ದೈನಂದಿನ ಕೋವಿಡ್-19 ದತ್ತಾಂಶ ಪರಿಷ್ಕರಣೆ ವೇಳೆ ನಿಗದಿತ ಮಾರ್ಗಸೂಚಿಗಳ ಪಾಲನೆ ಕಡ್ಡಾಯ: ರಾಜ್ಯಗಳಿಗೆ ಆರೋಗ್ಯ ಇಲಾಖೆ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ದೈನಂದಿನ ಕೋವಿಡ್-19 ದತ್ತಾಂಶ ಪರಿಷ್ಕರಣೆ ವೇಳೆ ನಿಗದಿತ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಕೋವಿಡ್-19
ಕೋವಿಡ್-19

ನವದೆಹಲಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ದೈನಂದಿನ ಕೋವಿಡ್-19 ದತ್ತಾಂಶ ಪರಿಷ್ಕರಣೆ ವೇಳೆ ನಿಗದಿತ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಜಿಲ್ಲಾವಾರು ಕೋವಿಡ್ ಪ್ರಕರಣಗಳು ಮತ್ತು ಸಾವುಗಳನ್ನು ಪ್ರತಿದಿನವೂ ಮೇಲ್ವಿಚಾರಣೆ ಮಾಡುವಾಗ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಗದಿತ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. 

ಈ ಹಿಂದೆ ಬಿಹಾರದಲ್ಲಿ ಸಂಭವಿಸಿದ್ದ ಕೋವಿಡ್ ಸಾವಿನ ಸಂಖ್ಯೆಯನ್ನು ರಾಜ್ಯ ಆರೋಗ್ಯ ಇಲಾಖೆಯು ತಡವಾಗಿ ಪರಿಷ್ಕರಿಸಿತ್ತು. ರಾಜ್ಯ ಸರ್ಕಾರವು ದತ್ತಾಂಶ ಸಮನ್ವಯದ ನಂತರ ಬಿಹಾರದಲ್ಲಿ ಸಂಭವಿಸಿದ ಸಾವು-ನೋವುಗಳ ಸಂಖ್ಯೆಯಲ್ಲಿ 3,971 ಹೆಚ್ಚಾಗಿತ್ತು. ಆ ಮೂಲಕ ಸಾಂಕ್ರಾಮಿಕ ರೋಗದಿಂದ ಬಿಹಾರದಲ್ಲಿ  ಸಂಭವಿಸಿದ ಸಾವಿನ ಸಂಖ್ಯೆ 9,429 ಕ್ಕೆ ಏರಿಕೆಯಾಗಿದೆ.

ಇದೇ ವಿಚಾರವಾಗಿ ಇಲಾಖೆಯ ಸುದ್ದಿಗೋಷ್ಠಿಯಲ್ಲಿ ಸೂಚನೆ ನೀಡಿರುವ ಆರೋಗ್ಯ ಇಲಾಖೆ, ನಿಗದಿತ ಮಾರ್ಗಸೂಚಿಗಳಿಗೆ ಅನುಸಾರವಾಗಿ ಕೋವಿಡ್ ಸಾವುಗಳನ್ನು ವರದಿ ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಅಂತೆಯೇ ಔಪಚಾರಿಕ ಸಂವಹನ, ಬಹು ವಿಡಿಯೋ  ಸಮ್ಮೇಳನಗಳು ಮತ್ತು ಕೇಂದ್ರ ತಂಡಗಳನ್ನು ನಿಯೋಜಿಸುವ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪದೇ ಪದೇ ಸಲಹೆ ನೀಡಲಾಗಿದೆ. ಸೂಚಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಾವುಗಳನ್ನು ದಾಖಲಿಸಬೇಕು ಎಂದು ಸಚಿವಾಲಯ ತಿಳಿಸಿದೆ.

ಸಾವಿನ ಸಂಖ್ಯೆಯನ್ನು ವಿವರವಾದ ದಿನಾಂಕ ಮತ್ತು ಜಿಲ್ಲಾವಾರು ವಿಂಗಡಣೆಯನ್ನು ಆರೋಗ್ಯ ಸಚಿವಾಲಯಕ್ಕೆ ನೀಡುವಂತೆ ಕೇಂದ್ರ ಸರ್ಕಾರ ಬಿಹಾರಕ್ಕೆ ಪತ್ರ ಬರೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com