ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ

ಸ್ನೇಹಿತೆಯನ್ನು ನೋಡಲು ಹೋಗಿದ್ದಾಗ 8 ರಿಂದ 10 ಮಂದಿಯಿಂದ ನನ್ನ ಮೇಲೆ ಮಾರಣಾಂತಿಕ ಹಲ್ಲೆ: ಮೆಹುಲ್ ಚೋಕ್ಸಿ

ಸ್ನೇಹಿತರನ್ನು ನೋಡಲು ಹೋಗಿದ್ದಾಗ ಡೊಮೆನಿಕಾದಲ್ಲಿ 8 ರಿಂದ 10 ಮಂದಿ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದರು ಎಂದು ಉದ್ಯಮಿ ಮೆಹುಲ್ ಚೋಕ್ಸಿ ಹೇಳಿದ್ದಾರೆ.

ಡೊಮೆನಿಕಾ: ಸ್ನೇಹಿತರನ್ನು ನೋಡಲು ಹೋಗಿದ್ದಾಗ ಡೊಮೆನಿಕಾದಲ್ಲಿ 8 ರಿಂದ 10 ಮಂದಿ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದರು ಎಂದು ಉದ್ಯಮಿ ಮೆಹುಲ್ ಚೋಕ್ಸಿ ಹೇಳಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕರಣದಲ್ಲಿ ದೇಶದಿಂದ ಪರಾರಿಯಾಗಿ ಆ್ಯಂಟಿಗುವಾದಲ್ಲಿದ್ದ ಮೆಹುಲ್ ಚೋಕ್ಸಿ ಇದೀಗ ಡೊಮೆನಿಕಾ ಪೊಲೀಸರ ವಶದಲ್ಲಿದ್ದು, ತನ್ನನ್ನು ಪೊಲೀಸ್ ವೇಷದಲ್ಲಿದ್ದ ಪೊಲೀಸರೇ ಹಲ್ಲೆ ನಡೆಸಿ ಕರೆದೊಯ್ದಿದ್ಗರು ಎಂದು ಹೇಳಿದ್ದಾರೆ. ಆಂಟಿಗುವಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ  ಮೆಹುಲ್ ಚೋಕ್ಸಿ ಈ ಬಗ್ಗೆ ದೂರಿದ್ದು, 'ಆಂಟಿಗುವಾ ಪೊಲೀಸರ ವೇಷದಲ್ಲಿದ್ದ ಸುಮಾರು 8 ರಿಂದ 10 ಮಂದಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ನಾನು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದೆ ಎಂದು ಹೇಳಿದ್ದಾರೆ.

ಪ್ರಕರಣದಲ್ಲಿ ಮಹಿಳೆಯ ಪಾತ್ರವೇನು?
ಇನ್ನು ಚೋಕ್ಸಿ ತಮ್ಮ ಹೇಳಿಕೆಯಲ್ಲಿ ಬಾರ್ಬರಾ ಜಬರಿಕಾ ಎಂಬ ಮಹಿಳೆಯ ಹೆಸರು ಉಲ್ಲೇಖಿಸಿದ್ದು, ಆಕೆ ಚೋಕ್ಸಿಯ ಸ್ನೇಹಿತೆಯಂತೆ. ಆಕೆಯನ್ನು ಭೇಟಿಯಾಗಲು ತೆರಳಿದ್ದಾಗಲೇ ಪೊಲೀಸ್ ವೇಷದಲ್ಲಿದ್ದ ವ್ಯಕ್ತಿಗಳು ನನ್ನನ್ನು ಹೊಡೆದು ಅಪಹರಣ ಮಾಡಿದರು ಎಂದು ಹೇಳಿದ್ದಾರೆ. 

