ಸಿಬ್ಬಂದಿಗಳೊಂದಿಗಿನ ಘರ್ಷಣೆ: ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ ಜೆಎನ್ ಯು

ಕೇಂದ್ರ ಗ್ರಂಥಾಲಯಕ್ಕೆ ನುಗ್ಗಿ ಸಿಬ್ಬಂದಿಗಳೊಂದಿಗೆ ಘರ್ಷಣೆಗೆ ಕಾರಣರಾದ ವಿದ್ಯಾರ್ಥಿಗಳ ವಿರುದ್ಧ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಲಯ ಎಫ್ಐಆರ್ ನ್ನು ದಾಖಲಿಸಿದೆ. 
ಜೆಎನ್ ಯು
ಜೆಎನ್ ಯು

ನವದೆಹಲಿ: ಕೇಂದ್ರ ಗ್ರಂಥಾಲಯಕ್ಕೆ ನುಗ್ಗಿ ಸಿಬ್ಬಂದಿಗಳೊಂದಿಗೆ ಘರ್ಷಣೆಗೆ ಕಾರಣರಾದ ವಿದ್ಯಾರ್ಥಿಗಳ ವಿರುದ್ಧ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಲಯ ಎಫ್ಐಆರ್ ನ್ನು ದಾಖಲಿಸಿದೆ. 

ಕಳೆದ 2 ದಿನಗಳಿಂದ ಗ್ರಂಥಾಲಯದ ಪ್ರದೇಶವನ್ನು ವಿದ್ಯಾರ್ಥಿಗಳು ಆಕ್ರಮಿಸಿಕೊಂಡಿದ್ದರು ಎಂದು ವಿಶ್ವವಿದ್ಯಾಲಯ ಆರೋಪಿಸಿದೆ. ವಿಶ್ವವಿದ್ಯಾನಿಲಯ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪೊಲೀಸರ ಮಾಹಿತಿಯ ಪ್ರಕಾರ ಜೂ.08 ರಂದು ಈ ಘಟನೆ ನಡೆದಿದ್ದು, ವಿ.ವಿಯ ಮುಖ್ಯ ಭದ್ರತಾ ಅಧಿಕಾರಿ ಬುಧವಾರ (ಜೂ.09) ರಂದು ದೂರನ್ನು ನೀಡಿದ್ದಾರೆ.  

ನೈಋತ್ಯ ವಿಭಾಗದ ಡಿಸಿಪಿ ಪ್ರತಾಪ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು,  ಐಪಿಸಿ ಸೆಕ್ಷನ್ 188 (ಸಾರ್ವಜನಿಕ ಸೇವೆಯಲ್ಲಿರುವವರು ಘೋಷಿಸಲಾದ ಆದೇಶಕ್ಕೆ ಅವಿಧೇಯರಾಗಿರುವುದು) ದೆಹಲಿ ವಿಪತ್ತು ನಿರ್ವಹಣಾ ಕಾಯ್ದೆ, ಸಾರ್ವಜನಿಕ ಆಸ್ತಿ ಹಾನಿ ತಡೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. 

ಈ ವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ. ವಿದ್ಯಾರ್ಥಿಗಳ ಗೂಂಡಾವರ್ತನೆಯಿಂದ ಸಿಬ್ಬಂದಿಗಳು, ಬೇರೆ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com