"ಥಳಿಸಿದರು, ಜೈ ಶ್ರೀರಾಮ್ ಹೇಳಲು ಒತ್ತಾಯ": ಮುಸ್ಲಿಂ ವ್ಯಕ್ತಿಯ ಆರೋಪ; ಆದರೆ ಎಫ್ಐಆರ್ ನಲ್ಲಿ ಇದರ ಉಲ್ಲೇಖವೇ ಇಲ್ಲ!

ತಮ್ಮನ್ನು ಅಪರಿಚಿತ ವ್ಯಕ್ತಿಗಳು ಅಪಹರಣ ಮಾಡಿ, ಥಳಿಸಿ, ಗಡ್ಡ ಬೋಳಿಸಿ ಜೈ ಶ್ರೀರಾಮ್ ಘೋಷಣೆ ಹೇಳುವುದಕ್ಕೆ ಒತ್ತಾಯಿಸಿದರು ಎಂದು ಮುಸಲ್ಮಾನ ಸಮುದಾಯಕ್ಕೆ ವೃದ್ಧರೊಬ್ಬರು ಆರೋಪ ಮಾಡಿರುವ ವಿಡಿಯೋ ವೈರಲ್ ಆಗತೊಡಗಿದೆ.
ಆರೋಪ ಮಾಡಿರುವ ಅಬ್ದುಲ್ ಸಮದ್
ಆರೋಪ ಮಾಡಿರುವ ಅಬ್ದುಲ್ ಸಮದ್

ಘಾಜಿಯಾಬಾದ್: ತಮ್ಮನ್ನು ಅಪರಿಚಿತ ವ್ಯಕ್ತಿಗಳು ಅಪಹರಣ ಮಾಡಿ, ಥಳಿಸಿ, ಗಡ್ಡ ಬೋಳಿಸಿ ಜೈ ಶ್ರೀರಾಮ್ ಘೋಷಣೆ ಹೇಳುವುದಕ್ಕೆ ಒತ್ತಾಯಿಸಿದರು ಎಂದು ಮುಸಲ್ಮಾನ ಸಮುದಾಯಕ್ಕೆ ವೃದ್ಧರೊಬ್ಬರು ಆರೋಪ ಮಾಡಿರುವ ವಿಡಿಯೋ ವೈರಲ್ ಆಗತೊಡಗಿದೆ.

ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಈ ಘಟನೆ ನಡೆದಿದ್ದು,ನಿರ್ಜನ ಪ್ರದೇಶದಲ್ಲಿರುವ ಮನೆಯೊಂದಕ್ಕೆ ಆಟೋದಲ್ಲಿ ಅಪಹರಿಸಿದ ವ್ಯಕ್ತಿಗಳು ನನ್ನನ್ನು ಥಳಿಸಿದರು, ಗಡ್ಡ ಬೋಳಿಸಿದರು, ಜೈ ಶ್ರೀರಾಮ್ ಎಂಬ ಘೋಷಣೆ ಕೂಗಲು ಒತ್ತಾಯಿಸಿದರು. ಪ್ರತಿ ಬಾರಿ ಥಳಿತದ ನೋವುಂಟಾದಾಗಲೂ ನಾನು ಅಲ್ಲಾ ಎಂದು ಚೀರುತ್ತಿದ್ದೆ, ಮತ್ತೆ ಥಳಿಸುತ್ತಿದ್ದ ಅವರು ಜೈ ಶ್ರೀರಾಮ್ ಘೋಷಣೆ ಕೂಗಲು ಒತ್ತಾಯಿಸುತ್ತಿದ್ದರು ಎಂದು ವಿಡಿಯೋದಲ್ಲಿ ತಮ್ಮನ್ನು ಅಬ್ದುಲ್ ಸಮದ್ ಎಂದು ಪರಿಚಯಿಸಿಕೊಂಡಿರುವ ವ್ಯಕ್ತಿ ಆರೋಪಿಸಿರುವುದು ವೈರಲ್ ಆಗತೊಡಗಿದೆ.

ಘಟನೆಗೆ ಸಂಬಂಧಿಸಿದಂತೆ ಘಾಜಿಯಾಬಾದ್ ಪೊಲೀಸರು ದಾಖಲಿಸಿರುವ ಎಫ್ಐಆರ್ ನಲ್ಲಿ ಜೂ.05 ರಂದು ಈ ಘಟನೆ ನಡೆದಿದ್ದು ಜೂ.07 ರಂದು ಇದು ವರದಿಯಾಗಿದೆ ಎಂದು ತಿಳಿದುಬಂದಿದೆ.

ಬುಲಂದ್ ಶಹರ್ ನ ನಿವಾಸಿಯಾಗಿರುವ ಅಬ್ದುಲ್ ಸಮದ್ ತಾವು ನೀಡಿರುವ ದೂರಿನಲ್ಲಿ ಮಾತ್ರ ತಮಗೆ ಉಂಟಾದ ಕಿರುಕುಳದ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ವಿಡಿಯೋದಲ್ಲಿ ಮಾತ್ರ ತಮ್ಮನ್ನು ಥಳಿಸಿ ಜೈ ಶ್ರೀರಾಮ್ ಘೋಷಣೆ ಕೂಗುವುದಕ್ಕೆ ಒತ್ತಾಯಿಸಿದ್ದಾರೆಂದು, ತಮ್ಮನ್ನು ಪಾಕಿಸ್ತಾನದ ಗೂಢಚಾರ ಎಂದು ಆರೋಪಿಸಿದ್ದಾರೆ ಎಂದು ಘಾಜಿಯಾಬಾದ್ ನ ಎಸ್ಎಸ್ ಪಿ ಅಮಿತ್ ಪಾಠಕ್ ಹೇಳಿದ್ದಾರೆ.

ಅಬ್ದುಲ್ ಅವರು ನೀಡಿರುವ ದೂರಿನ ಅನ್ವಯ ಈಗಾಗಲೇ ಪರ್ವೇಶ್ ಗುಜ್ಜಾರ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಈತ ಇಂದ್ರಜಾಲ, ಯಕ್ಷಿಣಿವಿದ್ಯೆಯನ್ನು ಅಭ್ಯಾಸ ಮಾಡುತ್ತಿದ್ದ ಸಾಮದ್ ನಿಂದ ತಾಯಿತವೊಂದನ್ನು ತೆಗೆದುಕೊಂಡಿದ್ದಾಗಿ ತಿಳಿದುಬಂದಿದೆ.

ಈ ವ್ಯಕ್ತಿಯನ್ನು ಬಂಧಿಸಿದ ಬಳಿಕ ತನಿಖೆಯ ಭಾಗವಾಗಿ ಅಬ್ದುಲ್ ಸಮದ್ ಅವರಿಗೆ ಪೊಲೀಸರು ಸಮನ್ಸ್ ಜಾರಿಗೊಳಿಸಿದರೂ ಸಹ ಆತ ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com