ಐದು ಸ್ತಂಭಗಳ ಆಧಾರದ ಮೇಲೆ ಭಾರತದಲ್ಲಿ ಹೂಡಿಕೆ ಮಾಡಿ: ವಿಶ್ವದ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಕರೆ

ಟೆಕ್ ಮತ್ತು ಸ್ಟಾರ್ಟ್ ಅಪ್ ಜಗತ್ತಿನಲ್ಲಿ ಭಾರತದ ಪ್ರಗತಿ ಎಲ್ಲರಿಗೂ ತಿಳಿದಿದೆ. ನಮ್ಮ ರಾಷ್ಟ್ರವು ವಿಶ್ವದ ಅತಿದೊಡ್ಡ ಸಾರ್ಟ್ ಅಪ್ ವಲಯಕ್ಕೆ ಪೂರಕ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತಿದೆ. ನವೀನಕಾರರಿಗೆ ಮತ್ತು ಹೂಡಿಕೆದಾರರಿಗೆ ಬೇಕಾದುದನ್ನು ಭಾರತ ಒದಗಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ಟೆಕ್ ಶೃಂಗಸಭೆಯಲ್ಲಿ ಮಾತನಾಡಿದ ಪಿಎಂ ನರೇಂದ್ರ ಮೋದಿ
ಟೆಕ್ ಶೃಂಗಸಭೆಯಲ್ಲಿ ಮಾತನಾಡಿದ ಪಿಎಂ ನರೇಂದ್ರ ಮೋದಿ

ನವದೆಹಲಿ: ಟೆಕ್ ಮತ್ತು ಸ್ಟಾರ್ಟ್ ಅಪ್ ಜಗತ್ತಿನಲ್ಲಿ ಭಾರತದ ಪ್ರಗತಿ ಎಲ್ಲರಿಗೂ ತಿಳಿದಿದೆ. ನಮ್ಮ ರಾಷ್ಟ್ರವು ವಿಶ್ವದ ಅತಿದೊಡ್ಡ ಸಾರ್ಟ್ ಅಪ್ ವಲಯಕ್ಕೆ ಪೂರಕ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಹಲವಾರು ಯುನಿಕಾರ್ನ್ ಗಳು ತಲೆಯೆತ್ತಿವೆ. ನವೀನಕಾರರಿಗೆ ಮತ್ತು ಹೂಡಿಕೆದಾರರಿಗೆ ಬೇಕಾದುದನ್ನು ಭಾರತ ಒದಗಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

ವಿವಾ ಟೆಕ್ ಶೃಂಗಸಭೆಯ 5ನೇ ಆವೃತ್ತಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಸಂಪ್ರದಾಯಗಳು ವಿಫಲವಾದಾಗ ನಾವೀನ್ಯತೆ ನೆರವಿಗೆ ಬರುತ್ತದೆ ಎಂದು ನಂಬುವವನು ನಾನು.ಕೋವಿಡ್-19 ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ಇದು ಅನುಭವಕ್ಕೆ ಬಂದಿದೆ. ನಮ್ಮ ಶತಮಾನದ ಅತಿದೊಡ್ಡ ಪಿಡುಗು ಕೊರೋನಾ ಸೋಂಕು. ಜಗತ್ತಿನ ಎಲ್ಲಾ ರಾಷ್ಟ್ರಗಳು ಸಾಕಷ್ಟು ಸಾವು,ನೋವು, ನಷ್ಟ ಅನುಭವಿಸಿದ್ದು, ಭವಿಷ್ಯದ ಬಗ್ಗೆ ಜನರಲ್ಲಿ ಆಂತಕ ಉಂಟಾಗಿದೆ. ಹಲವು ಸಾಂಪ್ರದಾಯಿಕ ವಿಧಾನಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಪ್ರತಿಭೆ, ಮಾರುಕಟ್ಟೆ, ಬಂಡವಾಳ, ಪರಿಸರ ವ್ಯವಸ್ಥೆ ಮತ್ತು ಮುಕ್ತ ಸಂಸ್ಕೃತಿಯ ಐದು ಸ್ತಂಭಗಳ ಆಧಾರದ ಮೇಲೆ ಭಾರತದಲ್ಲಿ ಹೂಡಿಕೆ ಮಾಡಲು ನಾನು ಜಗತ್ತಿನ ರಾಷ್ಟ್ರಗಳನ್ನು ಆಹ್ವಾನಿಸುತ್ತೇನೆ ಎಂದು ಕೂಡ ಪ್ರಧಾನಿ ಹೇಳಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ಸಮಯೋಚಿತ ಬೆಂಬಲವನ್ನು ನೀಡಲು ಆಧಾರ್ ಸಂಖ್ಯೆ ನೆರವಾಗಿದೆ. ಆಹಾರ ಪಡಿತರ, ಅಡುಗೆ ಇಂಧನವನ್ನು ಜನರಿಗೆ ತಲುಪಿಸಲಾಗುತ್ತದೆ. ಈಗಾಗಲೇ ಎರಡು ಭಾರತೀಯ ಲಸಿಕೆಗಳನ್ನು ನೀಡಲಾಗುತ್ತಿದ್ದು, ಇನ್ನು ಕೆಲವು ಲಸಿಕೆಗಳು ಪ್ರಯೋಗ ಮತ್ತು ಅಭಿವೃದ್ಧಿ ಹಂತದಲ್ಲಿವೆ ಎಂದರು.

ಈ ಟೆಕ್ ಶೃಂಗಸಭೆ ವೇದಿಕೆ ಫ್ರಾನ್ಸ್‌ನ ತಾಂತ್ರಿಕ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಭಾರತ ಮತ್ತು ಫ್ರಾನ್ಸ್ ವ್ಯಾಪಕವಾದ ವಿಷಯಗಳ ಬಗ್ಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ, ತಂತ್ರಜ್ಞಾನ ಮತ್ತು ಡಿಜಿಟಲ್ ಸಹಕಾರ ಉದಯೋನ್ಮುಖ ಕ್ಷೇತ್ರಗಳಾಗಿವೆ. ಸೋಷಿಯಲ್ ಮೀಡಿಯಾ ಬಳಕೆಯಲ್ಲಿ ಕೂಡ ಭಾರತ ವಿಶ್ವದಲ್ಲಿಯೇ ಮುಂದಿದೆ. ಇದು ಇಂದಿನ ಸಮಯದ ಅವಶ್ಯಕತೆ ಕೂಡ ಆಗಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com