44 ಕೋಟಿ  ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಡೋಸ್ ಕಾಯ್ದಿರಿಸಿದ ಕೇಂದ್ರ

ಪ್ರಧಾನಿ ನರೇಂದ್ರ ಮೋದಿ ಜೂ.21 ರಿಂದ ಹೊಸ ಲಸಿಕೆ ನೀತಿ ಜಾರಿಯನ್ನು ಪ್ರಕಟಿಸಿ, ಉಚಿತ ಲಸಿಕೆಯನ್ನು ಘೋಷಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಜೂ.08 ರಂದು 44 ಕೋಟಿ ಲಸಿಕೆ ಡೋಸ್ ಗಳನ್ನು ಕಾಯ್ದಿರಿಸಿದೆ. 
ಲಸಿಕೆ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವ ಜನರ ಚಿತ್ರ
ಲಸಿಕೆ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವ ಜನರ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೂ.21 ರಿಂದ ಹೊಸ ಲಸಿಕೆ ನೀತಿ ಜಾರಿಯನ್ನು ಪ್ರಕಟಿಸಿ, ಉಚಿತ ಲಸಿಕೆಯನ್ನು ಘೋಷಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಜೂ.08 ರಂದು 44 ಕೋಟಿ ಲಸಿಕೆ ಡೋಸ್ ಗಳನ್ನು ಕಾಯ್ದಿರಿಸಿದೆ. 

ಕೋವಿಶೀಲ್ಡ್, ಕೋವ್ಯಾಕ್ಸಿನ್ ನ 44 ಕೋಟಿ ಲಸಿಕೆಗಳನ್ನು ಉತ್ಪಾದಕ ಸಂಸ್ಥೆಗಳು ಆಗಸ್ಟ್ ನಿಂದ ಡಿಸೆಂಬರ್ ತಿಂಗಳ ನಡುವೆ ಸರಬರಾಜು ಮಾಡಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 

"ಪ್ರಧಾನಿಗಳ ಹೇಳಿಕೆಯ ಬೆನ್ನಲ್ಲೇ, ರಾಷ್ಟ್ರೀಯ ಲಸಿಕೆ ನೀತಿಯ ಮಾರ್ಗಸೂಚಿಗಳಲ್ಲಿ ಬದಲಾವಣೆ ಜಾರಿಗೆ ತರಲಾಗಿದ್ದು, ಕೇಂದ್ರ ಸರ್ಕಾರ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ 25 ಕೋಟಿ ಡೊಸ್ ಗಳಷ್ಟು ಕೋವಿಶೀಲ್ಡ್ ಲಸಿಕೆಗಳನ್ನು ಕಾಯ್ದಿರಿಸಿದ್ದರೆ ಭಾರತ್ ಬಯೋಟೆಕ್ ನಿಂದ 19 ಕೋಟಿ ಡೋಸ್ ಗಳ ಕೋವ್ಯಾಕ್ಸಿನ್ ಲಸಿಕೆಯನ್ನು ಕಾಯ್ದಿರಿಸಲಾಗಿದೆ" ಎಂದು ಆರೋಗ್ಯ ಸಚಿವಾಲಯ ಹೇಳಿದೆ.  

ಹೆಚ್ಚುವರಿಯಾಗಿ, ಎರಡೂ ಲಸಿಕೆಗಳ ಸಂಗ್ರಹಕ್ಕೆ ಶೇ.30 ರಷ್ಟು ಮುಂಗಡ ಹಣವನ್ನು ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com