ಭಾರತದಲ್ಲಿ ಲಸಿಕೆ ಹಾಕಿಸಿಕೊಂಡ ನಂತರದ ಮೊದಲ ಸಾವು ವರದಿ

ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ದೇಶದಲ್ಲಿ ಲಸಿಕೆಗೆ ಸಂಬಂಧಿಸಿದ ಸಾವಿನ ಪ್ರಕರಣವನ್ನು ವರದಿ ಮಾಡಿದೆ.
ಲಸಿಕೆ  (ಸಂಗ್ರಹ ಚಿತ್ರ)
ಲಸಿಕೆ (ಸಂಗ್ರಹ ಚಿತ್ರ)

ನವದೆಹಲಿ: ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ದೇಶದಲ್ಲಿ ಲಸಿಕೆಗೆ ಸಂಬಂಧಿಸಿದ ಸಾವಿನ ಪ್ರಕರಣವನ್ನು ವರದಿ ಮಾಡಿದೆ.

ಕೊರೋನಾ ವೈರಾಣುವಿನ ವಿರುದ್ಧದ ಲಸಿಕೆ ಅಭಿಯಾನ ಪ್ರಾರಂಭವಾದ ದಿನದಿಂದಲೂ ಈ ವರೆಗೂ ಲಸಿಕೆಗೆ ಸಂಬಂಧಿಸಿದ ಸಾವು ಸಂಭವಿಸಿರಲಿಲ್ಲ. ಲಸಿಕೆ ಪಡೆದ 7 ಜನರು ಮೃತಪಟ್ಟಿದ್ದರಾದರೂ ಅದಕ್ಕೂ ಲಸಿಕೆಗೂ ಸಂಬಂಧ ಕಲ್ಪಿಸುವ ಅಂಶಗಳು ದೃಢಪಡದ ಕಾರಣ ಲಸಿಕೆಯಿಂದ ಉಂಟಾದ ಸಾವು ಎಂದು ಪರಿಗಣಿಸಲಾಗಿರಲಿಲ್ಲ. 

ಮಾ.21 ರಂದು 68 ವರ್ಷದ ವ್ಯಕ್ತಿಯೋರ್ವರು ಕೊರೋನಾ ಲಸಿಕೆ ಪಡೆದ ನಂತರ ಮೃತಪಟ್ಟಿದ್ದರು. ಇದಕ್ಕೆ ತೀವ್ರವಾದ ಅಲರ್ಜಿ ಪ್ರತಿಕ್ರಿಯೆ ಕಾರಣ ಎನ್ನಲಾಗಿದ್ದು, ಆದರೆ ಆ ವ್ಯಕ್ತಿಗೆ ಕೋವಿಶೀಲ್ಡ್ ನೀಡಲಾಗಿತ್ತೇ ಅಥವಾ ಕೋವ್ಯಾಕ್ಸೀನ್ ನೀಡಲಾಗಿತ್ತೇ? ಎಂಬ ಬಗ್ಗೆ ಮಾಹಿತಿ ಖಚಿತವಾಗಿಲ್ಲ.

ಸರ್ಕಾರದ ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದು, ಲಸಿಕೆಯ ನಂತರದಲ್ಲಿ ಉಂಟಾಗುವ ಪರಿಣಾಮಗಳ ಕುರಿತಾದ ಡಾಟವನ್ನು ಪಾರದರ್ಶಕ ಪ್ರಕ್ರಿಯೆಯ ಭಾಗವಾಗಿ ಬಿಡುಗಡೆ ಮಾಡಬೇಕೆ ಹೊರತು ಲಸಿಕೆ ಕುರಿತ ಅನುಮಾನ ಮೂಡಿಸುವುದಕ್ಕೆ ಅಲ್ಲ ಎಂದು ಹೇಳಿದ್ದರು.

ಲಸಿಕೆ ಪಡೆದ ಬಳಿಕ ವರದಿಯಾಗಿದ್ದ 31 ತೀವ್ರವಾದ ಎಇಎಫ್ಐ ಪ್ರಕರಣಗಳ ಕಾರಣತ್ವವನ್ನು ಮೌಲ್ಯಮಾಪನದಲ್ಲಿ ಲಸಿಕೆಯಿಂದ ಸಾವನ್ನಪ್ಪಿರುವುದು ದೃಢಪಟ್ಟಿದ್ದು ಜೂ.04 ರಂದು ಈ ಕುರಿತ ವರದಿಯನ್ನು ಕೇಂದ್ರಕ್ಕೆ ವರದಿಯನ್ನು ಸಲ್ಲಿಸಲಾಗಿದೆ.

ಈ ಪೈಕಿ 18 ಸಾವುಗಳು ಲಸಿಕೆಗೆ ಹೊರತಾದ ಕಾರಣಗಳನ್ನು ಹೊಂದಿವೆ, 7 ಪ್ರಕರಣಗಳಲ್ಲಿ ಲಸಿಕೆಯೇ ಕಾರಣ ಎಂಬುದಕ್ಕೆ ನಿರ್ದಿಷ್ಟ ಅಂಶಗಳು ಪತ್ತೆಯಾಗಿಲ್ಲ, 3 ಪ್ರಕರಣಗಳಲ್ಲಿ ಲಸಿಕೆಯ ಉತ್ಪನ್ನಕ್ಕೆ ಸಂಬಂಧಿಸಿದ ಸಾವು ಸಂಭವಿಸಿದ್ದು, 1 ಪ್ರಕರಣದಲ್ಲಿ  ಆತಂಕ ಸಾವಿಗೆ ಕಾರಣವಾಗಿದೆ. 2 ಪ್ರಕರಣಗಳು ವರ್ಗೀಕರಿಸಲಾಗದ್ದು ಎಂದು ವರದಿಯಲ್ಲಿ ಹೇಳಿದೆ.

ಲಸಿಕೆಯಿಂದ ಉಂಟಾದ ಸಾವಿನ ಬಗ್ಗೆ ಲಸಿಕೆ ನೀಡಿಕೆಗೆ ಇರುವ ಸಲಹಾ ಸಮಿತಿಯ ಮುಖ್ಯಸ್ಥ ವಿಕೆ ಪೌಲ್ ಇದನ್ನು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ನೋಡಬೇಕೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com