ಯುದ್ಧ ಇತಿಹಾಸ ರಹಸ್ಯ ದಾಖಲೆಗಳ ಬಹಿರಂಗ ನೀತಿಗೆ ಅನುಮೋದನೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಸಚಿವಾಲಯದ ಯುದ್ಧ ಇತಿಹಾಸಗಳ ಸಂಕಲನ, ರಹಸ್ಯ ದಾಖಲೆಗಳ ಬಹಿರಂಗ, ಹಳೆಯ ದಾಖಲೆಗಳ ಕುರಿತ ನೀತಿಗೆ ಅನುಮೋದನೆ ನೀಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಸಚಿವಾಲಯದ ಯುದ್ಧ ಇತಿಹಾಸಗಳ ಸಂಕಲನ, ರಹಸ್ಯ ದಾಖಲೆಗಳ ಬಹಿರಂಗ, ಹಳೆಯ ದಾಖಲೆಗಳ ಕುರಿತ ನೀತಿಗೆ ಅನುಮೋದನೆ ನೀಡಿದ್ದಾರೆ.

ರಕ್ಷಣಾ ಸಚಿವಾಲಯದಡಿ ಬರುವ ಸೇವೆಗಳು,  ಸಮಗ್ರ ರಕ್ಷಣಾ ಸಿಬ್ಬಂದಿ, ಅಸ್ಸಾಂ ರೈಫಲ್ಸ್  ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ್ ಸಮರಕ್ಕೆ ಸಂಬಂಧಿಸಿದ ದಿನಚರಿಗಳು, ವಿಚಾರಣೆಯ ಪತ್ರಗಳು ಹಾಗೂ ಕಾರ್ಯಾಚರಣೆಯ ದಾಖಲೆ ಪುಸ್ತಕಗಳು ಸೇರಿದಂತೆ  ತಮ್ಮ  ಬಳಿ ಇರುವ ಎಲ್ಲ ದಾಖಲೆಗಳನ್ನು ರಕ್ಷಣಾ ಸಚಿವಾಲಯದ ಇತಿಹಾಸ ವಿಭಾಗಕ್ಕೆ ವರ್ಗಾಯಿಸಲು ನೀತಿ ಅವಕಾಶ ಕಲ್ಪಿಸಲಿದೆ. ದಾಖಲೆಗಳನ್ನು ಸರಿಯಾಗಿ ಇರಿಸಲು,  ಇತಿಹಾಸಗಳನ್ನು ಬರೆಯಲು ಅನುಕೂಲವಾಗಲಿದೆ  ಎಂದು ರಕ್ಷಣಾ ಸಚಿವಾಲಯ ಹೇಳಿಕೆ ತಿಳಿಸಿದೆ.

ನೀತಿಯ ಪ್ರಕಾರ, ದಾಖಲೆಗಳನ್ನು ಸಾಮಾನ್ಯವಾಗಿ 25 ವರ್ಷಗಳಲ್ಲಿ ವರ್ಗೀಕರಿಸಬೇಕು. ಯುದ್ಧ  ಅಥವಾ  ಕಾರ್ಯಾಚರಣೆಯ ಇತಿಹಾಸಗಳನ್ನು ಸಂಕಲಿಸಿದ ನಂತರ 25 ವರ್ಷಕ್ಕಿಂತ ಹಳೆಯ ದಾಖಲೆಗಳನ್ನು  ಸಂಬಂಧಪಟ್ಟ ತಜ್ಞರು ಮೌಲ್ಯಮಾಪನ ನಡೆಸಿ ಭಾರತೀಯ ರಾಷ್ಟ್ರೀಯ ದಾಖಲೆಗಳಿಗೆ ವರ್ಗಾಯಿಸಬೇಕು.

ಯುದ್ಧದ ಇತಿಹಾಸಗಳ ಕುರಿತು ಜನರಿಗೆ ಸಮಯೋಚಿತ ಮಾಹಿತಿ ನೀಡುವುದರಿಂದ ಘಟನೆಗಳ ನಿಖರ ಮಾಹಿತಿ ಲಭ್ಯವಾಗಲಿದೆ. ಶೈಕ್ಷಣಿಕ ಸಂಶೋಧನೆಗೆ ಅಧಿಕೃತ  ಪುರಾವೆಗಳು ದೊರೆಯಲಿವೆ, ಆಧಾರರಹಿತ ವದಂತಿ ಹರಡುವುದನ್ನು ಇದರಿಂದ ತಡೆಗಟ್ಟಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com