ಪಕ್ಷ ತಾಯಿ ಇದ್ದಂತೆ, ದ್ರೋಹ ಮಾಡಬಾರದು: ಚಿರಾಗ್ ಪಾಸ್ವಾನ್
'ಜೆಡಿಯು ಪಕ್ಷದಲ್ಲಿ ಚಿರಾಗ್ ಪಾಸ್ವಾನ್ ವಿರುದ್ಧ ಬಂಡೆದ್ದಿದ್ದ ಐವರು ಸಂಸದರನ್ನು ಉಚ್ಚಾಟಣೆ ಮಾಡಲಾಗಿದೆ. ಚಿರಾಗ್ ಪಾಸ್ವಾನ್ ಅವರ ಸಂಬಂಧಿಯೂ ಆಗಿರುವ ಪಶುಪತಿ ಪಾರಸ್ ಈ ಬೆನ್ನಲ್ಲೇ ಪಕ್ಷದ ಅಧ್ಯಕ್ಷ ಸ್ಥಾನದಿಂದ ಚಿರಾಗ್ ಪಾಸ್ವಾನ್ ಅವರನ್ನು ತೆಗೆದುಹಾಕಿದ್ದಾರೆ.
Published: 15th June 2021 10:12 PM | Last Updated: 16th June 2021 12:49 PM | A+A A-

ಚಿರಾಗ್ ಪಾಸ್ವಾನ್
ನವದೆಹಲಿ: 'ಜೆಡಿಯು ಪಕ್ಷದಲ್ಲಿ ಚಿರಾಗ್ ಪಾಸ್ವಾನ್ ವಿರುದ್ಧ ಬಂಡೆದ್ದಿದ್ದ ಐವರು ಸಂಸದರನ್ನು ಉಚ್ಚಾಟಣೆ ಮಾಡಲಾಗಿದೆ. ಚಿರಾಗ್ ಪಾಸ್ವಾನ್ ಅವರ ಸಂಬಂಧಿಯೂ ಆಗಿರುವ ಪಶುಪತಿ ಪಾರಸ್ ಈ ಬೆನ್ನಲ್ಲೇ ಪಕ್ಷದ ಅಧ್ಯಕ್ಷ ಸ್ಥಾನದಿಂದ ಚಿರಾಗ್ ಪಾಸ್ವಾನ್ ಅವರನ್ನು ತೆಗೆದುಹಾಕಿದ್ದಾರೆ.
ರಾಮ್ ವಿಲಾಸ್ ಪಾಸ್ವಾನ್ ಅವರ ಸಹೋದರನನ್ನು ಲೋಕಸಭಾ ಕಾರ್ಯದರ್ಶಿಗಳು ಎಲ್ ಜೆಪಿಯ ಲೋಕಸಭಾ ನಾಯಕನೆಂದು ದೃಢೀಕರಿಸಿದ್ದಾರೆ. ಈ ಬೆನ್ನಲ್ಲೇ ಪಕ್ಷದ ಮೇಲೆ ಹಿಡಿತ ಸಾಧಿಸುವುದಕ್ಕಾಗಿ ಪಾಸ್ವಾನ್ ಕುಟುಂಬದ ಇಬ್ಬರು ನಾಯಕರ ಬಣಗಳು ಕ್ಷಿಪ್ರಗತಿಯ ಕಾರ್ಯಾಚರಣೆ ನಡೆಸುತ್ತಿವೆ.
ಚಿರಾಗ್ ಪಾಸ್ವಾನ್ ಅವರನ್ನು ಸಂಸದೀಯ ಪಕ್ಷದಿಂದ ದೂರ ಇರಿಸಲಾಗಿದ್ದರೂ ಬೇರೆ ನಾಯಕರಿಂದ ಬೆಂಬಲ ದೊರೆಯುತ್ತಿದೆ. ಜೆಡಿಯು ಪಕ್ಷದ ಮೇಲಿನ ನಾಯಕತ್ವದ ನಿರ್ಧಾರವನ್ನು ಚುನಾವಣಾ ಆಯೋಗವೇ ನಿರ್ಧರ್ಸಬೇಕಿದೆ.
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ಚಿರಾಗ್ ಪಾಸ್ವಾನ್, ಟ್ವೀಟ್ ಮಾಡಿದ್ದು, ನನ್ನ ತಂದೆ ಸ್ಥಾಪಿಸಿದ ಪಕ್ಷ ಹಾಗೂ ಕುಟುಂಬವನ್ನು ಒಟ್ಟಾಗಿರಿಸಲು ಯತ್ನಿಸಿದೆ, ಆದರೆ ಅದು ವಿಫಲವಾಯಿತು ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ ಎಂದು ಹೇಳಿರುವ ಪಾಸ್ವಾನ್, ಪಕ್ಷ ತಾಯಿ ಇದ್ದಂತೆ, ದ್ರೋಹ ಮಾಡಬಾರದು ಎಂದಿದ್ದಾರೆ.