ವಯಸ್ಕ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸುವ ಹೆಚ್ಚಿನ ಔಷಧಿಗಳು ಮಕ್ಕಳಿಗೆ ಸೂಕ್ತವಲ್ಲ: ಕೇಂದ್ರ ಸರ್ಕಾರ

ವಯಸ್ಕ ಕೊರೋನಾ ಸೋಂಕಿತರಿಗೆ ಕೊಡಲಾಗುವ ಐವರ್ಮೆಕ್ಟಿನ್, ಹೈಡ್ರಾಕ್ಸಿಕ್ಲೋರೋಕ್ವಿನ್, ಫಾವಿಪಿರವಿರ್‌  ಅಲ್ಲದೆ ಆಂಟಿ ಬಾಡಿಗಳಾದ ಡಾಕ್ಸಿಸೈಕ್ಲಿನ್ಮತ್ತು ಅಜಿತ್ರೊಮೈಸಿನ್ ನಂತಹವುಗಳನ್ನು ಮಕ್ಕಳ ಚಿಕಿತ್ಸೆಗೆ ಶಿಫಾರಸು ಮಾಡಿಲ್ಲ ಎಂದು ಬುಧವಾರ ಹೊರಡಿಸಲಾದ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಯಸ್ಕ ಕೊರೋನಾ ಸೋಂಕಿತರಿಗೆ ಕೊಡಲಾಗುವ ಐವರ್ಮೆಕ್ಟಿನ್, ಹೈಡ್ರಾಕ್ಸಿಕ್ಲೋರೋಕ್ವಿನ್, ಫಾವಿಪಿರವಿರ್‌  ಅಲ್ಲದೆ ಆಂಟಿ ಬಾಡಿಗಳಾದ ಡಾಕ್ಸಿಸೈಕ್ಲಿನ್ಮತ್ತು ಅಜಿತ್ರೊಮೈಸಿನ್ ನಂತಹವುಗಳನ್ನು ಮಕ್ಕಳ ಚಿಕಿತ್ಸೆಗೆ ಶಿಫಾರಸು ಮಾಡಿಲ್ಲ ಎಂದು ಬುಧವಾರ ಹೊರಡಿಸಲಾದ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆ ಮರುಕಳಿಸುವ ಸಾಧ್ಯತೆಯ ನಿರೀಕ್ಷೆಯಲ್ಲಿ, ಮಕ್ಕಳಿಗಾಗಿ ಕೋವಿಡ್-ಕೇರ್ ಸೆಂಟರ್ ಕಾರ್ಯಗತಗೊಳಿಸಲು ಸರ್ಕಾರವು ಮಾರ್ಗಸೂಚಿಗಳನ್ನು ಹೊರತಂದಿದೆ.

ತೀವ್ರವಾದ ಕೊರೋನಾ ಸೋಂಕಿನ ಮಕ್ಕಳಿಗೆ ಆರೈಕೆ ಒದಗಿಸಲು ಅಸ್ತಿತ್ವದಲ್ಲಿರುವ ಕೋವಿಡ್ ಆರೈಕೆ ಕೇಂದ್ರಗಳನ್ನು ಹೆಚ್ಚಿಸುವುದು ಶಿಫಾರಸುಗಳಲ್ಲಿ ಸೇರಿದೆ. ಅದರ ಪ್ರಕಾರ, ಮಕ್ಕಳಿಗೆ ಲಸಿಕೆಗಳನ್ನು ಅನುಮೋದಿಸಿದ ನಂತರ, ಕೋವಿಡ್ ಲಕ್ಷಣದ ಸ್ಥಿತಿಗಳು ಹೆಚ್ಚು ತೀವ್ರವಾದವರಿಗೆ ಮೊದಲ ಆದ್ಯತೆ ಆಗಿರಬೇಕು.

ಮಕ್ಕಳ ಚಿಕಿತ್ಸೆಯ ಬಗ್ಗೆ, ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳು ವಯಸ್ಕರಲ್ಲಿ ಬಳಸುವ ಹೆಚ್ಚಿನ ಔಷಧಿಗಳಾದ ಐವರ್ಮೆಕ್ಟಿನ್, ಹೈಡ್ರಾಕ್ಸಿಕ್ಲೋರೋಕ್ವಿನ್, ಫೆವಿಪಿರಾವಿರ್ ಮತ್ತು ಡಾಕ್ಸಿಸೈಕ್ಲಿನ್ ಅಥವಾ ಅಜಿಥ್ರೊಮೈಸಿನ್ ನಂತಹ ಆಂಟಿ ಬಾಡಿಗಳನ್ನು ಕೋವಿಡ್ ಸೋಂಕಿನ ತಡೆಗಟ್ಟುವಿಕೆ ಅಥವಾ ಚಿಕಿತ್ಸೆಗಾಗಿ ಅನುಮತಿಸಲಾಗಿಲ್ಲ ಎಂದು ಹೇಳಿದೆ.

