ಜಮ್ಮು-ಕಾಶ್ಮೀರ: ಸೊಪೋರ್' ನಲ್ಲಿ ಭಯೋತ್ಪಾದಕ ದಾಳಿ ಹಿಂದೆ ಲಷ್ಕರ್ ಕೈವಾಡ!

ಜಮ್ಮು-ಕಾಶ್ಮೀರದ ಸೊಪೋರ್ ನಲ್ಲಿ ಜೂ.12 ರಂದು ನಡೆದ ಭಯೋತ್ಪಾದಕ ದಾಳಿಯ ಹಿಂದೆ ಲಷ್ಕರ್ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. 
ಡಿಜಿಪಿ ದಿಲ್ಬಾಗ್ ಸಿಂಗ್
ಡಿಜಿಪಿ ದಿಲ್ಬಾಗ್ ಸಿಂಗ್

ಶ್ರೀನಗರ: ಜಮ್ಮು-ಕಾಶ್ಮೀರದ ಸೊಪೋರ್ ನಲ್ಲಿ ಜೂ.12 ರಂದು ನಡೆದ ಭಯೋತ್ಪಾದಕ ದಾಳಿಯ ಹಿಂದೆ ಲಷ್ಕರ್ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. 

ಹುತಾತ್ಮ ಪೊಲೀಸ್ ಸಿಬ್ಬಂದಿಗಳಿಗೆ ಗೌರವ ಸಲ್ಲಿಸಿ ಮಾತನಾಡಿದ ಅವರು ದಾಳಿಯ ಸಂಚು ರೂಪಿಸಿದ್ದವರನ್ನು ಗುರುತಿಸಲಾಗಿದ್ದು ಶೀಘ್ರವೇ ಕಟಕಟೆಗೆ ತಂದು ನಿಲ್ಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಸೊಪೋರ್ ನ ಕೋವಿಡ್-19 ಕರ್ತವ್ಯ ನಿರತ ಪೊಲೀಸ್ ಠಾಣೆ ಮೇಲೆ ದಾಳಿ ನಡೆದಿದೆ. 

ಪ್ರತಿ ದಾಳಿ ನಡೆಸಿದರೂ ಸಹ ನಾಲ್ವರು ಪೊಲೀಸ್ ಸಿಬ್ಬಂದಿಗಳು ಹಾಗೂ ಮೂವರು ನಾಗರಿಕರಿಗೆ ಗಾಯಗಳಾಗಿದೆ ಎಂದು ಡಿಜಿಪಿ ಹೇಳಿದ್ದಾರೆ. ಪೊಲೀಸ್ ಪೇದೆ ವಸೀಮ್ ಹಾಗೂ ಶೌಕತ್ ತೀವ್ರ ಗಾಯಗಳಿಂದ ಸಾವನ್ನಪ್ಪಿದ್ದರೆ, ಸಬ್ ಇನ್ಸ್ ಪೆಕ್ಟರ್ ಮುಖೇಶ್ ಕುಮಾರ್ ಹಾಗೂ ಎಸ್ ಪಿಒ ದಿನೇಶ್ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ. 

ತೀವ್ರವಾಗಿ ಗಾಯಗೊಂಡ ಮೂವರು ನಾಗರಿಕರ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ತನಿಖೆಯಿಂದ ಉಗ್ರ ದಾಳಿ ನಡೆಸಿದ ಸಂಘಟನೆ ಬಗ್ಗೆ ಮಾಹಿತಿ ದೊರೆತಿದೆ. ಉಗ್ರರು ಇರುವ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದ್ದು ತಪ್ಪಿತಸ್ಥರು ಕಟಕಟೆಗೆ ಬಂದು ನಿಲ್ಲುವ ಭರವಸೆ ಇದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com