ಉಚಿತ ಲಸಿಕೆ ಅಭಿಯಾನ: ಸರ್ಕಾರಕ್ಕೆ ಉಂಟಾಗುವ ಖರ್ಚು ಎಷ್ಟು?: ಇಲ್ಲಿದೆ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಜೂ.21 ರಿಂದ ಹೊಸ ಲಸಿಕೆ ನೀತಿಯನ್ನು ಘೋಷಿಸಿದ್ದರು. ಹೊಸ ಲಸಿಕೆ ನೀತಿಯಿಂದ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಸಿಗಲಿದೆ. ಆದರೆ ಇದಕ್ಕೆ ಸರ್ಕಾರಕ್ಕೆ ತಗುಲುವ ಎಷ್ಟು ಗೊತ್ತೇ?
ಕೋವ್ಯಾಕ್ಸಿನ್ ಲಸಿಕೆ
ಕೋವ್ಯಾಕ್ಸಿನ್ ಲಸಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೂ.21 ರಿಂದ ಹೊಸ ಲಸಿಕೆ ನೀತಿಯನ್ನು ಘೋಷಿಸಿದ್ದರು. ಹೊಸ ಲಸಿಕೆ ನೀತಿಯಿಂದ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಸಿಗಲಿದೆ. ಆದರೆ ಇದಕ್ಕೆ ಸರ್ಕಾರಕ್ಕೆ ತಗುಲುವ ಎಷ್ಟು ಗೊತ್ತೇ?

ಲಸಿಕೆ ಹಾಗೂ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ನೀಡುವುದಕ್ಕಾಗಿ ಸರ್ಕಾರ ಹೆಚ್ಚುವರಿಯಾಗಿ 1.45 ಲಕ್ಷ ಕೋಟಿಯಷ್ಟು ಹಣವನ್ನು ಖರ್ಚು ಮಾಡಲಿದೆ. 

ಎಲ್ಲಾ ವಯಸ್ಕರಿಗೆ ಉಚಿತವಾಗಿ ಲಸಿಕೆ ನೀಡುವುದಕ್ಕಾಗಿ 45,000 ಕೋಟಿಯಿಂದ 50,000 ಕೋಟಿ ರೂಪಾಯಿಗಳ ವರೆಗೆ ಖರ್ಚು ಮಾಡಲಿದೆ. ಇದು ಸರ್ಕಾರದ 35,000 ಕೋಟಿ ರೂಪಾಯಿಗಳ ಅಂದಾಜಿಗಿಂತಲೂ ಹೆಚ್ಚಿದೆ.  

ನವೆಂಬರ್ ತಿಂಗಳವರೆಗೂ 80 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳೂ 5 ಕೆ.ಜಿಯಷ್ಟು ಗೋಧಿ ಅಥವಾ ಅಕ್ಕಿ ಹಾಗೂ 1 ಕೆ.ಜಿಯಷ್ಟು ದ್ವಿದಳ ಧಾನ್ಯಗಳನ್ನು ನೀಡುವುದಕ್ಕೆ ಸರ್ಕಾರ 1.1 ಲಕ್ಷ ಕೋಟಿಯಿಂದ 1.3 ಲಕ್ಷ ಕೋಟಿ ರೂಪಾಯಿಗಳ ಖರ್ಚಾಗಲಿದೆ. ಒಟ್ಟಾರೆ 1.45 ಲಕ್ಷ ಖರ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com