ಆನ್‌ಲೈನ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಕ್ಕಾಗಿ ಜಗಳ: ಸಂಗಾತಿಯೇ ಇಟ್ಟ ಬೆಂಕಿಗೆ ಯುವತಿ ಬಲಿ!

ಇನ್ಸ್ಟಾಗ್ರಾಮ್ ನಲ್ಲಿ ನಿರಂತರವಾಗಿ ವಿಡಿಯೋಗಳನ್ನು ಫೋಸ್ಟ್ ಮಾಡಿದ್ದಕ್ಕೆ ಉಂಟಾದ ಜಗಳದಿಂದ ಸಂಗಾತಿಯೇ ಇಟ್ಟ ಬೆಂಕಿಗೆ  28 ವರ್ಷದ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಮೃತ ಯುವತಿಯನ್ನು ಆತಿರಾ ಎಂದು ಗುರುತಿಸಲಾಗಿದೆ.

Published: 10th June 2021 05:51 PM  |   Last Updated: 10th June 2021 06:54 PM   |  A+A-


Casual_Images1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಕೊಲ್ಲಂ: ಇನ್ಸ್ಟಾಗ್ರಾಮ್ ನಲ್ಲಿ ನಿರಂತರವಾಗಿ ವಿಡಿಯೋಗಳನ್ನು ಫೋಸ್ಟ್ ಮಾಡಿದ್ದಕ್ಕೆ ಉಂಟಾದ ಜಗಳದಿಂದ ಸಂಗಾತಿಯೇ ಇಟ್ಟ ಬೆಂಕಿಗೆ  28 ವರ್ಷದ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಮೃತ ಯುವತಿಯನ್ನು ಆತಿರಾ ಎಂದು ಗುರುತಿಸಲಾಗಿದೆ. ಸುಟ್ಟ ಗಾಯಗಳಿಂದಾಗಿ ಈಕೆಗೆ ತಿರುವನಂತಪುರಂ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾಳೆ.

ಕೊಲ್ಲಂನ ಎಡಾಮುಲಕಲ್ ನಲ್ಲಿ ಈ ಘಟನೆ ನಡೆದಿದೆ.  ಇನ್ಸ್ಟಾಗ್ರಾಮ್ ನಲ್ಲಿ ನಿರಂತರವಾಗಿ ವಿಡಿಯೋ ಫೋಸ್ಟ್ ಮಾಡಿದ್ದಕ್ಕಾಗಿ ಇಬ್ಬರ ನಡುವೆ ಜಗಳ ನಡೆದ ನಂತರ ಮಂಗಳವಾರ ಸಂಜೆ ಸಂಬಂಧ ಹೊಂದಿದ್ದ ಶಾನವಾಸ್ ಯುವತಿಗೆ ಬೆಂಕಿ ಹಚ್ಚಿದ್ದಾನೆ. ಸೈನ್ ಆತಿರಾ ತನ್ನ ಸಂಗಾತಿಯ ವಿರೋಧದ ನಡುವೆಯೂ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದಳು, ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ಶಾನವಾಸ್ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತಿರಾಗೆ ಬೆಂಕಿ ಹಚ್ಚಿದ ನಂತರ ಶಾನವಾಸ್ ಕೂಡಾ ಬೆಂಕಿ ಹಚ್ಚಿಕೊಂಡಿದ್ದು, ಶೇ.40 ರಷ್ಟು ಸುಟ್ಟಗಾಯಗಳಿಂದಾಗಿ ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇವರಿಬ್ಬರು ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಅವರು ಕಾನೂನು ರೀತಿಯಲ್ಲಿ ಮದುವೆಯಾಗಿರಲಿಲ್ಲ. ದಂಪತಿಗೆ ಆರು ತಿಂಗಳ ಮಗು ಇರುವುದಾಗಿ ಪೊಲೀಸರು ಹೇಳಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp