೆ ಪರೀಕ್ಷೆ ಮಾಡಲಾಗುತ್ತಿದೆ. ಪ್ರಯೋಗದಲ್ಲಿ ಲಸಿಕೆಯನ್ನು ಸೊನ್ನೆಯಿಂದ 28 ದಿನಗಳಲ್ಲಿ ಎರಡು ಡೋಸ್ ಗಳಲ್ಲಿ ಇಂಟ್ರಾಮಸ್ಕುಲರ್ ಮಾರ್ಗದ ಮೂಲಕ ನೀಡಲಾಗುತ್ತದೆ.

ಮಕ್ಕಳ ಮೇಲೆ ಕೊವಾಕ್ಸಿನ್ ಪ್ರಯೋಗ ಆರಂಭವಾಗಿದೆ. ಭಾಗವಹಿಸಿದ ಮಕ್ಕಳ ವಿವರ ತಪಾಸಣೆ ವರದಿ ಬಂದ ಮೇಲೆ ನೀಡಲಾಗುವುದು ಎಂದು ಏಮ್ಸ್ ನ ಸಮುದಾಯ ವೈದ್ಯಕೀಯ ಕೇಂದ್ರದ ಪ್ರೊಫೆಸರ್ ಡಾ ಸಂಜಯ್ ರೈ ತಿಳಿಸಿದ್ದಾರೆ.

ಭಾರತದ ಡ್ರಗ್ ಪ್ರಾಧಿಕಾರ 2ರಿಂದ 18 ವರ್ಷದೊಳಗಿನವರಿಗೆ 2 ಮತ್ತು ಮೂರನೇ ಹಂತಗಳಲ್ಲಿ ಕೊವಾಕ್ಸಿನ್ ನ ಪ್ರಾಯೋಗಿಕ ಪರೀಕ್ಷೆಗೆ ಕಳೆದ ಮೇ 12ರಂದು ಅನುಮತಿ ನೀಡಿತ್ತು. ಸದ್ಯ ಭಾರತದಲ್ಲಿ ಕೊವಾಕ್ಸಿನ್ ನ್ನು ವಯಸ್ಕರಿಗೆ ಬಳಕೆಗೆ ಮಾತ್ರ ಅನುಮತಿ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com