ಕೇಂದ್ರದಿಂದ ಈ ವರ್ಷ ದಾಖಲೆಯ ಪ್ರಮಾಣದಲ್ಲಿ ಎಂಎಸ್ ಪಿ ಆಧಾರದಲ್ಲಿ ಗೋಧಿ ಖರೀದಿ!
ಈ ವರ್ಷ ಕೇಂದ್ರ ಸರ್ಕಾರ ದಾಖಲೆಯ ಪ್ರಮಾಣದಲ್ಲಿ ಎಂಎಸ್ ಪಿ ದರದಲ್ಲಿ ಗೋಧಿಯನ್ನು ಖರೀದಿಸಿದೆ. ಸರ್ಕಾರ 418.47 ಲಕ್ಷ ಟನ್ ನಷ್ಟು ಗೋಧಿಯನ್ನು 82,648 ಕೋಟಿ ರೂಪಾಯಿಗಳನ್ನು ನೀಡಿ ಖರೀದಿಸಿದೆ.
Published: 09th June 2021 09:33 PM | Last Updated: 09th June 2021 09:53 PM | A+A A-

ಸಾಂಕೇತಿಕ ಚಿತ್ರ
ನವದೆಹಲಿ: ಈ ವರ್ಷ ಕೇಂದ್ರ ಸರ್ಕಾರ ದಾಖಲೆಯ ಪ್ರಮಾಣದಲ್ಲಿ ಎಂಎಸ್ ಪಿ ದರದಲ್ಲಿ ಗೋಧಿಯನ್ನು ಖರೀದಿಸಿದೆ. ಸರ್ಕಾರ 418.47 ಲಕ್ಷ ಟನ್ ನಷ್ಟು ಗೋಧಿಯನ್ನು 82,648 ಕೋಟಿ ರೂಪಾಯಿಗಳನ್ನು ನೀಡಿ ಖರೀದಿಸಿದೆ.
ಪ್ರಸಕ್ತ ಮಾರ್ಕೆಟಿಂಗ್ ವರ್ಷದಲ್ಲಿ 418.47 ಲಕ್ಷ ಟನ್ ಗಳಷ್ಟು ಗೋಧಿಯನ್ನು ಖರೀದಿಸಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 82,648 ಕೋಟಿ ರೂಪಾಯಿಗಳಷ್ಟು ಖರ್ಚಾಗಿದೆ ಎಂದು ಹೇಳಿದೆ. ರೈತರ ಪ್ರತಿಭಟನೆಯ ನಡುವೆಯೂ ಸರ್ಕಾರ ದಾಖಲೆಯ ಪ್ರಮಾಣದಲ್ಲಿ ಗೋಧಿಯನ್ನು ಖರೀದಿಸಲಾಗಿದೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಹಾಗೂ ಎಂಎಸ್ ಪಿಗೆ ಲಿಖಿತ ಖಾತ್ರಿಯನ್ನು ನೀಡುವುದಕ್ಕೆ ಆಗ್ರಹಿಸಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಏಪ್ರಿಲ್-ಮಾರ್ಚ್ ತಿಂಗಳಲ್ಲಿ ರಾಬಿ ಮಾರ್ಕೆಟಿಂಗ್ ಸೀಸನ್ (ಆರ್ ಎಂಎಸ್) ನಡೆಯಲಿದೆ. ಆದರೆ ಬೃಹತ್ ಪ್ರಮಾಣದ ಸಂಗ್ರಹ ಜೂನ್ ವೇಳೆಗೆ ಮುಕ್ತಾಯಗೊಳ್ಳಲಿದೆ.
ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಗುಜರಾತ್, ಹಿಮಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರಗಳಲ್ಲಿ ಆರ್ ಎಂಎಸ್ 2021-22 ರ ಗೋಧಿ ದಾಸ್ತಾನು ಸರಾಗವಾಗಿ ನಡೆಯುತ್ತಿದೆ ಎಂದು ಅಧಿಕೃತ ಪ್ರಕಟಣೆಯ ಮೂಲಕ ತಿಳಿದುಬಂದಿದೆ. ಜೂ.8 ವರೆಗೂ ಸರ್ಕಾರ 418.47 ಟನ್ ಗಳಷ್ಟು ಗೋಧಿಯನ್ನು ಖರೀದಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸರ್ಕಾರ 373.22 ಲಕ್ಷ ಟನ್ ಗಳಷ್ಟು ಗೋಧಿಯನ್ನು ಖರೀದಿಸಿತ್ತು. ಇದರಿಂದಾಗಿ 46 ಲಕ್ಷ ರೈತರಿಗೆ ಲಾಭವಾಗಿದೆ ಎಂದು ಸರ್ಕಾರ ಹೇಳಿದೆ.