ಅಸ್ಸಾಂ ಕಾಂಗ್ರೆಸ್ ಶಾಸಕ ರುಪ್ಜ್ಯೋತಿ ಕುರ್ಮಿ ರಾಜೀನಾಮೆ: ಬಿಜೆಪಿ ಸೇರಲು ಸಜ್ಜು!

ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಗೆ ಅಸ್ಸಾಂನಲ್ಲಿ ಮತ್ತೊಂದು ಹೊಡೆತ ಬಿದ್ದಿದೆ. ಅಸ್ಸಾಂನ ಮರಿಯಾನಿ ಶಾಸಕ ರುಪ್ಜ್ಯೋತಿ ಕುರ್ಮಿ ಇಂದು ಶಾಸಕ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಸದ್ಯದಲ್ಲಿಯೇ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.
ಅಸ್ಸಾಂನ ಮರಿಯಾನಿ ಶಾಸಕ ರುಪ್ಜ್ಯೋತಿ ಕುರ್ಮಿ
ಅಸ್ಸಾಂನ ಮರಿಯಾನಿ ಶಾಸಕ ರುಪ್ಜ್ಯೋತಿ ಕುರ್ಮಿ

ಗುವಾಹಟಿ: ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಗೆ ಅಸ್ಸಾಂನಲ್ಲಿ ಮತ್ತೊಂದು ಹೊಡೆತ ಬಿದ್ದಿದೆ. ಅಸ್ಸಾಂನ ಮರಿಯಾನಿ ಶಾಸಕ ರುಪ್ಜ್ಯೋತಿ ಕುರ್ಮಿ ಇಂದು ಶಾಸಕ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಸದ್ಯದಲ್ಲಿಯೇ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.

ರಾಜ್ಯದ ಚಹಾ ಬೆಳೆಗಾರರ ಸಮುದಾಯದ ನಾಯಕನಾಗಿರುವ ರುಪ್ಜ್ಯೋತಿ ಕುರ್ಮಿ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಬಿಸ್ವಜಿತ್ ಡೈಮರಿ ಅವರಿಗೆ ವಿಧಾನಸಭೆಯ ಅವರ ಕಚೇರಿಗೆ ತೆರಳಿ ಸಲ್ಲಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಸಹ ತಲುಪಿಸಿದ್ದೇನೆ ಎಂದಿದ್ದಾರೆ.

ಇದೇ 21ರಂದು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವಾಗಿ ಹೇಳಿದ್ದಾರೆ. ನಾಲ್ಕು ಬಾರಿ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ರುಪ್ಜ್ಯೋತಿ ಕುರ್ಮಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಚ್ಛಾಟಿಸಿತ್ತು.

ಅಸ್ಸಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಿಪುನ್ ಬೊರಾ ಹೇಳಿಕೆ ನೀಡಿದ್ದು, ಅಖಿಲ ಭಾರತ ಕಾಂಗ್ರೆಸ್ ಸಮಿತಿ ನಿರ್ಧಾರವನ್ನು ಅನುಮೋದಿಸಿದೆ ಎಂದಿದ್ದಾರೆ.

ಮಾಜಿ ಶಾಸಕ ರಾಣಾ ಗೋಸ್ವಾಮಿ ನೇತೃತ್ವದಲ್ಲಿ ಬೋರಾ ಅವರು ಮೂವರು ಸದಸ್ಯರ ತಂಡವನ್ನು ರಚಿಸಿ, ಮರಿಯಾನಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲು ಮತ್ತು ಅಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಸಂಗ್ರಹಿಸಲು ಸೂಚಿಸಿದ್ದಾರೆ. ಥೌರಾ ಶಾಸಕ ಸುಶಾಂತ ಬೋರ್ಗೊಹೈನ್ ಮತ್ತು ಮನೋಜ್ ಧನೊವರ್ ತಂಡದ ಇತರ ಸದಸ್ಯರು.

ಚಹಾ ಬುಡಕಟ್ಟು ಸಮುದಾಯದ ಪ್ರಮುಖ ಸದಸ್ಯರಾದ ಕುರ್ಮಿ, ಕಾಂಗ್ರೆಸ್ ನ ಮಾಜಿ ಸಚಿವ ದಿ. ರೂಪಮ್ ಕುರ್ಮಿಯವರ ಪುತ್ರರಾಗಿದ್ದು, 2006 ರಿಂದ ಮರಿಯಾನಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com