ರಾಹುಲ್ ಗಾಂಧಿ ಮಾತಿನಲ್ಲಿ ತೂಕವಿದೆ, ಕೇಂದ್ರ ಸರ್ಕಾರ ಕೂಡ ಅವುಗಳನ್ನು ಜಾರಿಗೊಳಿಸಿದೆ: ಸಂಜಯ್ ರಾವತ್

ಕೋವಿಡ್ ಸಾಂಕ್ರಾಮಿಕ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಾತುಗಳನ್ನು ಕೇಂದ್ರ ಸರ್ಕಾರ ನಿರಂತರವಾಗಿ ನಿರ್ಲಕ್ಷಿಸುತ್ತಾ ಬಂದಿತ್ತು. ಆದರೆ ಅವರ ಮಾತಿನಲ್ಲಿ ತೂಕವಿದ್ದು, ಇದೀಗ ಕೇಂದ್ರ ಸರ್ಕಾರ ಕೂಡ ಅವರ ಬಹುತೇಕ ಬೇಡಿಕೆಗಳನ್ನು ಈಡೇರಿಸಿದೆ ಎಂದು ಶಿವಸೇನೆ  ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ಸಂಜಯ್ ರಾವತ್-ರಾಹುಲ್ ಗಾಂಧಿ
ಸಂಜಯ್ ರಾವತ್-ರಾಹುಲ್ ಗಾಂಧಿ

ಮುಂಬೈ: ಕೋವಿಡ್ ಸಾಂಕ್ರಾಮಿಕ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಾತುಗಳನ್ನು ಕೇಂದ್ರ ಸರ್ಕಾರ ನಿರಂತರವಾಗಿ ನಿರ್ಲಕ್ಷಿಸುತ್ತಾ ಬಂದಿತ್ತು. ಆದರೆ ಅವರ ಮಾತಿನಲ್ಲಿ ತೂಕವಿದ್ದು, ಇದೀಗ ಕೇಂದ್ರ ಸರ್ಕಾರ ಕೂಡ ಅವರ ಬಹುತೇಕ ಬೇಡಿಕೆಗಳನ್ನು ಈಡೇರಿಸಿದೆ ಎಂದು ಶಿವಸೇನೆ  ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕ, ಆಮ್ಲಜನಕ ಕೊರತೆ, ಕೊರೋನಾ ವೈರಸ್ 2ನೇ ಅಲೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಕ್ತಪಡಿಸಿದ ಅಭಿಪ್ರಾಯಗಳು ತೂಕವನ್ನು ಹೊಂದಿವೆ. ಈ ಹಿಂದೆ ರಾಹುಲ್ ಗಾಂಧಿ ಹೇಳಿದ ಅನೇಕ ವಿಷಯಗಳು ವಾಸ್ತವಿಕವಾಗಿ ಸರಿಯಾಗಿವೆ. ಅಷ್ಟೇ  ಅಲ್ಲ, ಅವರ ಹಲವಾರು ಬೇಡಿಕೆಗಳನ್ನು ನಂತರ ಕೇಂದ್ರ ಸರ್ಕಾರವು ಜಾರಿಗೆ ತಂದಿತು ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಕೋವಿಡ್ ಲಸಿಕಾ ನೀತಿ ಜಾರಿಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವತ್, 'ರಾಹುಲ್ ಗಾಂಧಿಯವರ ಹೇಳಿಕೆಗಳು ವಾಸ್ತವಿಕವೇ ಎಂಬ ಪ್ರಶ್ನೆಗೆ ಉತ್ತರಿಸಿ, ' ರಾಹುಲ್ ವ್ಯಾಕ್ಸಿನೇಷನ್ ಅಥವಾ ಕೊರೋನವೈರಸ್ ಬಗ್ಗೆ ಮಾತನಾಡುತ್ತಿದ್ದರೂ, ಅವರ  ಅಭಿಪ್ರಾಯಗಳು ನಿಜ. ಅವರ ಮಾತುಗಳಲ್ಲಿ ತೂಕ ಇದೆ. ಅದು ಇದೀಗ ಸಾಬೀತಾಗಿದ್ದು, ಅವರ ಬಹುತೇಕ ಬೇಡಿಕೆಗಳನ್ನು ಸ್ವತಃ ಕೇಂದ್ರ ಸರ್ಕಾರ ಈಡೇರಿಸಿದೆ ಎಂದು ರಾವತ್ ಹೇಳಿದ್ದಾರೆ.

ಇನ್ನು ಮಹಾರಾಷ್ಟ್ರದಲ್ಲಿರುವ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಲ್ಲಿ ಕಾಂಗ್ರೆಸ್ ಕೂಡ ಒಂದು ಭಾಗವಾಗಿದ್ದು, ಈ ಹಿಂದೆ ಲಸಿಕೆ ನೀತಿ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಬಗ್ಗೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ  ವಿರುದ್ಧ ವಾಗ್ದಾಳಿ ನಡೆಸಿದ್ದರು. ಸರ್ಕಾರ ಕೈಗೊಂಡ ಕ್ರಮಗಳು ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದರು. ಅಂತೆಯೇ ತಾವು ಈ ಹಿಂದೆಯೇ ಕೊರೋನಾ ವೈರಸ್ 2ನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದೆ. ಆದರೆ ಕೇಂದ್ರ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದೂ ಹೇಳಿದ್ದರು. ಅಂತೆಯೇ ಸಾಂಕ್ರಾಮಿಕ ತಡೆಯಲು  ಲಸಿಕಾ ಅಭಿಯಾನವನ್ನು ವೇಗವಾಗಿ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ಕೂಡ ನೀಡಿದ್ದರು. ದೇಶದ ಮಕ್ಕಳಿಗೆ ಈಗಾಗಲೇ ಕರೋನವೈರಸ್ ಲಸಿಕೆ-ಚಿಕಿತ್ಸೆಯ ಪ್ರೋಟೋಕಾಲ್ ಜಾರಿಯಲ್ಲಿರಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದರು. 

ಅದರಂತೆ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಲಸಿಕಾ ನೀತಿಯನ್ನು ಘೋಷಣೆ ಮಾಡಿದ್ದಾರೆ. ಕೇಂದ್ರಗಳಿಗೆ ರಾಜ್ಯಗಳಿಗೆ ಉಚಿತ ಕೋವಿಡ್-19 ಲಸಿಕೆಗಳನ್ನು ನೀಡಲಾಗುವುದು ಮತ್ತು ಅಂತೆಯೇ ಅವುಗಳ ಸಂಗ್ರಹವನ್ನು ನೋಡಿಕೊಳ್ಳುವುದಾಗಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ  ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com