'ಜಬರಿಕಾ ನನಗೆ ಹಲವು ವರ್ಷಗಳ ಪರಿಚಯಸ್ಥೆ. ಜಬರಿಕಾ ನಾವು ಜಾಲಿ ಹಾರ್ಬರ್‌ನಲ್ಲಿದ್ದ ಸಂದರ್ಭದಲ್ಲಿ ಆಕೆ ಕೂಡ ನಮ್ಮ ಮನೆ ಎದುರಿನ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದರು. ಬಳಿಕ ಕೊಕೊ ಬೇ ಹೋಟೆಲ್‌ ಸ್ಥಳಾಂತರಗೊಂಡಿದ್ದರು. ನಾವು ಆಗಾಗೆ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದೆವು. ಆದರೆ ನನ್ನ  ಅಹಪರಣವಾದ ದಿನ ಆಕೆ ಕೂಡ ಜೊತೆಯಲ್ಲಿದ್ದಳು. ಪೊಲೀಸರು ಎಂದು ಹೇಳಿಕೊಂಡ 8 ರಿಂದ 10 ಪುರುಷರಿದ್ದ ಗುಂಪು ನನ್ನ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಿತು. ನಾನು, ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಅವರು ನನ್ನ ಫೋನ್, ಕೈಗಡಿಯಾರ ಮತ್ತು ವಾಲೆಟ್ ಅನ್ನು ಕಸಿದುಕೊಂಡರು. ಆದರೆ, ಅವರು ನನ್ನನ್ನು  ದೋಚಲು ಬಯಸುವುದಿಲ್ಲ ಎಂದು ಹೇಳಿ ಹಣವನ್ನು ಹಿಂದಿರುಗಿಸಿದರು. ಆದರೆ ಅದೇ ವೇಳೆ ಜೊತೆಯಲ್ಲಿದ್ದ ಜಬರಿಕಾ ಏನನ್ನೂ ಹೇಳಲಿಲ್ಲ. ಯಾವ ರೀತಿಯ ಪ್ರತಿಕ್ರಿಯೆ ಕೂಡ ನೀಡಲಿಲ್ಲ. ಆಕೆಯ ವರ್ತನೆ ನೋಡಿದರೆ ಆಕೆ ಕೂಡ ನನ್ನ ಅಪಹರಣದ ಹಿಂದೆ ಇದ್ದಾಳೆ ಎಂಬ ಅನುಮಾನ ಮೂಡುವಂತೆ ಇತ್ತು ಎಂದು  ಹೇಳಿದ್ದಾರೆ.

"ಮೇ 23 ರಂದು, ನಾವು ಭೇಟಿಯಾಗಲು ನಿರ್ಧರಿಸಿದೆವು. ಆಕೆಯೇ ತನ್ನನ್ನು ಪಿಕ್ ಅಪ್ ಮಾಡುವಂತೆ ಹೇಳಿದರು. ಅದರಂತೆ ನಾನು ಮರೀನಾ ಪಕ್ಕದ ರಸ್ತೆಯಲ್ಲಿರುವ ಅವಳ ಮನೆಗೆ ತೆರಳಿ ಆಕೆಯನ್ನು ಕರೆದುಕೊಂಡು ಹೋಗಲು 5: 15 ಗಂಟೆಗೆ ಅವಳ ಮನೆ ತಲುಪಿದೆ. ಮನೆಗೆ ಕರೆದೊಯ್ದ ಆಕೆ ನನಗೆ ಕುಡಿಯಲು  ವೈನ್ ನೀಡಿ ಅದನ್ನು ಕುಡಿದ ಬಳಿಕ ಹೊರಗೆ ಹೋಗೋಣ ಎಂದು ಹೇಳಿದರು. ನಾವಿಬ್ಬರು ಮಾತನಾಡುತ್ತಿದ್ದಾಗಲೇ ಮನೆ ಬಾಗಿಲ ಬಳಿಗೆ 8 ರಿಂದ 10 ಮಂದಿ ಬಂದು ನನಗೆ ಮಾರಣಾಂತಿಕವಾಗಿ ಥಳಿಸಿದರು. ಬಳಿಕ ನನ್ನ ರೋಲೆಕ್ಸ್ ವಾಚ್ ಮತ್ತು ವಾಲೆಟ್ ಅನ್ನು ಕಸಿದುಕೊಂಡರು. ಬಳಿಕ ನನ್ನ ಕೈಗಳನ್ನು ಕಟ್ಟಿ,  ಮುಖಕ್ಕೆ ಮಾಸ್ಕ್ ಹಾಕಿ ನನ್ನ ಕಣ್ಣಿಗೆ ಬಟ್ಟೆ ವೀಲ್ ಚೇರ್ ನಲ್ಲಿ ಕೂರಿಸಿಕೊಂಡು ವಾಹನವೊಂದರಲ್ಲಿ ಕರೆದೊಯ್ದರು. ಆ ಹೊತ್ತಿಗಾಗಲೇ ನಾನು ಪ್ರಜ್ಞಾ ಹೀನ ಸ್ಥಿತಿ ತಲುಪಿದ್ದೆ. ಕೊಂಚ ಸಮಯದ ಬಳಿಕ ಬೋಟ್ ನಲ್ಲಿ ಕರೆದೊಯ್ದರು. 

