ತಮಿಳುನಾಡಿನಲ್ಲಿ ಜೂನ್‍ 21ರವರೆಗೆ ಲಾಕ್ ಡೌನ್‍ ವಿಸ್ತರಣೆ

ತಮಿಳುನಾಡಿನ ಅನೇಕ ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ದೈನಂದಿನ ಪ್ರಕರಣಗಳಲ್ಲಿ ಇಳಿಮುಖ ಕಂಡುಬರುತ್ತಿರುವ ನಡುವೆ ಕೆಲ ವಿನಾಯಿತಿಗಳೊಂದಿಗೆ ಲಾಕ್‍ ಡೌನ್‍ ಅನ್ನು ಇನ್ನೂ ಒಂದು ವಾರ ಅಂದರೆ, ಜೂನ್‍ 21ರವರಗೆ ವಿಸ್ತರಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ತಮಿಳುನಾಡಿನ ಅನೇಕ ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ದೈನಂದಿನ ಪ್ರಕರಣಗಳಲ್ಲಿ ಇಳಿಮುಖ ಕಂಡುಬರುತ್ತಿರುವ ನಡುವೆ ಕೆಲ ವಿನಾಯಿತಿಗಳೊಂದಿಗೆ ಲಾಕ್‍ ಡೌನ್‍ ಅನ್ನು ಇನ್ನೂ ಒಂದು ವಾರ ಅಂದರೆ, ಜೂನ್‍ 21ರವರಗೆ ವಿಸ್ತರಿಸಲಾಗಿದೆ.

ಆದರೆ, 11 ಜಿಲ್ಲೆಗಳಲ್ಲಿ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದು, ಸರ್ಕಾರ ಕನಿಷ್ಠ ವಿನಾಯಿತಿಗಳೊಂದಿಗೆ ಈ ಜಿಲ್ಲೆಗಳಲ್ಲಿ ಲಾಕ್ ಡೌನ್‍ ವಿಸ್ತರಿಸಿದೆ.

ಕಳೆದ ತಿಂಗಳ 10ರಂದು ಜಾರಿಗೊಳಿಸಲಾದ ಲಾಕ್‍ ಡೌನ್‍ ಅನ್ನು ಪ್ರತಿವಾರ ವಿಸ್ತರಿಸಲಾಗಿದ್ದು, ಸದ್ಯ ಇದು ಜೂನ್ 14ರಂದು ಬೆಳಿಗ್ಗೆ 6 ಗಂಟೆಗೆ ಕೊನೆಗೊಳ್ಳಬೇಕಿತ್ತು. ಆದರೆ, ಸಾಂಕ್ರಾಮಿಕ ಹರಡುವಿಕೆ ತಡೆಯಲು ಲಾಕ್‍ಡೌನ್‍ ಅನ್ನು ಇನ್ನೂ ಒಂದು ವಾರ ವಿಸ್ತರಿಸಲಾಗಿದೆ. 

ನಿರ್ಬಂಧ ಸಡಿಲ
ಇನ್ನು ಲಾಕ್ ಡೌನ್ ವಿಸ್ತರಣೆಯಾಗಿದ್ದರೂ, ಕೆಲ ಅಗತ್ಯ ಸೇವೆಗಳಿಗೆ ನಿರ್ಬಂಧ ಸಡಿಲಿಸಲಾಗಿದೆ. ಪ್ರಮುಖವಾಗಿ TASMAC ಅಂಗಡಿಗಳು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಬ್ಯೂಟಿ ಪಾರ್ಲರ್‌ಗಳು, ಸಲೂನ್ ಗಳು, ಸ್ಪಾಗಳು 50 ಪ್ರತಿಶತ ಗ್ರಾಹಕರೊಂದಿಗೆ  ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಬಹುದು.

ಸರ್ಕಾರಿ ಉದ್ಯಾನವನಗಳು ಬೆಳಿಗ್ಗೆ 6 ಗಂಟೆಗೆ ಮತ್ತು ಬೆಳಿಗ್ಗೆ 9 ಗಂಟೆಗೆ ವಾಕಿಂಗ್ ವ್ಯಾಯಾಮಕ್ಕಾಗಿ ಮಾತ್ರ ತೆರೆಯಲಾಗುತ್ತದೆ. ಕೃಷಿ ಉಪಕರಣಗಳನ್ನು ಸರಿಪಡಿಸುವ ಅಂಗಡಿಗಳು,  ಪಂಪ್ ಸೆಟ್‌ಗಳ ಅಂಗಡಿಗಳು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸುತ್ತವೆ. ಕನ್ನಡಕವನ್ನು ಮಾರಾಟ ಮಾಡುವ ಮತ್ತು ಸರಿಪಡಿಸುವ ಅಂಗಡಿಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಣೆ ಸೇರಿದಂತೆ ಹಲವು ನಿರ್ಬಂಧಗಳನ್ನು ಸಡಿಲಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com