"ಮಕ್ಕಳಿಗೆ ಇವುಗಳನ್ನು ಶಿಫಾರಸು ಮಾಡುವುದಿಲ್ಲ". ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಮರುಕಳಿಸುವ ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಗಿದೆ ಎಂದು ಮಾರ್ಗಸೂಚಿಗಳು ತಿಳಿಸಿವೆ. "ಮುಂದಿನ ಮೂರು ನಾಲ್ಕು ತಿಂಗಳುಗಳಲ್ಲಿ ಮೂರನೇ ಅಲೆಯಿಂದ ಲಾಕ್‌ಡೌನ್, ಶಾಲೆ ಮುಚ್ಚಿವಿಕೆ ನಂತರ ಭವಿಷ್ಯದಲ್ಲಿ ಯಾವುದೇ ಕೊರೋನಾ ಪ್ರಕರಣಗಳ ಉಲ್ಬಣವನ್ನು ನಿರ್ವಹಿಸಲು ಖಾಸಗಿ ಮತ್ತು ಸಾರ್ವಜನಿಕ ವಲಯದಿಂದ ಒಂದು ಸಂಯೋಜಿತ ಪ್ರಯತ್ನದ ಅಗತ್ಯವಿದೆ" ಎಂದು ಅದು ಹೇಳಿದೆ. ಕೊರೋನಾ ಸೋಂಕಿನ ಎರಡನೇ ಅಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ದೈನಂದಿನ ಪ್ರಕರಣಗಳ ಆಧಾರದ ಮೇಲೆ ಮಕ್ಕಳ ಆರೈಕೆಗಾಗಿ ಹೆಚ್ಚುವರಿ ಹಾಸಿಗೆಯ ಸಾಮರ್ಥ್ಯದ ಅಂದಾಜುಗಳನ್ನು ಲೆಕ್ಕಹಾಕಬಹುದು ಎಂದು ಮಾರ್ಗಸೂಚಿ ತಿಳಿಸಿವೆ. ಇದರಿಂದ, ಮಕ್ಕಳ ಪ್ರಕರಣಗಳ ಪ್ರಕ್ಷೇಪಗಳು ಮತ್ತು ಅಗತ್ಯವಿರುವ ಸೆಂಟರ್ ಗಳ ಖ್ಯೆಯನ್ನು ಪಡೆಯಬಹುದು ಎಂದು ಅದು ಹೇಳಿದೆ.

