ಕೋವಿಡ್-19 ವಿರುದ್ಧ ಹೋರಾಡಲು ಪ್ರತಿಕಾಯ ಕಾಕ್ಟೈಲ್ ಆಶಾಕಿರಣ: ಆದರೆ ದುಬಾರಿ ಬೆಲೆ!

ಸೌಮ್ಯ, ‌ಮಧ್ಯಮ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಪ್ರತಿಕಾಯ ಕಾಕ್ಟೈಲ್ ನ್ನು ಅನುಮೋದಿಸಿದ ಒಂದು ತಿಂಗಳಲ್ಲಿ ಗಮನಾರ್ಹ ಫಲಿತಾಂಶಗಳು ಪ್ರಕಟವಾಗಿದೆ ಎಂದು ಹಲವಾರು ಖಾಸಗಿ ಆಸ್ಪತ್ರೆಗಳು ಹೇಳಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಸೌಮ್ಯ, ‌ಮಧ್ಯಮ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಪ್ರತಿಕಾಯ ಕಾಕ್ಟೈಲ್ ನ್ನು ಅನುಮೋದಿಸಿದ ಒಂದು ತಿಂಗಳಲ್ಲಿ ಗಮನಾರ್ಹ ಫಲಿತಾಂಶಗಳು ಪ್ರಕಟವಾಗಿದೆ ಎಂದು ಹಲವಾರು ಖಾಸಗಿ ಆಸ್ಪತ್ರೆಗಳು ಹೇಳಿವೆ. 

ಆದರೆ ಚಿಕಿತ್ಸೆಗೆ ತಗುಲುವ ಬೆಲೆ ಹೆಚ್ಚಿರುವ ಕಾರಣದಿಂದಾಗಿ ಹಾಗೂ ಉತ್ಪಾದನೆಯಲ್ಲಿರುವ ಸಂಕೀರ್ಣ ಪ್ರಕ್ರಿಯೆಗಳಿಂದಾಗಿ ಕೋವಿಡ್-19 ವಿರುದ್ಧ ವ್ಯಾಪಕವಾಗಿ ಬಳಕೆ ಮಾಡುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. 

ಮೋನೋಕ್ಲೋನಲ್‌ ಆ್ಯಂಟಿಬಾಡಿಗಳು ಪ್ರಯೋಗಾಲಯದಲ್ಲಿ ತಯಾರಾದ ಪ್ರೊಟೋನ್ ಗಳಾಗಿದ್ದು,  (ಪ್ರತಿಕಾಯಗಳ ತದ್ರೂಪು)  

ಮೋನೋಕ್ಲೋನಲ್ ಆ್ಯಂಟಿಬಾಡಿ ಪ್ರಯೋಗಾಲಯದಲ್ಲಿ ರಚಿಸಲಾದ ಈ ಪ್ರತಿಕಾಯಗಳು ಪ್ರತಿಜನಕವನ್ನು ಎದುರಿಸಲು ಅವುಗಳನ್ನು ಗುರಿಯಾಗಿಸಲಾಗಿದೆ. ಈ ಚಿಕಿತ್ಸಾ ವಿಧಾನವನ್ನು ಮೊದಲು ಅಮೆರಿಕಾದಲ್ಲಿ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕೋವಿಡ್-19 ವೈರಾಣು ಸೋಂಕು ತಗುಲಿದಾಗ ಪ್ರಯೋಗಿಸಿದ ಕೆಲವೇ ತಿಂಗಳಲ್ಲಿ ಅನುಮೋದಿಸಲಾಗಿತ್ತು. 

ಕೋವಿಡ್-19 ಸೋಂಕು ಸೌಮ್ಯ ಹಾಗೂ ‌ಮಧ್ಯಮ ಪ್ರಮಾಣದಲ್ಲಿರುವ, ಮಧುಮೇಹ, ಹೃದಯ ರೋಗ, ಸ್ಟ್ರೋಕ್, ಹೈಪರ್ ಟೆನ್ಷನ್, ಕಿಡ್ನಿ ಸಮಸ್ಯೆ, ಲಿವರ್, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ  ಸೋಂಕಿನ ರೋಗಿಗಳಿಗೆ ಕೋವಿಡ್-19 ಹೆಚ್ಚಳವಾಗದಂತೆ ತಡೆಗಟ್ಟುವುದಕ್ಕೆ ಮೋನೋಕ್ಲೋನಲ್‌ ಆ್ಯಂಟಿಬಾಡಿಗಳನ್ನು ಬಳಕೆ ಮಾಡಲಾಗುತ್ತದೆ. ಹೈಪೊಕ್ಸಿಯಾ ಅಥವಾ ಆಸ್ಪತ್ರೆಗೆ ಅಗತ್ಯವಿರುವವರಿಗೆ ಪ್ರತಿಕಾಯ ಕಾಕ್ಟೈಲ್ ಕೆಲಸ ಮಾಡುವುದಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com