ಕೋವಿಡ್-19: ದೇಶದಲ್ಲಿ ಸತತ 2ನೇ ದಿನವೂ ಲಕ್ಷಕ್ಕಿಂತ ಕಡಿಮೆ ಪ್ರಕರಣ ವರದಿ; ಚೇತರಿಕೆ ಪ್ರಮಾಣ ಎಷ್ಟು ಗೊತ್ತೆ?

ದೇಶದಲ್ಲಿ ಸತತ ಎರಡನೇ ದಿನವೂ ಕೊರೋನಾ ಪ್ರಕರಣಗಳು ಲಕ್ಷಕ್ಕಿಂತ ಕಡಿಮೆ ವರದಿಯಾಗಿದ್ದು ಈ ಮೂಲಕ ದೈನಂದಿನ ಸಕಾರಾತ್ಮಕ ಪ್ರಮಾಣವು ಶೇಕಡಾ 4.66ಕ್ಕೆ ಇಳಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

Published: 09th June 2021 04:27 PM  |   Last Updated: 09th June 2021 07:34 PM   |  A+A-


COVID patients in India

ಸಂಗ್ರಹ ಚಿತ್ರ

Posted By : Vishwanath S
Source : ANI

ನವದೆಹಲಿ: ದೇಶದಲ್ಲಿ ಸತತ ಎರಡನೇ ದಿನವೂ ಕೊರೋನಾ ಪ್ರಕರಣಗಳು ಲಕ್ಷಕ್ಕಿಂತ ಕಡಿಮೆ ವರದಿಯಾಗಿದ್ದು ಈ ಮೂಲಕ ದೈನಂದಿನ ಸಕಾರಾತ್ಮಕ ಪ್ರಮಾಣವು ಶೇಕಡಾ 4.66ಕ್ಕೆ ಇಳಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಪ್ರಸ್ತುತ ವಾರದ ಸಕಾರಾತ್ಮಕ ದರವು ಶೇಕಡಾ 5.66ರಷ್ಟಿದ್ದರೆ, ದೈನಂದಿನ ಸಕಾರಾತ್ಮಕ ಪ್ರಮಾಣವು ಇಂದು ಶೇಕಡಾ 4.66ರಷ್ಟಿದೆ. ಸತತ 16 ದಿನಗಳಿಂದ ಇದು ಶೇಕಡಾ 10ಕ್ಕಿಂತಲೂ ಕಡಿಮೆ ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಸಕ್ರಿಯ ಪ್ರಕರಣಗಳು ನಿರಂತರವಾಗಿ ಇಳಿಕೆಯಾಗುತ್ತಿದ್ದು ಸತತ ಒಂಬತ್ತು ದಿನಗಳಿಂದ 20 ಲಕ್ಷಕ್ಕಿಂತ ಕಡಿಮೆ ವರದಿಯಾಗುತ್ತಿದ್ದು ಇಂದು ದೇಶದಲ್ಲಿ 12,31,415 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 72,287 ಕುಸಿತ ಕಂಡುಬಂದಿದೆ. ಅಲ್ಲದೆ ಸಕ್ರಿಯ ಪ್ರಕರಣಗಳು ಈಗ ದೇಶದ ಒಟ್ಟು ಸಕಾರಾತ್ಮಕ ಪ್ರಕರಣಗಳಲ್ಲಿ ಕೇವಲ 4.23 ರಷ್ಟಿದೆ ಎಂದು ಅದು ಹೇಳಿದೆ.

ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 92,596 ಹೊಸ ಪ್ರಕರಣಗಳನ್ನು ವರದಿಯಾಗಿದ್ದು, ಸತತ 27ನೇ ದಿನವೂ ಚೇತರಿಕೆ ಪ್ರಮಾಣ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸಿದೆ. ಕಳೆದ 24 ಗಂಟೆಗಳಲ್ಲಿ 1,62,664 ಚೇತರಿಕೆ ಪ್ರಮಾಣ ವರದಿಯಾಗಿದೆ. ಒಟ್ಟಾರೆ ಚೇತರಿಕೆ ಪ್ರಮಾಣ 2,75,04,126ಕ್ಕೆ ತಲುಪಿದ್ದು ದೇಶದ ಚೇತರಿಕೆ ದರವು ಶೇ. 94.55ಕ್ಕೆ ತಲುಪಿದೆ ಎಂದು ಸಚಿವಾಲಯ ತಿಳಿಸಿದೆ.

ದೇಶಾದ್ಯಂತ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಒಟ್ಟಾರೆ 23.90 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 27,76,096 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ತಾತ್ಕಾಲಿಕ ವರದಿಯ ಪ್ರಕಾರ ಇಂದು ಬೆಳಿಗ್ಗೆ 7 ಗಂಟೆಯವರೆಗೆ ಒಟ್ಟು 23,90,58,360 ಲಸಿಕೆ ಡೋಸ್ ನೀಡಲಾಗಿದೆ. 33,44,533 ಸೆಷನ್‌ಗಳ ಮೂಲಕ ನೀಡಲಾಗಿದೆ.

ಒಟ್ಟು 23,88,40,635 ಪೈಕಿ 99,96,113 ಆರೋಗ್ಯ ಕಾರ್ಯಕರ್ತರು(ಎಚ್‌ಸಿಡಬ್ಲ್ಯು) ಮೊದಲ ಡೋಸ್ ತೆಗೆದುಕೊಂಡಿದ್ದರೆ 68,94,206 ಎಚ್‌ಸಿಡಬ್ಲ್ಯೂಗಳು ಎರಡನೇ ಡೋಸ್ ಸಹ ತೆಗೆದುಕೊಂಡಿದ್ದಾರೆ. 1,63,86,094 ಮುಂಚೂಣಿ ಕಾರ್ಯಕರ್ತರುಎಫ್ಎಲ್ಡಬ್ಲ್ಯೂ) ಮೊದಲ ಡೋಸ್ ತೆಗೆದುಕೊಂಡಿದ್ದರೆ, 87,28,340 ಎಫ್‌ಎಲ್‌ಡಬ್ಲ್ಯೂಗಳು ಎರಡನೇ ಡೋಸ್ ತೆಗೆದುಕೊಂಡಿದ್ದಾರೆ. 

ಇನ್ನು 18-44 ವರ್ಷದೊಳಗಿನ 3,18,51,951 ಮಂದಿ (ಮೊದಲ ಡೋಸ್), ಅದೇ ವಯಸ್ಸಿನ 3,18,313 (2ನೇ ಡೋಸ್) ತೆಗೆದುಕೊಂಡಿದ್ದಾರೆ. 45 ರಿಂದ 60 ವರ್ಷದೊಳಗಿನ 7,26,04,407 ಜನರು (ಮೊದಲ ಡೋಸ್), ಅದೇ ವಯಸ್ಸಿನ 1,15,39,053 (2ನೇ ಡೋಸ್) ತೆಗೆದುಕೊಂಡಿದ್ದಾರೆ. 60 ವರ್ಷಕ್ಕಿಂತ ಮೇಲ್ಪಟ್ಟ 6,12,98,568 ಮಂದಿ ಮೊದಲ ಡೋಸ್ ಪಡೆದಿದ್ದರೆ 1,94,41,315 ಮಂದಿ ಎರಡನೇ ಡೋಸ್ ಸಹ ಪಡೆದಿದ್ದಾರೆ. 


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp