ಕೋವಿಶೀಲ್ಡ್ ಲಸಿಕೆಯ 2 ಡೋಸ್ ಗಳ ನಡುವಿನ ಅಂತರದ ಬಗ್ಗೆ ಗೊಂದಲ ಅನಗತ್ಯ; ಅತಂಕ ಬೇಡ: ಕೇಂದ್ರ ಸರ್ಕಾರ

ಕೋವಿಶೀಲ್ಡ್ ಲಸಿಕೆಯ 2 ಡೋಸೇಜ್ ಗಳ ನಡುವಿನ ಅಂತರದ ಬದಲಾವಣೆಗೆ ಸಂಬಂಧಿಸಿದಂತೆ ಜನರು ಆತಂಕಗೊಳ್ಳುವುದು ಬೇಕಿಲ್ಲ. ಈ ಕುರಿತ ಗೊಂದಲ ಅನಗತ್ಯ ಎಂದು ಕೇಂದ್ರ ಸರ್ಕಾರ ಒತ್ತಿ ಹೇಳಿದೆ.
ಕೋವಿಶೀಲ್ಡ್
ಕೋವಿಶೀಲ್ಡ್

ನವದೆಹಲಿ: ಕೋವಿಶೀಲ್ಡ್ ಲಸಿಕೆಯ 2 ಡೋಸೇಜ್ ಗಳ ನಡುವಿನ ಅಂತರದ ಬದಲಾವಣೆಗೆ ಸಂಬಂಧಿಸಿದಂತೆ ಜನರು ಆತಂಕಗೊಳ್ಳುವುದು ಬೇಕಿಲ್ಲ. ಈ ಕುರಿತ ಗೊಂದಲ ಅನಗತ್ಯ ಎಂದು ಕೇಂದ್ರ ಸರ್ಕಾರ ಒತ್ತಿ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿಕೆ ಪಾಲ್ ಅವರು, ಕೋವಿಶೀಲ್ಡ್ ಲಸಿಕೆಯ 2 ಡೋಸೇಜ್ ಗಳ ನಡುವಿನ ಅಂತರದ ಬದಲಾವಣೆಗೆ ಸಂಬಂಧಿಸಿದಂತೆ ಜನರು ಆತಂಕಗೊಳ್ಳುವುದು ಬೇಕಿಲ್ಲ. ಈ ಕುರಿತ ಗೊಂದಲ ಅನಗತ್ಯವಾಗಿದ್ದು, ಅಂತಹ ಆತಂಕಗಳನ್ನು  ಸಮತೋಲನಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೋವಿಡ್-19 ಸೋಂಕು ಪ್ರಸರಣದ ಮಾಹಿತಿ ತಿಳಿಯಲು ಐಸಿಎಂಆರ್ ನಿಂದ ಶೀಘ್ರದಲ್ಲೇ ದೇಶಾದ್ಯಂತ ಸೆರೋ ಸರ್ವೆ: ಆರೋಗ್ಯ ಸಚಿವಾಲಯ

ಕೋವಿಡ್-19 ಕುರಿತು ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ಲಸಿಕೆಯ ಕುರಿತು ಯಾವುದೇ ಭೀತಿಯ ಅಗತ್ಯವಿಲ್ಲ, ತಕ್ಷಣದ ಸ್ವಿಚ್ ಓವರ್ ಅಥವಾ ಡೋಸೇಜ್‌ಗಳ ನಡುವಿನ ಅಂತರದ ಬದಲಾವಣೆ ವೈಜ್ಞಾನಿಕವಾದದ್ದು. ಈ ಎಲ್ಲಾ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ  ತೆಗೆದುಕೊಳ್ಳಲಾಗುತ್ತದೆ. ಲಸಿಕೆಯ ಡೊಸೇಜ್ ಗಳ ನಡುವಿನ ಅಂತರವನ್ನು ಹೆಚ್ಚಿಸಿದಾಗ, ಕೇವಲ ಒಂದು ಡೋಸ್ ಪಡೆದವರಿಗೆ ವೈರಸ್‌ನಿಂದ ಉಂಟಾಗುವ ಅಪಾಯವನ್ನು ನಾವು ಪರಿಗಣಿಸಬೇಕಾಗಿತ್ತು. ಆದರೆ ಹೆಚ್ಚಿನ ಜನರು ನಂತರ ಮೊದಲ ಡೋಸ್ ಅನ್ನು ಪಡೆಯಲು ಸಾಧ್ಯವಾಗುತ್ತದೆ, ಇದು ಹೆಚ್ಚಿನ  ಜನರಿಗೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕೋವಿಡ್-19: 'ಕೋವ್ಯಾಕ್ಸಿನ್' ತುರ್ತು ಬಳಕೆಗೆ ಅಮೆರಿಕಾ ಎಫ್ ಡಿಎ ಅನುಮತಿ ನಿರಾಕರಣೆ!

