'ಅತ್ಯಂತ ಸೂಕ್ಷ್ಮ ವಿಚಾರ': ಸಾರ್ವಜನಿಕವಾಗಿ ಕೋವಿಡ್-19 ಲಸಿಕಾ ದತ್ತಾಂಶ ಹಂಚಿಕೆ ಬೇಡ: ರಾಜ್ಯಸರ್ಕಾರಗಳಿಗೆ ಕೇಂದ್ರ ಸೂಚನೆ

ಕೋವಿಡ್-19 ಲಸಿಕೆ ದಾಸ್ತಾನು ಮತ್ತು ಎಲೆಕ್ಟ್ರಾನಿಕ್ ಲಸಿಕೆ ಗುಪ್ತಚರ ಜಾಲ (Electronic Vaccine Intelligence-ಇವಿನ್) ವ್ಯವಸ್ಥೆಯ ದತ್ತಾಂಶಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಹಂಚಿಕೊಳ್ಳದಂತೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳಿಗೆ ಪತ್ರ ಬರೆದಿದೆ.
ಹಿರಿಯ ನಾಗರಿಕರು ಕೋವಿಡ್-19 ಲಸಿಕೆ ಪಡೆಯುತ್ತಿರುವ ದೃಶ್ಯ
ಹಿರಿಯ ನಾಗರಿಕರು ಕೋವಿಡ್-19 ಲಸಿಕೆ ಪಡೆಯುತ್ತಿರುವ ದೃಶ್ಯ

ನವದೆಹಲಿ: ಕೋವಿಡ್-19 ಲಸಿಕೆ ದಾಸ್ತಾನು ಮತ್ತು ಎಲೆಕ್ಟ್ರಾನಿಕ್ ಲಸಿಕೆ ಗುಪ್ತಚರ ಜಾಲ (Electronic Vaccine Intelligence-ಇವಿನ್) ವ್ಯವಸ್ಥೆಯ ದತ್ತಾಂಶಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಹಂಚಿಕೊಳ್ಳದಂತೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳಿಗೆ ಪತ್ರ ಬರೆದಿದೆ.

ಹೌದು..ಲಸಿಕೆ ದತ್ತಾಂಶಗಳನ್ನು ಅತ್ಯಂತ ಸೂಕ್ಷ್ಮ ವಿಚಾರ ಎಂದು ಪರಿಗಣಿಸಿರುವ ಕೇಂದ್ರ ಸರ್ಕಾರವು, ಕೋವಿಡ್-19 ಲಸಿಕೆ ದಾಸ್ತಾನು ಮತ್ತು ಎಲೆಕ್ಟ್ರಾನಿಕ್ ಲಸಿಕೆ ಗುಪ್ತಚರ ಜಾಲ (Electronic Vaccine Intelligence-ಇವಿನ್) ವ್ಯವಸ್ಥೆಯ ದತ್ತಾಂಶಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ  ಹಂಚಿಕೊಳ್ಳದಂತೆ ಸೂಚನೆ ನೀಡಿದೆ.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಸಹಾಯದಿಂದ ಭಾರತದಲ್ಲಿ ಲಸಿಕೆ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಎಲ್ಲಾ ಲಸಿಕೆಗಳ ದಾಸ್ತಾನು ಮತ್ತು ವಹಿವಾಟುಗಳ ಬಗ್ಗೆ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಬೇಕಿದ್ದು, ಇದು ಕೇಂದ್ರ ಸರ್ಕಾರದ ಜಾಗತಿಕ ಲಸಿಕೀಕರಣದ  ಕಾರ್ಯಕ್ರಮದಲ್ಲಿ ಸೇರಿಸಲ್ಪಟ್ಟಿದೆ. 2012-13ರಲ್ಲಿ ಲಸಿಕೆ ಕಾರ್ಯಗಳನ್ನು ರಾಷ್ಟ್ರಮಟ್ಟದಿಂದ ಜಿಲ್ಲಾಮಟ್ಟಕ್ಕೆ ತಂದ ಬಳಿಕ ಲಸಿಕೀಕರಣದ ಎಲ್ಲಾ ಹಂತಗಳಲ್ಲಿ ಲಸಿಕೆಗಳ ಸಂಗ್ರಹದ ಸ್ಥಿತಿ ಮತ್ತು ತಾಪಮಾನವನ್ನು ಪತ್ತೆಹಚ್ಚಲು ಇವಿನ್ ವ್ಯವಸ್ಥೆಯನ್ನು ಬಳಸಲಾಗುತ್ತಿದೆ. 

