ಭಾರತದ ಖಡಕ್ ಎಚ್ಚರಿಕೆಗೆ ಮಣಿದು ಪಂಜಾಬಿ ಗಾಯಕ ಜಾಸ್ಸಿಬಿ, ಇತರ ಮೂವರ ಖಾತೆ ಬ್ಲಾಕ್ ಮಾಡಿದ ಟ್ವಿಟರ್!

ಭಾರತದಲ್ಲಿ ಕಾನೂನು ಪಾಲನೆ ಪ್ರತಿಕ್ರಿಯೆಯಾಗಿ ಪಂಜಾಬಿ ಗಾಯಕ ಜಾಸ್ಸಿಬಿ, ಹಿಪ್-ಹಾಪ್ ಕಲಾವಿದ ಎಲ್-ಫ್ರೆಶ್ ದಿ ಲಯನ್ ಮತ್ತು ಇನ್ನಿಬ್ಬರ ಖಾತೆಗಳನ್ನು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಬ್ಲಾಕ್ ಮಾಡಿದೆ. 
ಟ್ವಿಟರ್
ಟ್ವಿಟರ್

ನವದೆಹಲಿ: ಭಾರತದಲ್ಲಿ ಕಾನೂನು ಪಾಲನೆ ಪ್ರತಿಕ್ರಿಯೆಯಾಗಿ ಪಂಜಾಬಿ ಗಾಯಕ ಜಾಸ್ಸಿಬಿ, ಹಿಪ್-ಹಾಪ್ ಕಲಾವಿದ ಎಲ್-ಫ್ರೆಶ್ ದಿ ಲಯನ್ ಮತ್ತು ಇನ್ನಿಬ್ಬರ ಖಾತೆಗಳನ್ನು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಬ್ಲಾಕ್ ಮಾಡಿದೆ. 

ದೇಶದ ಐಟಿ ನಿಯಮಗಳ ಅಡಿಯಲ್ಲಿ ಗಾಯಕ ಜಾಸ್ಸಿಬಿ ಸೇರಿದಂತೆ ನಾಲ್ಕು ಖಾತೆಗಳನ್ನು ಕಾರ್ಯಗತಗೊಳಿಸಲು ಟ್ವಿಟರ್ ಗೆ ಭಾರತ ಜೂನ್ 6ರಂದು ಸೂಚಿಸಿತ್ತು. ಅದರಂತೆ ಟ್ವೀಟರ್ ಇಂದು ಜಾಸ್ಸಿಬಿ ಮತ್ತು ಹಿಪ್-ಹಾಪ್ ಕಲಾವಿದ ಎಲ್ ಫ್ರೆಶ್ ದಿ ಲಯನ್ ಖಾತೆಗಳನ್ನು ಬ್ಲಾಕ್ ಮಾಡಿದೆ 

"ಕಾನೂನು ಪಾಲನೆ ಪ್ರತಿಕ್ರಿಯೆಯಾಗಿ ಭಾರತದಲ್ಲಿ ಖಾತೆಯನ್ನು ತಡೆಹಿಡಿಯಲಾಗಿದೆ" ಎಂಬ ಸಂದೇಶವನ್ನು ಟ್ವೀಟರ್ ಪ್ರಕಟಿಸಿದೆ. 

ಈ ಬಗ್ಗೆ ಟ್ವಿಟರ್ ವಕ್ತಾರ, ಭಾರತ ಸರ್ಕಾರದ ಕಾನೂನು ವಿನಂತಿಯನ್ನು ಸ್ವೀಕರಿಸಿದ್ದು ಅದನ್ನು ಟ್ವಿಟರ್ ನಿಯಮಗಳು ಮತ್ತು ಸ್ಥಳೀಯ ಕಾನೂನು ಎರಡರ ಅಡಿಯಲ್ಲಿ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.

ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿದರೆ ಆ ವಿಚಾರಗಳನ್ನು ಟ್ವೀಟ್ ಖಾತೆಯಿಂದ ತೆಗೆದುಹಾಕಲಾಗುತ್ತದೆ. ಇನ್ನು ಇದು ಒಂದು ನಿರ್ದಿಷ್ಟ ನ್ಯಾಯವ್ಯಾಪ್ತಿಯಲ್ಲಿ ಕಾನೂನುಬಾಹಿರವೆಂದು ಸ್ಪಷ್ಟವಾಗಿದ್ದು ಟ್ವಿಟರ್ ನಿಯಮಗಳು ಉಲ್ಲಂಘನೆಯಾಗದಿದ್ದರೆ ಆಗ ನಾವು ಭಾರತದಲ್ಲಿನ ವಿಷಯಕ್ಕೆ ಮಾತ್ರ ತಡೆಹಿಡಿಯಲಾಗುತ್ತದೆ ಎಂದು ವಕ್ತಾರರು ಹೇಳಿದರು.

ಎಲ್ಲಾ ಸಂದರ್ಭಗಳಲ್ಲಿ ಇದನ್ನು ಖಾತೆದಾರರಿಗೆ ನೇರವಾಗಿ ತಿಳಿಸುತ್ತದೆ. ಇದರಿಂದಾಗಿ ಕಂಪನಿಯು ಖಾತೆಗೆ ಸಂಬಂಧಿಸಿದ ಕಾನೂನು ಆದೇಶವನ್ನು ಸ್ವೀಕರಿಸಿದೆ ಎಂದು ಅವರಿಗೆ ತಿಳಿದಿರುತ್ತದೆ.ಲಭ್ಯವಿದ್ದರೆ ಖಾತೆಗೆ ಸಂಬಂಧಿಸಿದ ಇ-ಮೇಲ್ ವಿಳಾಸಕ್ಕೆ ಸಂದೇಶವನ್ನು ಕಳುಹಿಸುವ ಮೂಲಕ ನಾವು ಬಳಕೆದಾರರಿಗೆ ತಿಳಿಸುತ್ತೇವೆ. ಮುಕ್ತತೆ, ಪಾರದರ್ಶಕತೆ, ವಿಷಯವನ್ನು ತಡೆಹಿಡಿಯುವ ವಿನಂತಿಗಳ ವಿವರಗಳಿಗೆ ಟ್ವಿಟರ್ ಬದ್ಧವಾಗಿದೆ ವಕ್ತಾರರು ತಿಳಿಸಿದರು

ಕೃಷಿ ಕಾನೂನುಗಳನ್ನು ವಿರೋಧಿಸಿ ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಜಾಸ್ಸಿಬಿ ಆಗಾಗ್ಗೆ ಟ್ವೀಟ್ ಮಾಡಿದ್ದ. ಈ ವರ್ಷದ ಆರಂಭದಲ್ಲಿ, ರೈತರ ಪ್ರತಿಭಟನೆಗೆ ಸಂಬಂಧಿಸಿದ ತಪ್ಪು ಮಾಹಿತಿ ಮತ್ತು ದ್ವೇಷಬಿತ್ತುವ ವಿಷಯಗಳ ಹರಡುವಿಕೆಯನ್ನು ತಡೆಯಲು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ಗೆ ಸರ್ಕಾರ ಆದೇಶಿಸಿದ ನಂತರ 500 ಕ್ಕೂ ಹೆಚ್ಚು ಖಾತೆಗಳನ್ನು ಅಮಾನತುಗೊಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com