ಟಿಆರ್‌ಎಸ್ ಸಂಸದ ನಾಗೇಶ್ವರ ರಾವ್ ಕಚೇರಿ ಮೇಲೆ ಇಡಿ ದಾಳಿ, ಶೋಧ ಕಾರ್ಯ!

ಟಿಆರ್‌ಎಸ್ ಸಂಸದ ನಾಮ ನಾಗೇಶ್ವರ ರಾವ್ ಗೆ ಸೇರಿದ ಮಧುಕಾನ್ ಗ್ರೂಪ್‌ನ ಕೆಲವು ಕಚೇರಿಗಳ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಮ ನಾಗೇಶ್ವರ್ ರಾವ್
ನಾಮ ನಾಗೇಶ್ವರ್ ರಾವ್

ಹೈದರಾಬಾದ್: ಟಿಆರ್‌ಎಸ್ ಸಂಸದ ನಾಮ ನಾಗೇಶ್ವರ ರಾವ್ ಗೆ ಸೇರಿದ ಮಧುಕಾನ್ ಗ್ರೂಪ್‌ನ ಕೆಲವು ಕಚೇರಿಗಳ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಶೋಧ ಕಾರ್ಯ ಮಧುಕಾನ್ ಗ್ರೂಪ್ ಕಂಪನಿಯು ರಾಂಚಿ ಎಕ್ಸ್‌ಪ್ರೆಸ್‌ವೇ ಲಿಮಿಟೆಡ್‌ನ ನಿಧಿಯನ್ನು ತಿರುಗಿಸುವುದಕ್ಕೆ ಸಂಬಂಧಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಬಿಲಿ ಹಿಲ್ಸ್‌ನ ಮಧುಕಾನ್ ಕಚೇರಿ ಹಾಗೂ ಕಚೇರಿಯ ಕೆಲ ನಿರ್ದೇಶಕರ ಮನೆಗಳ ಮೇಲೂ ದಾಳಿ ನಡೆಸಿ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೆನರಾ ಬ್ಯಾಂಕ್ ನೇತೃತ್ವದ ಬ್ಯಾಂಕುಗಳ ಒಕ್ಕೂಟಕ್ಕೆ 1,000 ಕೋಟಿ ರೂ.ಗಳ ನಷ್ಟವನ್ನುಂಟು ಮಾಡಿದೆ ಎಂಬ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ(ಸಿಬಿಐ) ಮಾರ್ಚ್ 2020 ರಲ್ಲಿ ರಾಂಚಿ ಎಕ್ಸ್‌ಪ್ರೆಸ್‌ವೇ ಲಿಮಿಟೆಡ್‌ನ ಸಿಎಂಡಿ ಕೆ ಶ್ರೀನಿವಾಸ ರಾವ್ ಸೇರಿದಂತೆ ಪ್ರವರ್ತಕರ ವಿರುದ್ಧ ಪ್ರಕರಣ ದಾಖಲಿಸಿದೆ.

ಬ್ಯಾಂಕುಗಳ ಒಕ್ಕೂಟವು ಬಿಡುಗಡೆ ಮಾಡಿದ ಒಟ್ಟು 1,029.39 ಕೋಟಿ ರೂ.ಗಳ ಸಾಲವನ್ನು ಪಡೆಯಲು ನಿರ್ದೇಶಕರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ 2018ರಲ್ಲಿ ಸಾಲವು ಕಾರ್ಯನಿರ್ವಹಿಸದ ಆಸ್ತಿಯಾಗಿರುವುದರಿಂದ ಯೋಜನೆಯಲ್ಲಿ ಯಾವುದೇ ಪ್ರಗತಿ ಸಾಧಿಸಲಾಗಿಲ್ಲ ಎಂದು ಸಿಬಿಐ ತಿಳಿಸಿದೆ.

2019ರ ಜನವರಿ 31ರಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಂಪನಿಯೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com