ಈವರೆಗೆ ರಾಜ್ಯಗಳಿಗೆ ಸುಮಾರು 25.87 ಕೋಟಿ ಡೋಸ್ ಕೋವಿಡ್ ಲಸಿಕೆ ಪೂರೈಕೆ: ಕೇಂದ್ರ

ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳಿಗೆ ಈವರೆಗೆ ಸುಮಾರು 25 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆ ಡೋಸ್ ಗಳನ್ನು ಪೂರೈಸಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

Published: 12th June 2021 03:49 PM  |   Last Updated: 12th June 2021 03:49 PM   |  A+A-


Represent purposes only

ಸಂಗ್ರಹ ಚಿತ್ರ

Posted By : Vishwanath S
Source : PTI

ನವದೆಹಲಿ: ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳಿಗೆ ಈವರೆಗೆ ಸುಮಾರು 25 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆ ಡೋಸ್ ಗಳನ್ನು ಪೂರೈಸಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಉಚಿತ ದರ ಹಾಗೂ ರಾಜ್ಯಗಳಿಂದ ನೇರ ಖರೀದಿ ಹಂತದಲ್ಲಿ ಈವರೆಗೂ 25,87,41,810 ಡೋಸ್ ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗಿದೆ. 24,76,58,855 ಡೋಸ್ ವ್ಯರ್ಥ ಡೋಸ್ ಕೂಡಾ ಇದರಲ್ಲಿ ಸೇರಿದೆ ಎಂದು ಇಂದು ಬೆಳಗ್ಗೆ ಮಾಹಿತಿ ನೀಡಲಾಗಿದೆ. 

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಲಸಿಕೆ ನೀಡಿಕೆಗಾಗಿ ಇನ್ನು 1,12,41,187 ಡೋಸ್ ಕೋವಿಡ್ ಲಸಿಕೆ ಲಭ್ಯವಿದೆ ಎಂದು ಸಚಿವಾಲಯ ಹೇಳಿದೆ. 

ಇನ್ನು 10,81,300 ಲಸಿಕೆ ಡೋಸ್ ಗಳು ಬರುತ್ತಿದ್ದು ಇವುಗನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇನ್ನು ಮೂರು ದಿನದಲ್ಲಿ ಸಿಗಲಿದೆ ಎಂದು ಹೇಳಿದೆ. 


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp