ಗಂಗಾ ನದಿಯಲ್ಲಿ ಲೋಹದ ಮಾಲಿನ್ಯ ಪತ್ತೆ ಮಾಡಲು ಐಐಎಸ್ ಸಿ ಬಹುವಿಧ ಸಾಧನ ವ್ಯವಸ್ಥೆ

ಗಂಗಾ, ಗೋದಾವರಿ, ಕಾವೇರಿ ನದಿಗಳಲ್ಲಿನ ಲೋಹದ ಮಾಲಿನ್ಯ ಪ್ರಮಾಣವನ್ನು ನಿಖರವಾಗಿ ಪತ್ತೆ ಮಾಡುವುದಕ್ಕೆ ಐಐಎಸ್ ಸಿಯಲ್ಲಿರುವ ಬಹುವಿಧ ಸಾಧನಗಳನ್ನೊಳಗೊಂಡ ವ್ಯವಸ್ಥೆ ನೆರವಾಗಲಿದೆ.  
ಗಂಗಾ ನದಿ
ಗಂಗಾ ನದಿ

ಗಂಗಾ, ಗೋದಾವರಿ, ಕಾವೇರಿ ನದಿಗಳಲ್ಲಿನ ಲೋಹದ ಮಾಲಿನ್ಯ ಪ್ರಮಾಣವನ್ನು ನಿಖರವಾಗಿ ಪತ್ತೆ ಮಾಡುವುದಕ್ಕೆ ಐಐಎಸ್ ಸಿ ಯಲ್ಲಿರುವ ಬಹುವಿಧ ಸಾಧನಗಳನ್ನೊಳಗೊಂಡ ವ್ಯವಸ್ಥೆ ನೆರವಾಗಲಿದೆ.  

ವಿಶ್ವದಲ್ಲಿಯೆ ಅಗ್ರಮಾನ್ಯವಾದ ಟ್ರಿಪಲ್ ಕ್ವಾಡ್ರುಪೋಲ್ ಮಾಸ್ ಸ್ಪೆಕ್ಟ್ರೋಮೀಟರ್ ಮಾದರಿ ನದಿಗಳಲ್ಲಿ ಅತ್ಯಂತ ಕಡಿಮೆ ಸಾಂದ್ರತೆಯುಳ್ಳ ಮಾರಕ ಲೋಹಗಳಿಂದ ಉಂಟಾಗುವ ಮಾಲಿನ್ಯವನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ. 

ಈಗಾಗಲೇ ಗಂಗಾ ನದಿಯಿಂದ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿದ್ದು, ಲಾಕ್ ಡೌನ್ ಬಳಿಕ ಇದರ ವಿಶ್ಲೇಷಣೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. 

ಈ ಲೋಹ ವಿಶ್ಲೇಷಣೆಯನ್ನು ಫಾಸ್ಟ್ ಫಾರ್ವರ್ಡ್ ಟು ಎಸ್ ಜಿ ಡಿ6: ಭಾರತದ ಎರಡನೇ ಹಂತದ ನಗರಗಳಲ್ಲಿ ಸ್ವೀಕಾರಾರ್ಹ ಮತ್ತು ಒಳ್ಳೆ ನೀರು (4WARD) ' ಯೋಜನೆಯಡಿ ನಡೆಸಲಾಗುತ್ತಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಎರಡನೆ ಹಂತದ ನಗರಗಳಲ್ಲಿ ನೀರಿನ ಗುಣಮಟ್ಟವನ್ನು ತಿಳಿಯುವುದು ಈ ಯೋಜನೆಯ ಉದ್ದೇಶವಾಗಿದೆ. 

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಯೋಜನೆಯ ಪ್ರಧಾನ ಪರೀಕ್ಷಕ ಹಾಗೂ ಐಐಎಸ್ ಸಿ ಯ ಸಹಾಯಕ ಪ್ರಧ್ಯಾಪಕ  ಸಂಬುದ್ಧ ಮಿಶ್ರ ಮಾತನಾಡಿದ್ದು,  "ಲೋಹಪರೀಕ್ಷೆಗೆ ಗಂಗಾ ನದಿಯ ನೂರಾರು ಸ್ಯಾಂಪಲ್ ಗಳನ್ನು ಒಳಪಡಿಸಲಾಗಿದೆ. ಈ ಪೈಕಿ ಕೋಲ್ಕತ್ತಾದ ಉತ್ತರ ಭಾಗದಿಂಡ 60 ಕಿ.ಮೀ ದೂರವಿರುವ ಶ್ರೀರಾಮ್ ಪುರದಲ್ಲಿಯೂ ಫೆಬ್ರವರಿಯಲ್ಲಿ ಎರಡು ವಾರಗಳ ಕಾಲ ನಡೆದ ಸ್ಯಾಂಪ್ಲಿಂಗ್ ನಲ್ಲಿಯೂ ನಡೆಸಲಾಗಿದೆ" ಎಂದು ಹೇಳಿದ್ದಾರೆ. ಈ ಬಳಿಕ ತಮಿಳುನಾಡಿನ ಪಿಚವರಮ್ ನಲ್ಲಿರುವ ಕಾವೇರಿಯ ನದೀಮುಖದ ಬಳಿಯೂ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. 

"ನದೀಮುಖದ ಮಣ್ಣಿನ ಕಣಗಳಿಂದ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲೋಹದ ಅಂಶಗಳು ಕರಗುತ್ತವೆ ಆದ್ದರಿಂದ ಅಧ್ಯಯನಕ್ಕೆ ನದೀಮುಖಗಳಿಂದ ಸಂಗ್ರಹವಾಗುವ ಮಾದರಿಗಳು ಸಹಕಾರಿಯಾಗಿರಲಿದೆ" ಎಂದು ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com