ಬೋಟ್ ನಲ್ಲಿ ನನ್ನ ಮುಖವಾಡ ತೆಗೆದರು.ಬಳಿಕ ನಾನು ಎಲ್ಲಿಗೆ ಕರೆದೊಯ್ಯಿತ್ತಿದ್ದೀರಿ ಎಂದು ಕೇಳಿದಾಗ ಅವರು ನಿರ್ಲಕ್ಷ್ಯದ ಉತ್ತರಗಳನ್ನು ನೀಡಿ ನನಗೆ ಮೌನವಾಗಿರುವಂತೆ ಎಚ್ಚರಿಕೆ ನೀಡಿದರು, ನನಗೆ ಚಾಕು ತೋರಿಸಿ ಬೆದರಿಕೆ ಹಾಕಿದರು. ಹೀಗಾಗಿ ನಾನು ಸಂದರ್ಭದಲ್ಲಿ ನಾನು ಮೌನಕ್ಕೆ ಶರಣಾಗಿದ್ದೆ.  ಬಳಿಕ  ಭಾರತ ಮತ್ತು ವಿಂಡೀಸ್ ಮೂಲದ ಇಬ್ಬರು ವ್ಯಕ್ತಿಗಳು ಕಾಣಿಸಿಕೊಂಡರು. ಈ ಪೈಕಿ ಭಾರತ ಮೂಲದ ನರೀಂದರ್ ಸಿಂಗ್ ಎಂಬಾತ ತಾನು ನನ್ನ ಪ್ರಕರಣದ ಉಸ್ತುವಾರಿ ಏಜೆಂಟ್ ಎಂದು ಪರಿಚಯಿಸಿಕೊಂಡ. "ಉನ್ನತ ಶ್ರೇಣಿಯ" ಭಾರತೀಯ ರಾಜಕಾರಣಿ "ಗೆ ಸಂದರ್ಶನ ನೀಡಲು ನನ್ನನ್ನು ಈ ಸ್ಥಳಕ್ಕೆ  ಕರೆತರಲಾಗಿದೆ ಎಂದು ನನಗೆ ತಿಳಿಸಲಾಯಿತು. ಅಂತೆಯೇ ನನ್ನನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗುತ್ತದೆ ಎಂದು ಅವರು ಹೇಳಿದರು ಎಂದು ಚೋಕ್ಸಿ ಹೇಳಿಕೊಂಡಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ರೂ.13,500 ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ತನ್ನ ಸೋದರಳಿಯ ಬ್ರಿಟನ್ನಿನಿಂದ ಹಸ್ತಾಂತರ ಪ್ರಕ್ರಿಯೆ ಎದುರಿಸುತ್ತಿರುವ ನೀರವ್ ಮೋದಿ ರೀತಿಯೇ ಭಾರತಕ್ಕೆ ಹಸ್ತಾಂತರಗೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ.  ಮತ್ತೊಂದೆಡೆ, ಚೋಕ್ಸಿ ಆಂಟಿಗುವಾದಲ್ಲಿ ಪೌರತ್ವವನ್ನು ಪಡೆದಿದ್ದು, ವಂಚನೆ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಭಾರತ ಬಿಟ್ಟು ತೆರಳಿದ್ದರು. ಅಲ್ಲದೆ, ಆಂಟಿಗುವಾದ ಗಡೀಪಾರು ವಿರೋಧಿ ಕಾನೂನುಗಳ ಅಡಿಯಲ್ಲಿ ಆಶ್ರಯ ಪಡೆದಿದ್ದರು.
 

Related Stories

No stories found.

Advertisement

X
Kannada Prabha
www.kannadaprabha.com