ಸಾರ್ವಜನಿಕ ವಲಯದಲ್ಲಿ ನಾವು ಈ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಿದ್ದೇವೆ. ಆದರೆ ಇಂತದ ಕಠಿಣ ಮತ್ತು ಪ್ರಮುಖ ನಿರ್ಧಾರಗಳನ್ನು ಈ ಬಗ್ಗೆ ಜ್ಞಾನವುಳ್ಳ ಶ್ರೇಷ್ಠ ವ್ಯಕ್ತಿಗಳನ್ನು ಒಳಗೊಂಡ ಸೂಕ್ತ ವೇದಿಕೆಯಿಂದ ತೆಗೆದುಕೊಳ್ಳಬೇಕಾಗಿದೆ ಎಂದು ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಶನ್  (ರಾಷ್ಟ್ರೀಯ ರೋಗನಿರೋಧಕ ತಾಂತ್ರಿಕ ಸಲಹಾ ಸಮಿತಿ)(ಎನ್‌ಟಿಎಜಿಐ) ಸಭೆಯಲ್ಲಿ ಪೌಲ್ ಹೇಳಿದರು. 

ಎನ್‌ಟಿಎಜಿಐ ನಿರ್ಧಾರಗಳನ್ನು ಗೌರವಿಸಿ
ರಾಷ್ಟ್ರೀಯ ರೋಗನಿರೋಧಕ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ) ಕೂಡ ಜಾಗತಿಕ ಮತ್ತು ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಎನ್‌ಟಿಎಜಿಐ ಅನ್ನು ಕೂಡ ಒಂದು ಮಾನದಂಡವೆಂದು ಪರಿಗಣಿಸಲಾಗುತ್ತದೆ. ದಯವಿಟ್ಟು ಅದರ ನಿರ್ಧಾರಗಳನ್ನು ಗೌರವಿಸಿ, ಇದರ ನಿರ್ಧಾರಗಳನ್ನು  ವಿಶ್ಲೇಷಿಸುವಾಗ ವೈಜ್ಞಾನಿಕವಾದ ಮೇಲ್ಕಂಡ ಅಂಶಗಳನ್ನು ಉಲ್ಲೇಖಿಸಿ ಎಂದು ಪೌಲ್ ಮನವಿ ಮಾಡಿದ್ದಾರೆ.  

ಬ್ರಿಟನ್ ಮಾದರಿ
ಕೋವಿಡ್ ಲಸಿಕೆಗಳ 2 ಡೋಸ್ ಗಳ ನಡುವಿನ ಅಂತರಕ್ಕೆ ಸಂಬಂಧಿಸಿದ ನಿರ್ಧಾರವನ್ನು ಸರಿಯಾದ ಪ್ರಕ್ರಿಯೆಯ ಪ್ರಕಾರ ಎನ್‌ಟಿಎಜಿಐ ಪರೀಕ್ಷಿಸುತ್ತದೆ. ಅಂತರದ ಬಗ್ಗೆ ತಮ್ಮ ಹಿಂದಿನ ನಿರ್ಧಾರವನ್ನು ಪರಿಷ್ಕರಿಸಲು ಯುನೈಟೆಡ್ ಕಿಂಗ್‌ಡಮ್ ಸರಿಯಾದ ಪ್ರಕ್ರಿಯೆಯನ್ನು ಅಳವಡಿಸಿಕೊಂಡಿರಬೇಕು ಮತ್ತು  ಡೇಟಾವನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು. ಬ್ರಿಟನ್ ಈ ಮೊದಲು 2 ಡೋಸ್ ಗಳ ನಡುವೆ 12 ವಾರಗಳಲ್ಲಿ ಅಂತರವನ್ನು ಇಟ್ಟುಕೊಂಡಿತ್ತು, ಆದರೆ ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಆ ಸಮಯದಲ್ಲಿ ನಾವು ಅದನ್ನು ಸುರಕ್ಷಿತವೆಂದು ಪರಿಗಣಿಸಲಿಲ್ಲ. ಆದ್ದರಿಂದ, ಇದನ್ನು ನಮ್ಮ ವೈಜ್ಞಾನಿಕ  ವೇದಿಕೆಗಳಲ್ಲಿ ಪರಿಶೀಲಿಸಿ ಪರಿಹರಿಸಬೇಕು. ದೇಶದಲ್ಲಿ ಡೆಲ್ಟಾ ರೂಪಾಂತರದ ವ್ಯಾಪ್ತಿಯನ್ನು ಅವಲಂಬಿಸಿ ನಂತರ ಸಮಗ್ರವಾಗಿ ತನಿಖೆ ನಡೆಸಿ ತಜ್ಞರು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಮ್ಮ ವೈಜ್ಞಾನಿಕ ಸಮುದಾಯವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದನ್ನು ನಾವು ಗೌರವಿಸುತ್ತೇವೆ ಎಂದು ಪಾಲ್  ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com