ಸೋನಿಯಾ ಗಾಂಧಿ ಕೋವಿಡ್ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡಿದ್ದಾರೆ, ಸರ್ಕಾರ ಎಲ್ಲರಿಗೆ ಲಸಿಕೆ ಒದಗಿಸಲಿ: ಕಾಂಗ್ರೆಸ್

ಸೋನಿಯಾ ಗಾಂಧಿ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಗಳನ್ನು ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದ್ದು, ಬಿಜೆಪಿ ಪ್ರಶ್ನೆ ಕೇಳುವುದನ್ನು ಬಿಟ್ಟು ಎಲ್ಲಾ ಭಾರತೀಯರಿಗೆ ಲಸಿಕೆ ಒದಗಿಸುವ "ರಾಜಧರ್ಮ" ಪಾಲಿಸಲಿ ಎಂದು ಗುರುವಾರ ಹೇಳಿದೆ.
ರಣದೀಪ್ ಸುರ್ಜೆವಾಲಾ
ರಣದೀಪ್ ಸುರ್ಜೆವಾಲಾ

ನವದೆಹಲಿ: ಸೋನಿಯಾ ಗಾಂಧಿ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಗಳನ್ನು ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದ್ದು, ಬಿಜೆಪಿ ಪ್ರಶ್ನೆ ಕೇಳುವುದನ್ನು ಬಿಟ್ಟು ಎಲ್ಲಾ ಭಾರತೀಯರಿಗೆ ಲಸಿಕೆ ಒದಗಿಸುವ "ರಾಜಧರ್ಮ" ಪಾಲಿಸಲಿ ಎಂದು ಗುರುವಾರ ಹೇಳಿದೆ.

ಕಾಂಗ್ರೆಸ್ ಅಧ್ಯಕ್ಷರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಲಸಿಕೆಯ ಮೊದಲ ಡೋಸ್ ಅನ್ನು ತೆಗೆದುಕೊಂಡಿದ್ದಾರೆ. ಸೋನಿಯಾ ಅವರ ಪುತ್ರ ರಾಹುಲ್ ಗಾಂಧಿ ಕೋವಿಡ್ ವೇತರಿಕೆಯ ಅವಧಿ ಬಳಿಕ ಲಸಿಕೆ ಪಡೆಯಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದರು. 

ಬಿಜೆಪಿ ಸೋನಿಯಾ ಗಾಂಧಿ ಹಾಗೂ ಅವರ ಕುಟುಬ ಲಸಿಕೆ ಪಡೆದಿದ್ದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ ಕಾಂಗ್ರೆಸ್ ಈ ಉತ್ತರ ನೀಡಿದೆ. ಹಲವಾರು ಬಿಜೆಪಿ ನಾಯಕರು ಗಾಂಧಿ ಕುಟುಂಬ ಸದಸ್ಯರು ವ್ಯಾಕ್ಸಿನೇಷನ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ ಮತ್ತು ಅವರ ಪಕ್ಷವು ದೇಶದಲ್ಲಿ "ಲಸಿಕೆ ಬಗ್ಗೆ ಹಿಂಜರಿಕೆಯನ್ನು" ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ. "2021 ರ ಡಿಸೆಂಬರ್ 31 ರೊಳಗೆ 100 ಕೋಟಿ ಭಾರತೀಯರಿಗೆ ಲಸಿಕೆ ಗುರಿಯನ್ನು ಪೂರೈಸುವ ಸಲುವಾಗಿ ಮೋದಿ ಸರ್ಕಾರವು ಪ್ರತಿದಿನ 80 ಲಕ್ಷದಿಂದ ಒಂದು ಕೋಟಿ ಜನರಿಗೆ ಲಸಿಕೆ ಹಾಕುವತ್ತ ಗಮನ ಹರಿಸಬೇಕು ಇದೇ ನಿಜವಾದ ರಾಜ ಧರ್ಮ" ಕೋವಿಡ್ ಎರಡನೇ ಅಲೆಯಲ್ಲಿ ದೇಶ ಸಂಕಟಕ್ಕೆ ಸಿಕ್ಕಿದ ನಂತರ ಇದನ್ನು ಅನುಸರಿಸಬೇಕಿದೆ ಎಂದು ಸುರ್ಜೆವಾಲಾ ಪಿಟಿಐಗೆ ತಿಳಿಸಿದರು.

ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ "ಕೋವಿಶೀಲ್ಡ್" ನ ಲಸಿಕೆ ಡೋಸ್ ಅನ್ನು ಕಾಂಗ್ರೆಸ್ ಅಧ್ಯಕ್ಷರು ತೆಗೆದುಕೊಂಡಿದ್ದಾರೆಯೆ ಎನ್ನುವುದನ್ನು ನಾನು ತಿಳಿಯಬೇಕು ಎಂದು ಕೇಳಿದ್ದರು.

