ಜಿತಿನ್ ಪ್ರಸಾದ ಸೇರ್ಪಡೆ ಕುರಿತು ಬಿಜೆಪಿಯನ್ನು ಅಣಕಿಸಿದ ಶಿವಸೇನೆ: ಸದೃಢ ತಂಡ ಕಟ್ಟಲು ಕಾಂಗ್ರೆಸ್ ಗೆ ಸಲಹೆ

ಉತ್ತರ ಪ್ರದೇಶ ಮುಖಂಡ ಜಿತಿನ್ ಪ್ರಸಾದ ಅವರನ್ನು ಪಕ್ಷದೊಳಗೆ ಸೇರಿಸಿಕೊಂಡು ಬಿಜೆಪಿ ಸಂಭ್ರಮಿಸುತ್ತಿರುವುದು ಹಾಸ್ಯಾಸ್ಪದ ಎಂದು ಶಿವಸೇನೆ ಶುಕ್ರವಾರ ಬಣ್ಣಿಸಿದೆ. ಆದರೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ತನ್ನ ಪಕ್ಷದೊಳಗೆ ಸದೃಢ ತಂಡವೊಂದನ್ನು ರಚಿಸಲಿದ್ದಾರೆ ಎಂದು ಹೇಳಿದೆ.
ಜಿತಿನ್ ಪ್ರಸಾದ
ಜಿತಿನ್ ಪ್ರಸಾದ

ಮುಂಬೈ: ಉತ್ತರ ಪ್ರದೇಶ ಮುಖಂಡ ಜಿತಿನ್ ಪ್ರಸಾದ ಅವರನ್ನು ಪಕ್ಷದೊಳಗೆ ಸೇರಿಸಿಕೊಂಡು ಬಿಜೆಪಿ ಸಂಭ್ರಮಿಸುತ್ತಿರುವುದು ಹಾಸ್ಯಾಸ್ಪದ ಎಂದು ಶಿವಸೇನೆ ಶುಕ್ರವಾರ ಬಣ್ಣಿಸಿದೆ. ಆದರೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ತನ್ನ ಪಕ್ಷದೊಳಗೆ ಸದೃಢ ತಂಡವೊಂದನ್ನು ರಚಿಸಲಿದ್ದಾರೆ ಎಂದು ಹೇಳಿದೆ.

ಯುವ ನಾಯಕರಾಗಿದ್ದ ಜಿತಿನ್ ಪ್ರಸಾದ  ಕಾಂಗ್ರೆಸ್ ಪಕ್ಷಕ್ಕೆ ಪ್ರಯೋಜನಕಾರಿಯಾಗಿರಿಲಲ್ಲ, ಬಿಜೆಪಿಯಲ್ಲೂ ಅದೇ ರೀತಿಯಲ್ಲಿ ಇರಲಿದ್ದಾರೆ ಎಂದು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ಜಿತಿನ್ ಪ್ರಸಾದ, ಜೋತ್ಯಿರಾದಿತ್ಯ ಸಿಂಧಿಯಾ, ಸಚಿನ್ ಪೈಲಟ್ ಯುವ ಮುಖಂಡರಾಗಿದ್ದು, ಅವರಿಂದ ಹೆಚ್ಚಿನದ್ದನ್ನು ನಿರೀಕ್ಷಿಸಲಾಗುತ್ತದೆ. ಅಹ್ಮದ್ ಪಟೇಲ್, ರಾಜೀವ್ ಸತಾವ್ ನಿಧನದ ನಂತರ ಕಾಂಗ್ರೆಸ್ ನಲ್ಲಿ ಈಗಾಗಲೇ ನಿರ್ವಾತವಿದೆ. ಯುವ ಮುಖಂಡರು ಬಿಜೆಪಿ ಹಾದಿಯಲ್ಲಿ ಸಾಗುವುದು ಒಳ್ಳೆಯದಲ್ಲಾ ಎಂದು ಶಿವಸೇನೆ ಹೇಳಿದೆ.

ಪ್ರಸಾದ ಅವರ ಕುಟುಂಬಸ್ಥರು ಕಾಂಗ್ರೆಸ್ ಪಕ್ಷದ ನಂಬಿಕಸ್ತರು. ಮನ್ ಮೋಹನ್ ಸಿಂಗ್ ಅವರ ಮಂತ್ರಿ ಮಂಡಲದಲ್ಲಿ ಪ್ರಸಾದ ಕೂಡಾ ಮಂತ್ರಿಯಾಗಿದ್ದರು. ಆದಾಗ್ಯೂ, ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು. ಇದೀಗ ಅವರನ್ನು ಸೇರ್ಪಡೆ ಮಾಡಿಕೊಂಡು ಬಿಜೆಪಿ ಸಂಭ್ರಮಿಸುತ್ತಿದೆ. ಜಾತಿ ರಾಜಕಾರಣ ಇದರ ಹಿಂದೆ ಇದೆ. ಉತ್ತರ ಪ್ರದೇಶದಲ್ಲಿನ ಬ್ರಾಹ್ಮಣ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಶಿವಸೇನೆ ಹೇಳಿದೆ.

ಬಂಡಾಯ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ, ಮುಂದೆ ಏನು ಮಾಡಬೇಕು, ಹೇಗೆ ಪಕ್ಷದ ಆಸ್ತಿತ್ವ ಉಳಿಸಿಕೊಳ್ಳಬೇಕೆಂಬ ಬಗ್ಗೆ ಕಾಂಗ್ರೆಸ್ ನಲ್ಲಿ ಚರ್ಚೆ ನಡೆಯುತ್ತಿಲ್ಲ. ಮಹಾರಾಷ್ಟ್ರ, ಕೇರಳ, ಮತ್ತು ಕರ್ನಾಟಕ ಹೊರತುಪಡಿಸಿದಂತೆ ಉಳಿದ ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ಆಸ್ತಿತ್ವಕ್ಕಾಗಿ ಹೋರಾಡಬೇಕಾಗಿದೆ. ಈ ರಾಜಕೀಯ ಅಸಮಾತೋಲನ ಪ್ರಜಾಪ್ರಭುತ್ವಕ್ಕೆ ಹಾನಿಯಾಗಲಿದೆ. ದೇಶ ಸ್ಥಾಪನೆಯಲ್ಲಿ ಕಾಂಗ್ರೆಸ್ ಕೊಡುಗೆ ನೀಡಿದೆ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕಾಗಿದೆ. ರಾಹುಲ್ ಗಾಂಧಿ ಈಗ ಪಕ್ಷದೊಳಗೆ ಸದೃಢ ತಂಡ ರಚಿಸಬೇಕಾಗಿದೆ ಎಂದು ಶಿವಸೇನೆ ಸಲಹೆ ನೀಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com