"ಕೋವಿಡ್ ಲಸಿಕೆಗಳ ದಾಸ್ತಾನು ಮತ್ತು ವಹಿವಾಟುಗಳನ್ನು ಪ್ರತಿದಿನವೂ ನವೀಕರಿಸಲು ಎಲ್ಲಾ ರಾಜ್ಯಗಳು ಇದೇ ವ್ಯವಸ್ಥೆಯನ್ನು ಬಳಸುತ್ತಿವೆ ಎಂದು ಜೂನ್ 4 ರಂದು ರಾಜ್ಯಗಳಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಮಿಷನ್ ನಿರ್ದೇಶಕರಿಗೆ ಸಚಿವಾಲಯ ನೀಡಿದ ಪತ್ರದಲ್ಲಿ ೇತಿಳಿಸಲಾಗಿದೆ.

ದಾಸ್ತಾನು ಮತ್ತು ತಾಪಮಾನಕ್ಕಾಗಿ ಇವಿನ್‌ನಿಂದ ಉತ್ಪತ್ತಿಯಾಗುವ ದತ್ತಾಂಶ ಮತ್ತು ವಿಶ್ಲೇಷಣೆಯು ಸಚಿವಾಲಯದ ನಿಯಂತ್ರಣದಲ್ಲಿದ್ದು, ಅದರ ಒಪ್ಪಿಗೆಯಿಲ್ಲದೆ ಬೇರೆ ಯಾವುದೇ ಸಂಸ್ಥೆ, ಪಾಲುದಾರ ಅಥವಾ ಮಾಧ್ಯಮ ಸಂಸ್ಥೆ, ಆನ್‌ಲೈನ್ ಮತ್ತು ಆಫ್‌ಲೈನ್ ಸಾರ್ವಜನಿಕ ವೇದಿಕೆಗಳೊಂದಿಗೆ  ಹಂಚಿಕೊಳ್ಳಬಾರದು.ಇದು ಬಹಳ ಸೂಕ್ಷ್ಮ ಮಾಹಿತಿಯಾಗಿದ್ದು, ಕಾರ್ಯಕ್ರಮ ಸುಧಾರಣೆಗೆ ಮಾತ್ರ ಬಳಸಲ್ಪಡಬೇಕು ಎಂದು ಪತ್ರದಲ್ಲಿ ಸೇರಿಸಲಾಗಿದೆ.

ಸಾರ್ವಜನಿಕ ವಲಯದಲ್ಲಿ ಕೇಂದ್ರೀಕೃತ ಲಸಿಕೆ ಲಭ್ಯತೆಯ ಮಾಹಿತಿಯ ಕೊರತೆ ಮತ್ತು ರಾಜ್ಯಗಳಿಗೆ ಲಸಿಕೆ ವಿತರಣಾ ಯೋಜನೆಯಲ್ಲಿ ಅಪಾರದರ್ಶಕತೆ ಕುರಿತು ಪ್ರಶ್ನೆಗಳು ಎದ್ದಿರುವ ಸಮಯದಲ್ಲಿ ಈ ಪತ್ರ ಬಂದಿದ್ದು, ಸಾಕಷ್ಟು ಪ್ರಶ್ನೆಗಳೇಳುವಂತೆ ಮಾಡಿದೆ.

ಆದಾಗ್ಯೂ, ಸಚಿವಾಲಯದ ಅಧಿಕಾರಿಗಳು ಪತ್ರದ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಸಂಪರ್ಕಿಸಿದಾಗ, ಇದು ರಾಜ್ಯಗಳಿಗೆ ನೀಡಲಾಗುವ ವಾಡಿಕೆಯ ಪತ್ರವಾಗಿದೆ ಮತ್ತು ಎಲ್ಲಾ ಲಸಿಕೆಗಳ ಮೇಲೆ ನಿಯತಕಾಲಿಕವಾಗಿ ಕಳುಹಿಸಲಾಗುತ್ತದೆ ಮತ್ತು ಕೋವಿಡ್ ಲಸಿಕೆಗಳಿಗೆ ನಿರ್ದಿಷ್ಟವಾಗಿ ನೀಡಲಾಗುವುದಿಲ್ಲ ಎಂದು  ಹೇಳಿದರು. ಲಸಿಕೆ ಬಳಕೆ ಮತ್ತು ಕೋಲ್ಡ್ ಸ್ಟೋರೇಜ್ ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಖಾಸಗಿ ಕಂಪನಿಗಳು ತಮ್ಮ ವ್ಯಾಪಾರ ಕಾರ್ಯಸೂಚಿಗಳನ್ನು ನಿರ್ದಿಷ್ಟ ಪ್ರದೇಶಗಳಲ್ಲಿ ಬಳಸಿಕೊಳ್ಳಬಹುದು. ಇದು ನಿಯಮಬಾಹಿರ ಎಂದು ಸಚಿವಾಲಯದ ಸಂತಾನೋತ್ಪತ್ತಿ ಮತ್ತು ಮಕ್ಕಳ ವಿಭಾಗದ  ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com