"ರಾಹುಲ್ ಗಾಂಧಿ 2021 ರ ಏಪ್ರಿಲ್ 16 ರಂದು ಲಸಿಕೆ ತೆಗೆದುಕೊಳ್ಳಲು ನಿರ್ಧರಿಸಿದ್ದರು  ಆದರೆ ಅವರಿಗೆ ಸಣ್ಣ ಜ್ವರದ ಲಕ್ಷಣಗಳು ಇದ್ದುದರಿಂದ, ಅವರನ್ನು ಪರೀಕ್ಷಿಸಲಾಯಿತು ಮತ್ತು ಆರ್ಟಿ-ಪಿಸಿಆರ್ ಪರೀಕ್ಷೆಯು 2021 ರ ಏಪ್ರಿಲ್ 18 ರಂದು ಅವರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿ ನೀಡಿತು. ಆದ ಕಾರಣ ಚೇತರಿಸಿಕೊಂಡ ನಂತರ ಮತ್ತು ವೈದ್ಯರ ಸಲಹೆ ಮೇರೆಗೆ ಅವರಿಗೆ ಲಸಿಕೆ ತೆಗೆದುಕೊಳ್ಳುವರು" ಎಂದು ಅವರು ಹೇಳಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ಮೊದಲ ಡೋಸ್ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದರು "ಮಾರ್ಚ್ 28 ರಂದು ಅವರ ಪತಿ ರಾಬರ್ಟ್ ವಾದ್ರಾ ಕೊರೋನಾಗೆ ಪಾಸಿಟಿವ್ ವರದಿ ಪಡೆದಾಗಿನಿಂದ, ಕಡ್ಡಾಯ ವ್ಯಾಕ್ಸಿನೇಷನ್ ಅವಧಿ ಮುಗಿದ ನಂತರ ಅವರು ಹಾಗೂ ಪ್ರಿಯಾಂಕಾ ಅಗತ್ಯವಾದ ವ್ಯಾಕ್ಸಿನೇಷನ್ ಡೋಸ್ ತೆಗೆದುಕೊಳ್ಳುತ್ತಾರೆ" ಎಂದು ಸುರ್ಜೆವಾಲಾ ಹೇಳಿದರು.

"ಪ್ರಧಾನ ಮಂತ್ರಿ ಮತ್ತು ಆರೋಗ್ಯ ಮಂತ್ರಿಯ ಅಪ್ರಬುದ್ಧತೆ ಮತ್ತು ಅಸಮರ್ಥತೆಯು ಲಕ್ಷಾಂತರ ಭಾರತೀಯರ ಜೀವಕ್ಕೆ ಅಪಾಯವನ್ನುಂಟು ಮಾಡಿದೆ ಮತ್ತು ಮೂರನೇ ಅಲೆಯನ್ನು ಖಚಿತಪಡಿಸಿದೆ" ಎಂದು ಕಾಂಗ್ರೆಸ್ ಹೇಳಿದೆ.

ಜನವರಿ 16 ರಿಂದ ಜೂನ್ 16 ರ ನಡುವಿನ ಆರು ತಿಂಗಳಲ್ಲಿ, ಭಾರತದ ಒಟ್ಟು 140 ಕೋಟಿ ಜನಸಂಖ್ಯೆಯ ಕೇವಲ 3.51 ಪ್ರತಿಶತದಷ್ಟು ಜನರಿಗೆ ಮಾತ್ರ ಎರಡೂ ಡೋಸ್ ಲಸಿಕೆಗಳನ್ನು ನೀಡಲಾಗಿದೆ, ಇದು ವಿಶ್ವದಲ್ಲೇ ಅತಿ ಕಡಿಮೆ ವ್ಯಾಕ್ಸಿನೇಷನ್ ಪ್ರಮಾಣವಾಗಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಆರು ತಿಂಗಳ ಅವಧಿಯಲ್ಲಿ ಜೂನ್ 16 ರವರೆಗೆ ಸರಾಸರಿ ವ್ಯಾಕ್ಸಿನೇಷನ್ ದಿನಕ್ಕೆ 17.23 ಲಕ್ಷ ಆಗಿದೆ. ಈಗಾಗಲೇ ನೀಡಲಾಗಿರುವ 26 ಕೋಟಿ ಡೋಸ್ ಗಳನ್ನು ನೀಡಿದ ಮಾದರಿಯಲ್ಲೇ ಎಲ್ಲಾ 94.4 ಕೋಟಿ ಭಾರತೀಯರಿಗೆ ಎರಡೂ ಡೋಸ್ ಲಸಿಕೆ  ಹಾಕಲು 944 ದಿನಗಳು ಬೇಕಾಗುತ್ತದೆ. "ಇದರ ಅರ್ಥವೇನೆಂದರೆ, ಜನವರಿ 16, 2024 ರಂದು 944 ದಿನಗಳು ಮುಗಿಯುವುದರಿಂದ 2.5 ವರ್ಷಗಳ ನಂತರವಷ್ಟೇ ವ್ಯಾಕ್ಸಿನೇಷನ್ ಪೂರ್ಣವಾಗಲು ಸಾಧ್ಯ. ಸರಳ ಪ್ರಶ್ನೆಯೆಂದರೆ ಭಾರತವು ಅಲ್ಲಿಯವರೆಗೆ ಕಾಯಲು ಸಿದ್ದವಿದೆಯೆ? ವ್ಯಾಕ್ಸಿನೇಷನ್ ಸಮಸ್ಯೆಯನ್ನು ಬಗೆಹರಿಸುವ ಬದಲು, ಕಾಂಗ್ರೆಸ್ ನ ಮುಖ್ಯಸ್ಥರು ಲಸಿಕೆ ಹಾಕಿಸಿಕೊಂಡಿದ್ದಾರೆಯೆ ಎಂದು ಪ್ರಶ್ನಿಸುವ ಆರೋಗ್ಯ ಸಚಿವರು ಮತ್ತು ಬಿಜೆಪಿ ಈ ವಿಷಯವನ್ನು ಹಳಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com