ಕೇರಳದ ಕಣ್ಣೂರಿನಲ್ಲಿ ಮರಕ್ಕೆ ಅಪ್ಪಳಿಸಿದ ಆಂಬ್ಯುಲೆನ್ಸ್: ಮೂವರು ಸಾವು, ಓರ್ವ ವ್ಯಕ್ತಿಗೆ ಗಾಯ

ಕೇರಳದ ಕಣ್ಣೂರು ಬಳಿಯ ಮುಂಡಾಯದ್ ನಲ್ಲಿ ಆಂಬ್ಯುಲೆನ್ಸ್ ವೊಂದು ರಸ್ತೆಯ ಬದಿಯ ಮರಕ್ಕೆ ಅಪ್ಪಳಿಸಿದ್ದರಿಂದ ಮೂವರು ಸಾವನ್ನಪ್ಪಿ, ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ರಸ್ತೆಯ ಬದಿಯ ಮರಕ್ಕೆ ಅಪ್ಪಳಿಸಿರುವ ಆಂಬ್ಯುಲೆನ್ಸ್ ಚಿತ್ರ
ರಸ್ತೆಯ ಬದಿಯ ಮರಕ್ಕೆ ಅಪ್ಪಳಿಸಿರುವ ಆಂಬ್ಯುಲೆನ್ಸ್ ಚಿತ್ರ

ಕಣ್ಣೂರು: ಕೇರಳದ ಕಣ್ಣೂರು ಬಳಿಯ ಮುಂಡಾಯದ್ ನಲ್ಲಿ ಆಂಬ್ಯುಲೆನ್ಸ್ ವೊಂದು ರಸ್ತೆಯ ಬದಿಯ ಮರಕ್ಕೆ ಅಪ್ಪಳಿಸಿದ್ದರಿಂದ ಮೂವರು ಸಾವನ್ನಪ್ಪಿ, ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಬಿಜೊ (45) ಆತನ ಸಹೋದರಿ ರಜಿನಾ (37)  ಮತ್ತು ಆಂಬ್ಯುಲೆನ್ಸ್ ಚಾಲಕ ನಿಧಿನ್ ರಾಜ್ (40) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರೆಲ್ಲರೂ ಪಯಾವೂರು ಬಳಿಯ ಚುಂಡಪ್ಪರಂಬ ಮೂಲದವರು ಎನ್ನಲಾಗಿದೆ. ಆಂಬ್ಯುಲೆನ್ಸ್ ನಲ್ಲಿದ್ದ  ಮತ್ತೋರ್ವ ವ್ಯಕ್ತಿ ಬೆನ್ನಿ ತೀವ್ರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವತಿಲ್ ಮಾಡದಿಂದ ಬರುತ್ತಿದ್ದ ಆಂಬ್ಯುಲೆನ್ಸ್ ಇಂದು ಮುಂಜಾನೆ 6-30 ರ ಸುಮಾರಿನಲ್ಲಿ ಮುಂಡಾಯದ್ ನಲ್ಲಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಅಪ್ಪಳಿಸಿ ಈ ಘಟನೆ ನಡೆದಿದೆ.

ಸುದ್ದಿ ತಿಳಿದ ತಕ್ಷಣ ಜನರು ಅಪಘಾತ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದಾಗ್ಯೂ, ಆಂಬ್ಯುಲೆನ್ಸ್ ನಲ್ಲಿದ್ದ ಜನರನ್ನು ಹೊರಗೆ ತರುವುದಕ್ಕೆ ಸಾಧ್ಯವಾಗಲಿಲ್ಲ. ತದನಂತರ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆಂಬ್ಯುಲೆನ್ಸ್ ನಲ್ಲಿದ್ದ ಮೃತದೇಹಗಳನ್ನು ಹೊರಗೆ ತಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com