"ತೀವ್ರವಾದ ಕೋವಿಡ್ ಸೋಂಕು ಹೊಂದಿರುವ ಮಕ್ಕಳಿಗೆ ಆರೈಕೆ ಒದಗಿಸಲು ಅಸ್ತಿತ್ವದಲ್ಲಿರುವ ಕೋವಿಡ್-ಆರೈಕೆ ಕೇಂದ್ರಗಳನ್ನು ಹೆಚ್ಚಿಸುವುದು ಅಪೇಕ್ಷಣೀಯವಾಗಿದೆ. ಇದಕ್ಕೆ ಹೆಚ್ಚುವರಿ ಮಕ್ಕಳ-ನಿರ್ದಿಷ್ಟ ಉಪಕರಣಗಳು, ಮೂಲಸೌಕರ್ಯ ಅಗತ್ಯವಾಗಿದೆ. ಅಲ್ಲದೆ, ಸಾಕಷ್ಟು ಸಂಖ್ಯೆಯ ತರಬೇತಿ ಪಡೆದ ಮಾನವಶಕ್ತಿ - ವೈದ್ಯರು ಮತ್ತು ದಾದಿಯರು - ಒದಗಬೇಕಿದೆ. ಆರೋಗ್ಯ ಅಧಿಕಾರಿಗಳು ಸೂಕ್ತವಾದ ಮಕ್ಕಳ ಆರೈಕೆಗಾಗಿ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಪ್ರಾರಂಭಿಸಬೇಕು. ಸ್ವತಂತ್ರ ಮಕ್ಕಳ ಆಸ್ಪತ್ರೆಗಳಲ್ಲಿ, ಪ್ರತ್ಯೇಕ ವ್ಯವಸ್ಥೆ, ಉದಾಹರಣೆಗೆ, ಮಕ್ಕಳಿಗೆ ಪ್ರತ್ಯೇಕ ಹಾಸಿಗೆಗಳು ಕಾಳಜಿ ಕೇಂದ್ರದ ಸ್ಥಾಪನೆ ಆಗಬೇಕು. ಮಕ್ಕಳ ಆರೈಕೆಗಾಗಿ ಕೋವಿಡ್ ಸೌಲಭ್ಯಗಳಲ್ಲಿ ನಿರ್ದಿಷ್ಟ ಪ್ರದೇಶಗಳನ್ನು ಗೊತ್ತುಪಡಿಸುವುದು ಅಪೇಕ್ಷಣೀಯವಾಗಿದೆ ಮತ್ತು ಅಲ್ಲಿನ ಮಗುವಿನೊಂದಿಗೆ ಪೋಷಕರಿಗೆ ಅವಕಾಶ ನೀಡಬೇಕು. "ತೀವ್ರವಾದ ಕೋವಿಡ್‌ಗೆ ನೆಗೆಟಿವ್ ವರದಿ ಪರೀಕ್ಷಿಸುವ ಮಲ್ಟಿಸಿಸ್ಟಮ್ ಇನ್ಫ್ಲಾಮೇಟರಿ ಸಿಂಡ್ರೋಮ್ ಹೊಂದಿರುವ ಮಕ್ಕಳಿಗೆ, ಅಸ್ತಿತ್ವದಲ್ಲಿರುವ ಮಕ್ಕಳ ಆರೈಕೆ ಕೇಂದ್ರದಿಂದ ಕಾಳಜಿಯನ್ನು ಒದಗಿಸಬೇಕಾಗಿದೆ. ಈ ಸೌಲಭ್ಯಗಳಿಗೆ ವಿಶೇಷವಾಗಿ ಎಚ್‌ಡಿಯು ಮತ್ತು ಐಸಿಯು ಸೇವೆಗಳ ಹೆಚ್ಚಳದ ಅಗತ್ಯವಿರುತ್ತದೆ" ಎಂದು ಅದು ಹೇಳಿದೆ.

ಮೂಲಸೌಕರ್ಯ, ಉಪಕರಣಗಳು ಮತ್ತು ಮಾನವಶಕ್ತಿಗಾಗಿ ಹೆಚ್ಚುವರಿ ಅವಶ್ಯಕತೆಗಳ ಬಗ್ಗೆ ಡಾಕ್ಯುಮೆಂಟ್ ಮಾರ್ಗದರ್ಶನ ನೀಡುತ್ತದೆ. ಹೆಚ್ಚಿನ ಮಕ್ಕಳಲ್ಲಿ ರೋಗಲಕ್ಷಣವಿಲ್ಲದ ಅಥವಾ ಸೌಮ್ಯ ಲಕ್ಷಣಗಳಿದೆ ಎಂದರೆ ಅದನ್ನು ಪೋಷಕರು ಮನೆಯಲ್ಲಿಯೇ ನಿರ್ವಹಿಸಬಹುದು ಎಂದು ಗಮನಿಸಿದ ಇದು, ರೋಗಲಕ್ಷಣದ ರೋಗಿಗಳಿಗೆ ಚಿಕಿತ್ಸೆಯಲ್ಲಿ ಜ್ವರಕ್ಕೆ ಪ್ಯಾರಾಸಿಟಮಾಲ್ ಮತ್ತು ಉಸಿರಾಟದ ಪ್ರಮಾಣವನ್ನು ಅಳೆಯುವುದು, ಉಸಿರಾಟದ ತೊಂದರೆ, ಆಹಾರ ಸೇವನೆ ಮತ್ತು ಆಮ್ಲಜನಕದ ಶುದ್ಧತ್ವ ಮುಂತಾದ ಪರಿಸ್ಥಿತಿಗಳ ಮೇಲ್ವಿಚಾರಣೆ ಸೇರಿವೆ ಎಂದು ಅದು ಹೇಳಿದೆ.

"ಮಕ್ಕಳಿಗೆ ವಯಸ್ಕರಿಗಿಂತ ಲಡಿಮೆ ತೋವ್ರತೆಯ ರೋಗಗಳಿರುತ್ತದೆ ಬಹುಪಾಲು, ಸೋಂಕು ಲಕ್ಷಣರಹಿತ ಅಥವಾ ಸೌಮ್ಯ ರೋಗಲಕ್ಷಣ ಹೊಂದಿರಬಹುದು. ಆರೋಗ್ಯವಂತ ಮಕ್ಕಳಲ್ಲಿ ಮಧ್ಯಮದಿಂದ ತೀವ್ರವಾದ ಕೋವಿಡ್ ಇರುವುದು ಸಾಮಾನ್ಯವಾಗಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com