ಹೈದರಾಬಾದ್: ಹುಡುಗಿಯ ಹೊಟ್ಟೆಯಿಂದ 2 ಕೆಜಿ ಕೂದಲು ಹೊರತೆಗೆದು, ಪುನರ್ಜನ್ಮ ನೀಡಿದ ವೈದ್ಯರು

ತೆಲಂಗಾಣದ ಉಸ್ಮಾನಿಯಾ ಜನರಲ್ ಆಸ್ಪತ್ರೆ ವೈದ್ಯರು 'ರಾಪುಂಜೆಲ್ ಸಿಂಡ್ರೋಮ್' ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 17 ವರ್ಷದ ಹುಡುಗಿಯ ಹೊಟ್ಟೆಯಿಂದ 2 ಕೆಜಿ ಕೂದಲನ್ನು ತೆಗೆದು ಹಾಕಿ ಹುಡುಗಿಗೆ ಪುನರ್ ಜನ್ಮ ನೀಡಿದ್ದಾರೆ. 
ಹೊಟ್ಟೆಯಿಂದ ಹೊರತೆಗೆದಿರುವ ಕೂದಲು
ಹೊಟ್ಟೆಯಿಂದ ಹೊರತೆಗೆದಿರುವ ಕೂದಲು

ಹೈದರಾಬಾದ್: ತೆಲಂಗಾಣದ ಉಸ್ಮಾನಿಯಾ ಜನರಲ್ ಆಸ್ಪತ್ರೆ ವೈದ್ಯರು 'ರಾಪುಂಜೆಲ್ ಸಿಂಡ್ರೋಮ್' ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ 17 ವರ್ಷದ ಹುಡುಗಿಯ ಹೊಟ್ಟೆಯಿಂದ 2 ಕೆಜಿ ಕೂದಲನ್ನು ತೆಗೆದು ಹಾಕಿ ಹುಡುಗಿಗೆ ಪುನರ್ ಜನ್ಮ ನೀಡಿದ್ದಾರೆ. 

ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಅಪ್ರಾಪ್ತ ಬಾಲಕಿ ಹೊಟ್ಟೆ ಹಸಿವಿನಿಂದ ತಮ್ಮ ಕೂದಲನ್ನು ಸೇವಿಸುತ್ತಾ ಬಂದಿದ್ದಾಳೆ. ಶಂಶಾಬಾದ್‌ನ ಹುಡುಗಿ ಕಳೆದ 5 ತಿಂಗಳಿಂದ ಕೂದಲನ್ನು ತಿನ್ನುತ್ತಾ ಬಂದಿದ್ದಾಳೆ. ಹೀಗಾಗಿ ಉಸ್ಮಾನಿಯ ಆಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದರ್ ಬಿ ಅವರನ್ನೊಳಗೊಂಡ ವೈದ್ಯರ ತಂಡವು 150 ಸೆಂ.ಮೀ ಉದ್ದದ ಸುಮಾರು 2 ಕೆಜಿ ಕೂದಲನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ. 

ವಿಶ್ವದ್ಯಂತ ನಡೆದಿರುವ ಪ್ರಕರಣಗಳ ಪೈಕಿ ಹೊಟ್ಟೆಯಿಂದ ಹೊರತೆಗೆದಿರುವ ಅತಿ ಉದ್ದ ಕೂದಲಾಗಿದೆ. ಇದು ಹೊಟ್ಟೆಯಿಂದ ಸಣ್ಣ ಕರುಳಿನವರೆಗೂ ಹೋಗಿತ್ತು. ಜಗತ್ತಿನಾದ್ಯಂತ ಇಂತಹ 68 ಪ್ರಕರಣಗಳು ಮಾತ್ರ ವರದಿಯಾಗಿವೆ. 

ಆಸ್ಪತ್ರೆಯಲ್ಲಿ ನಾವು ಈ ಮೊದಲು ರಾಪುಂಜೆಲ್ ಸಿಂಡ್ರೋಮ್‌ಗೆ ಚಿಕಿತ್ಸೆ ನೀಡಿದ್ದೇವೆ ಎಂದು ಡಾ.ನಾಗೇಂದರ್ ಹೇಳಿದರು. 150 ಸೆಂ.ಮೀ ಕೂದಲಿನಲ್ಲಿ ಪೈಕಿ 30 ಸೆಂ.ಮೀ ಹೊಟ್ಟೆಯಲ್ಲಿ ಮತ್ತು 120 ಸೆಂ.ಮೀ ಸಣ್ಣ ಕರುಳಿನಿಂದ ಜೂನ್ 2ರಂದು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ. ವಾಂತಿ ಮತ್ತು ಹೊಟ್ಟೆ ನೋವಿನಿಂದಾಗಿ ಒಂದು ತಿಂಗಳ ಹಿಂದೆ ಹುಡುಗಿ ಆಸ್ಪತ್ರೆಗೆ ದಾಖಲಾಗಿದ್ದಳು. ತನ್ನ ಸ್ವಂತ ಕೂದಲನ್ನು ಹುಡುಗಿ ತಿನ್ನುತ್ತಿದ್ದಳು ಎಂದು ಆಕೆಯ ಸಹೋದರಿ ನಮಗೆ ಮಾಹಿತಿ ನೀಡಿದಳು ಎಂದು ವೈದ್ಯರು ತಿಳಿಸಿದ್ದಾರೆ. 

ಆಕೆ ಆಸ್ಪತ್ರೆಗೆ ದಾಖಲಾಗಿದ್ದ ಸಮಯದಲ್ಲಿ ಆಕೆಗೆ ಕೊರೋನಾ ಪಾಸಿಟಿವ್ ಬಂದಿದ್ದರಿಂದ ಆಕೆಗೆ ಮೊದಲು ಕೋವಿಡ್ ಚಿಕಿತ್ಸೆ ಕೊಡಿಸಿ ಅದರಿಂದ ಚೇತರಿಸಿಕೊಂಡ ಬಳಿಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಅಪೌಷ್ಟಿಕತೆಯಿಂದ ಬಳಲುತ್ತಿರುವ ರೋಗಿಗೆ ಅರಿವಳಿಕೆ ಮದ್ದು ನೀಡುವುದು ವೈದ್ಯರಿಗೆ ದೊಡ್ಡ ಸವಾಲಾಗಿತ್ತು ಎಂದು ಶಸ್ತ್ರಚಿಕಿತ್ಸೆ ವಿಭಾಗ ಮತ್ತು ಅರಿವಳಿಕೆ ವಿಭಾಗದ ಐವರು ಹಿರಿಯ ಪ್ರಾಧ್ಯಾಪಕರು ಡಾ.ಪಾಂಡು ನಾಯಕ್, ಡಾ.ಕೆ.ರಾಣಿ, ಡಾ.ಜಿ.ಅನಿಲ್ ಕುಮಾರ್, ಮತ್ತು ಡಾ.ಪವನ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com