ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಲಯಾಳಂ ಮಾತಾಡಬೇಡಿ ಆದೇಶ: ವಿವಾದ ಭುಗಿಲೆದ್ದ ಬಳಿಕ ಆದೇಶ ವಾಪಸ್ ಪಡೆದ ದೆಹಲಿ ಆಸ್ಪತ್ರೆ!

ದೆಹಲಿಯ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಗೋವಿಂದ್ ವಲ್ಲಭ್ ಪಂತ್ ಇನ್​ಸ್ಟಿಟ್ಯೂಟ್ (ಜಿಐಪಿಎಂಇಆರ್) ತನ್ನ ಎಲ್ಲಾ ಶುಶ್ರೂಷಾ ಸಿಬ್ಬಂದಿಗೆ ಸಂವಹನಕ್ಕಾಗಿ ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಬಳಸಬೇಕು, ಮಲಯಾಳಂನಲ್ಲಿ ಮಾತನಾಡಬಾರದು ಎಂದು ನೀಡಲಾಗಿದ್ದ ಆದೇಶವನ್ನು ಬುಧವಾರ ಹಿಂಪಡೆದುಕೊಂಡಿದೆ. 

ನವದೆಹಲಿ: ದೆಹಲಿಯ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಗೋವಿಂದ್ ವಲ್ಲಭ್ ಪಂತ್ ಇನ್​ಸ್ಟಿಟ್ಯೂಟ್ (ಜಿಐಪಿಎಂಇಆರ್) ತನ್ನ ಎಲ್ಲಾ ಶುಶ್ರೂಷಾ ಸಿಬ್ಬಂದಿಗೆ ಸಂವಹನಕ್ಕಾಗಿ ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಬಳಸಬೇಕು, ಮಲಯಾಳಂನಲ್ಲಿ ಮಾತನಾಡಬಾರದು ಎಂದು ನೀಡಲಾಗಿದ್ದ ಆದೇಶವನ್ನು ಬುಧವಾರ ಹಿಂಪಡೆದುಕೊಂಡಿದೆ. 

ಮಲಯಾಳಂ ಭಾಷೆಯ ಬಳಕೆಯ ವಿರುದ್ಧ ಜಿಐಪಿಎಂಇಆರ್​ಗೆ ದೂರು ಬಂದಿದೆ. ಜಿಐಪಿಎಂಇಆರ್​ನಲ್ಲಿ ಕೆಲಸದ ಸ್ಥಳಗಳಲ್ಲಿ ಸಂವಹನಕ್ಕಾಗಿ ಮಲಯಾಳಂ ಭಾಷೆಯನ್ನು ಬಳಸಲಾಗುತ್ತಿದೆ ಎಂಬ ಬಗ್ಗೆ ದೂರು ಬಂದಿದೆ. ಆದರೆ ಗರಿಷ್ಠ ರೋಗಿಗಳು ಮತ್ತು ಸಹೋದ್ಯೋಗಿಗಳು ಈ ಭಾಷೆಯನ್ನು ತಿಳಿದಿಲ್ಲ. ಇದರಿಂದ ಸಾಕಷ್ಟು ಅನಾನುಕೂಲತೆಗಳು ಉಂಟಾಗುತ್ತವೆ. ಆದ್ದರಿಂದ ಸಂವಹನಕ್ಕಾಗಿ ಹಿಂದಿ ಮತ್ತು ಇಂಗ್ಲಿಷ್ ಅನ್ನು ಮಾತ್ರ ಬಳಸುವಂತೆ ಎಲ್ಲಾ ನರ್ಸಿಂಗ್ ಸಿಬ್ಬಂದಿಗೆ ನಿರ್ದೇಶಿಸಲಾಗಿದೆ. ಇಲ್ಲದಿದ್ದರೆ ಗಂಭೀರ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಈ ಹಿಂದೆ ಜಿಐಪಿಎಂಇಆರ್ ಸುತ್ತೋಲೆ ಹೊರಡಿಸಿತ್ತು.

ಇದಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದರಾದ ಕೆ.ಸಿ.ವೇಣುಗೋಪಾಲ್, ಶಶಿ ತರೂರ್ ಸೇರಿದಂತೆ ಹಲವು ನಾಯಕರು ತಮ್ಮ ಟ್ವಿಟರ್​ನಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದರು.

ವಿವಾದ ಭುಗಿಲೇಳುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಆಸ್ಪತ್ರೆಯ ಆಡಳಿತ ಮಂಡಳಿಯ ಅಧಿಕಾರಿಗಳು ಇದೀಗ ಆದೇಶವನ್ನು ವಾಪಸ್ ಪಡೆದುಕೊಂಡಿದ್ದು, ತಮ್ಮ ಗಮನಕ್ಕೆ ಬಾರದೆ ಈ ಬೆಳವಣಿಗೆ ನಡೆದಿದೆ. ಹೀಗಾಗಿ ಈ ಆದೇಶ ಹಿಂಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆದೇಶವು ಮಲಯಾಳಂ ಮಾತನಾಡುವ ಸಿಬ್ಬಂದಿಗಳ ವಿರುದ್ಧವಾಗಿರಲಿಲ್ಲ. ಆದೇಶದ ಹಿಂದೆ ಯಾವುದೇ ದುರುದ್ದೇಶವೂ ಇಲ್ಲ. ಸುತ್ತೋಲೆಯನ್ನು ತಪ್ಪಾಗಿ ಆರ್ಥೈಸಲಾಗಿದೆ. ಈ ಕುರಿತು ಸ್ಪಷ್ಟನೆ ನೀಡಲು ನನಗೆ ಅವಕಾಶವನ್ನೂ ನೀಡಲಾಗಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಹೇಳಿದ್ದಾರೆ. 

ಆಸ್ಪತ್ರೆಯ ಕೆಲ ಸಿಬ್ಬಂದಿಗಳು ಹಾಗೂ ರೋಗಿಗಳು ಸ್ಥಳೀಯ ಭಾಷೆ ಬಳಕೆ ಮಾಡುವಂತೆ ಹೇಳಿ ದೂರುಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾಷೆಯಿಂದಾಗುವ ಗೊಂದಲಗಳ ನಿವಾರಣೆಗೆ ಸುತ್ತೋಲೆಯನ್ನು ಹೊರಡಿಸಲಾಗಿತ್ತು. ಯಾವುದೇ ಸಿಬ್ಬಂದಿಗೂ ನೋವುಂಟು ಮಾಡುವ ಉದ್ದೇಶ ಆಗಿರಲಿಲ್ಲ. ಸುತ್ತೋಲೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆಂದು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com