ಮುಂಬೈಯಲ್ಲಿ ಮುಂದುವರಿದ ಧಾರಾಕಾರ ಮಳೆ: ಅಂಧೇರಿ ಉಪನಗರದಲ್ಲಿ ಪ್ರವಾಹ, ಮುನ್ನೆಚ್ಚರಿಕೆ ಘೋಷಣೆ

ಕಳೆದ ಕೆಲವು ದಿನಗಳಿಂದ ತೀವ್ರ ಮಳೆ ಎದುರಿಸುತ್ತಿರುವ ಮುಂಬೈ ಮಹಾನಗರಿಯ ಹಲವು ಕಡೆಗಳಲ್ಲಿ ಪ್ರವಾಹವುಂಟಾಗಿದ್ದು ನಗರದ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿವೆ, ಇಲ್ಲಿ ಮುಂಬಾರು ಮಳೆ ಮೊನ್ನೆ 9ಕ್ಕೆ ಆಗಮಿಸಿದೆ.
ಮುಂಬೈಯ ಗೇಟ್ ವೇ ಬಳಿ ಕಂಡುಬಂದ ದೃಶ್ಯ
ಮುಂಬೈಯ ಗೇಟ್ ವೇ ಬಳಿ ಕಂಡುಬಂದ ದೃಶ್ಯ

ಮುಂಬೈ: ಕಳೆದ ಕೆಲವು ದಿನಗಳಿಂದ ತೀವ್ರ ಮಳೆ ಎದುರಿಸುತ್ತಿರುವ ಮುಂಬೈ ಮಹಾನಗರಿಯ ಹಲವು ಕಡೆಗಳಲ್ಲಿ ಪ್ರವಾಹವುಂಟಾಗಿದ್ದು ನಗರದ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿವೆ, ಇಲ್ಲಿ ಮುಂಬಾರು ಮಳೆ ಮೊನ್ನೆ 9ಕ್ಕೆ ಆಗಮಿಸಿದೆ.

ಇಂದು ಬೆಳಗ್ಗೆ ಸಿಯೊನ್ ಪೂರ್ವ ಮತ್ತು ಅಂಧೇರಿ ಉಪ ನಗರಗಳಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆ ನಾಳೆ ಮತ್ತು ನಾಡಿದ್ದು ಮುಂಬೈಯಲ್ಲಿ ತೀವ್ರ ಮಳೆಯುಂಟಾಗಿ ನೆರೆ, ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ವಿಪತ್ತು ನಿರ್ವಹಣಾ ಸಂಸ್ಥೆ ಮುನ್ನೆಚ್ಚರಿಕೆ ನೀಡಿದೆ.

ಜೂನ್ 13 ಮತ್ತು 14ರಂದು ಮುಂಬೈಯಲ್ಲಿ ತೀವ್ರ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಅಗ್ನಿ ಶಾಮಕ ದಳ, ವಿಪತ್ತು ನಿರ್ವಹಣಾ ದಳಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಮುಂಬೈ ಮಹಾನಗರ ಪಾಲಿಕೆಯ ಇಲಾಖೆಗಳಾದ ಬೆಸ್ಟ್, ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳಿಗೆ ಸಹಕಾರ ನೀಡುವಂತೆ ಪರಿಸ್ಥಿತಿಯನ್ನು ಎದುರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ಹೇಳಿಕೆಯಲ್ಲಿ ತಿಳಿಸಿದೆ.

ತುರ್ತು ಆಶ್ರಯ ತಾಣಗಳನ್ನು ಮುಂಬೈಯಲ್ಲಿ ಶಿಕ್ಷಣ ಇಲಾಖೆ ತೆರೆಯುತ್ತಿದೆ. ವಸತಿ ಪ್ರದೇಶಗಳನ್ನು ಮಿತಿ ನದಿಯ ಹತ್ತಿರ ಬೃಹನ್ ಮುಂಬೈ ಮಹಾನಗರ ಪಾಲಿಕೆ ಗುರುತಿಸಿದ್ದು ಪರಿಸ್ಥಿತಿ ಕೈಮೀರಿ ಹೋದರೆ ಜನರನ್ನು ಈ ಆಶ್ರಯ ತಾಣಗಳಿಗೆ ವರ್ಗಾಯಿಸಲಾಗುತ್ತದೆ. ಎನ್ ಡಿಆರ್ ಎಫ್, ಕರಾವಳಿ ಪಡೆ ಮತ್ತು ನೌಕಾಪಡೆ ಜೊತೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಸಮನ್ವಯ ಸಾಧಿಸುತ್ತಿದೆ. ಅಗತ್ಯಬಿದ್ದರೆ ಈ ಪಡೆಗಳು ಸಹಕಾರ ನೀಡಲಿವೆ ಎಂದು ಪಾಲಿಕೆ ಹೇಳಿಕೆಯಲ್ಲಿ ತಿಳಿಸಿದೆ.

ಚರಂಡಿ ಮತ್ತು ಕಾಲುವೆಗಳ ಮೇಲೆ ಕಸಗಳನ್ನು,ಬೇಡದ ವಸ್ತುಗಳನ್ನು ಬಿಸಾಕಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಕಿಶೋರಿ ಕಿಶೋರ್ ಪಡ್ನೇಕರ್ ತಿಳಿಸಿದ್ದಾರೆ.

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ಗಂಟೆಗಳಲ್ಲಿ ಹಗುರದಿಂದ ಕೂಡಿದ ಭಾರೀ ಮಳೆ ಸುರಿಯಲಿದ್ದು ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com