ಪ್ರಕ್ಷುಬ್ಧ ವಾತಾವರಣ: ಮುಂಬೈ-ಕೊಲ್ಕತ್ತಾ ವಿಮಾನದಲ್ಲಿದ್ದ 8 ಮಂದಿಗೆ ಗಾಯ

ಮುಂಬೈನಿಂದ ಕೊಲ್ಕತ್ತಾಗೆ ಬರುತ್ತಿದ್ದ ವಿಸ್ತಾರಾ ಏರ್ ಲೈನ್ಸ್ ಸಂಸ್ಥೆಯ ವಿಮಾನ ಕೊಲ್ಕತ್ತಾದಲ್ಲಿ ಇಳಿಯುವ ವೇಳೆ ಪ್ರಕ್ಷುಬ್ಧ ಹವಾಮಾನದಿಂದಾಗಿ (ಟರ್ಬಲೆನ್ಸ್) ಜೋಲಿ ಹೊಡೆದಿದ್ದು, ಪರಿಣಾಮ ವಿಮಾನದಲ್ಲಿದ್ದ 8 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಮುಂಬೈ-ಕೊಲ್ಕತ್ತಾ ವಿಮಾನದಲ್ಲಿದ್ದ 8 ಮಂದಿಗೆ ಗಾಯ
ಮುಂಬೈ-ಕೊಲ್ಕತ್ತಾ ವಿಮಾನದಲ್ಲಿದ್ದ 8 ಮಂದಿಗೆ ಗಾಯ

ಕೊಲ್ಕತ್ತಾ: ಮುಂಬೈನಿಂದ ಕೊಲ್ಕತ್ತಾಗೆ ಬರುತ್ತಿದ್ದ ವಿಸ್ತಾರಾ ಏರ್ ಲೈನ್ಸ್ ಸಂಸ್ಥೆಯ ವಿಮಾನ ಕೊಲ್ಕತ್ತಾದಲ್ಲಿ ಇಳಿಯುವ ವೇಳೆ ಪ್ರಕ್ಷುಬ್ಧ ಹವಾಮಾನದಿಂದಾಗಿ (ಟರ್ಬಲೆನ್ಸ್) ಜೋಲಿ ಹೊಡೆದಿದ್ದು, ಪರಿಣಾಮ ವಿಮಾನದಲ್ಲಿದ್ದ 8 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ವಿಸ್ತಾರಾ ಏರ್ ಲೈನ್ಸ್ ಸಂಸ್ಥೆಯ ಯುಕೆ 775 ವಿಮಾನವು ಕೊಲ್ಕತ್ತಾದಲ್ಲಿ ಇಳಿಯುವ ವೇಳೆ ಪ್ರಕ್ಷುಬ್ಧ ಹವಾಮಾನದಿಂದಾಗಿ (ಟರ್ಬಲೆನ್ಸ್) ಜೋಲಿ ಹೊಡೆದಿದೆ. ಈ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ 8 ಮಂದಿ ಗಾಯಗೊಂಡಿದ್ದಾರೆ. ಆದರೆ ಪೈಲಟ್ ಗಳ ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾದ ದೊಡ್ಡ  ದುರಂತ ತಪ್ಪಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿಮಾನ ನಿಲ್ದಾಣದ ನಿರ್ದೇಶಕ ಸಿ.ಪಟ್ಟಾಭಿ ಅವರು, ಪ್ರಕ್ಷುಬ್ಧ ಹವಾಮಾನದಿಂದ (ಟರ್ಬಲೆನ್ಸ್) ಜೋಲಿ ಹೊಡೆದಿದೆ. ಇದರಿಂದಾಗಿ ವಿಮಾನದಲ್ಲಿದ್ದ 8 ಮಂದಿಗೆ ಗಾಯಗಳಾಗಿವೆ. ಆದರೆ ವಿಮಾನವು ಸುರಕ್ಷಿತವಾಗಿ ಇಳಿದಿದೆ ಎಂದು ಹೇಳಿದ್ದಾರೆ.

ಘಟನೆ ವೇಳೆ ವಿಮಾನದಲ್ಲಿ 123 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದ್ದು, ವಿಮಾನವು ಕೊಲ್ಕತ್ತಾದಿಂದ 25 ನಾಟಿಕಲ್ ಮೈಲಿ ದೂರದಲ್ಲಿದ್ದಾಗ ಸಂಜೆ 4 ಗಂಟೆಯ ವೇಳೆ ಈ ಘಟನೆ ಸಂಭವಿಸಿದೆ. ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಮಗಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದು, 'ವಿಮಾನವು  ಇಳಿಯವಾಗ ಕಾಣಿಸಿಕೊಂಡ ಪ್ರಕ್ಷುಬ್ಧ ಹವಾಮಾನದಿಂದಾಗಿ ವಿಮಾನ ತೀವ್ರವಾಗಿ ಅಲುಗಾಡಿತು. ಈ ಸಂದರ್ಭ ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾದವು ಎಂದು ಹೇಳಿದ್ದಾರೆ. 

ಅಂತೆಯೇ ತೀವ್ರವಾಗಿ ಗಾಯಗೊಂಡ ಪ್ರಯಾಣಿಕರನ್ನು ಚಾರ್ನೋಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಗಾಯಗೊಂಡ ಐವರಿಗೆ ಪ್ರಥಮ ಚಿಕಿತ್ಸೆಯ ಬಳಿಕ ಅವರ ಮನೆಗಳಿಗೆ ಕಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಸ್ತಾರ ಸಂಸ್ಥೆ ವಿಷಾದ
ಇನ್ನು ಘಟನೆಯ ಕುರಿತು ಪ್ರತಿಕ್ರಿಯಿಸಿರುವ ವಿಸ್ತಾರಾ ಕಂಪನಿಯ ವಕ್ತಾರರು, ಪ್ರಯಾಣಿಕರಿಗೆ ಆದ ಈ ಕೆಟ್ಟ ಅನುಭವದಿಂದ ನಮಗೆ ನೋವಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿತಿಯನ್ನು ನಾವೂ ಗಮನಿಸುತ್ತಿದ್ದೇವೆ. ಇಂಥ ಘಟನೆ ಏಕೆ ನಡೆಯಿತು ಎಂಬ ಬಗ್ಗೆ ಆದ್ಯತೆಯ ಮೇಲೆ ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ  ಮಾಹಿತಿಯನ್ನು ಶೀಘ್ರ ನೀಡುತ್ತೇವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com