ರೈಲು ಪ್ರಯಾಣಿಕರ ಗಮನಕ್ಕೆ: ಹಲವು ರೈಲುಗಳು ರದ್ದು, ಇನ್ನೂ ಕೆಲವು ರೈಲುಗಳ ಪರಿಷ್ಕೃತ ವೇಳಾಪಟ್ಟಿ ಹೀಗಿದೆ..

ಭಾರತೀಯ ರೈಲ್ವೆಯ ಹಲವು ರೈಲುಗಳು ರದ್ದಾಗಿದ್ದು ಇನ್ನೂ ಕೆಲವು ರೈಲುಗಳ ವೇಳಾಪಟ್ಟಿ ಪರಿಷ್ಕೃತಗೊಂಡಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತೀಯ ರೈಲ್ವೆಯ ಹಲವು ರೈಲುಗಳು ರದ್ದಾಗಿದ್ದು ಇನ್ನೂ ಕೆಲವು ರೈಲುಗಳ ವೇಳಾಪಟ್ಟಿ ಪರಿಷ್ಕೃತಗೊಂಡಿವೆ.

ಉತ್ತರ ರೈಲ್ವೆ ಈ ಬಗ್ಗೆ ಮಾಹಿತಿ ಪ್ರಕಟಿಸಿದ್ದು, ಅಂಬಾಲ ವಿಭಾಗದ ರೈಲ್ವೆ  ಸರ್ಹಿಂದ್ ಸ್ಟೇಷನ್ ನ ಇಂಟರ್ ಲಾಕಿಂಗ್ ಅಲ್ಲದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಹಲವು ರೈಲುಗಳ ವೇಳಾಪಟ್ಟಿ ಬದಲಾಗಿದೆ.

ಪಿಲ್ಖಾನಿ-ಸನೇಹ್ವಾಲ್ ನ ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಡಿಎಫ್ಸಿಸಿಐಎಲ್)  ಕಾಮಗಾರಿಗೆ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ಕಾಮಗಾರಿ ನಡೆಯಲಿದೆ.

ಈ ಕಾಮಗಾರಿ ನಡೆಯಬೇಕಿರುವ ಹಿನ್ನೆಲೆಯಲ್ಲಿ ಜೂ.30 ವರೆಗೂ ರೈಲುಗಳ ವೇಳಾಪಟ್ಟಿಯಲ್ಲಿ ವ್ಯತ್ಯಯವಿರಲಿದೆ. ಈ ಪೈಕಿ ಕೆಲವು ರೈಲು ಮಾರ್ಗಗಳಲ್ಲಿ ರೈಲು ಸಂಚಾರ ಪೂರ್ಣ ಸ್ಥಗಿತಗೊಂಡರೆ ಇನ್ನೂ ಕೆಲವು ಭಾಗಶಃ ರದ್ದಾಗಲಿದೆ. ಮತ್ತೂ ಕೆಲವು ರೈಲುಗಳ ವೇಳಾಪಟ್ಟಿ ವ್ಯತ್ಯಯವಾಗಲಿದೆ. ಕೋವಿಡ್-19 ಹಿನ್ನೆಲೆಯಲ್ಲಿ ರೈಲುಗಳನ್ನು ಏಪ್ರಿಲ್ ತಿಂಗಳಿನಿಂದ ರದ್ದುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಎರಡನೆ ಅಲೆಯಲ್ಲಿ 100 ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com