ಮನೆ ನೀಡಲು ತೆಲಂಗಾಣ ಸರ್ಕಾರ ನಕಾರ: ತಾನೇ ಮಾಡಿದ ಚಿತೆಗೆ ಹಾರಿ ರೈತ ಆತ್ಮಹತ್ಯೆ!

ನೆಲಸಮಗೊಳಿಸಿದ ತನ್ನ ಮನೆಯ ಮರದ ತುಂಡುಗಳಿಂದ ತಾನೇ ಮಾಡಿಕೊಂಡ ಚಿತೆಗೆ ಹಾರಿ 70 ವರ್ಷದ ರೈತನೊಬ್ಬ ಜೀವಂತ ದಹನವಾಗಿರುವ ಘಟನೆ ಮೇಡಕ್ ಜಿಲ್ಲೆಯ ವೇಮುಲಾಘಾಟ್ ಗ್ರಾಮದಲ್ಲಿ ನಡೆದಿದೆ.
ತಾನೇ ಮಾಡಿದ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೈತ ಮಲ್ಲಯ್ಯ
ತಾನೇ ಮಾಡಿದ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೈತ ಮಲ್ಲಯ್ಯ

ಮೆಡಕ್: ನೆಲಸಮಗೊಳಿಸಿದ ತನ್ನ ಮನೆಯ ಮರದ ತುಂಡುಗಳಿಂದ ತಾನೇ ಮಾಡಿಕೊಂಡ ಚಿತೆಗೆ ಹಾರಿ 70 ವರ್ಷದ ರೈತನೊಬ್ಬ ಜೀವಂತ ದಹನವಾಗಿರುವ ಘಟನೆ ಮೇಡಕ್ ಜಿಲ್ಲೆಯ ವೇಮುಲಾಘಾಟ್ ಗ್ರಾಮದಲ್ಲಿ ನಡೆದಿದೆ.

ಮಲ್ಲಣ್ಣ ಸಾಗರ್ ಜಲಾಶಯ ನಿರ್ಮಾಣಕ್ಕಾಗಿ ಮನೆ ಕಳೆದುಕೊಂಡವರಿಗೆ ತೆಲಂಗಾಣ ಸರ್ಕಾರದಿಂದ ಪುನರ್ವಸತಿ ಕಾಲೋನಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾಲೋನಿಯಲ್ಲಿ 2 ಬಿಹೆಚ್ ಕೆ ಮನೆ ನೀಡಲು ನಿರಾಕರಿಸಿದ ನಂತರ ಮಲ್ಲಯ್ಯ ಇಂತಹ ನಿರ್ಧಾರ ಕೈಗೊಂಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಮುಂದೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ವೇಮುಲಾಘಾಟ್ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಮಲ್ಲಣ್ಣ ಸಾಗರ್ ಯೋಜನೆಗಾಗಿ ಮನೆ ಕಳೆದುಕೊಂಡವರಿಗೆ ಎರಡು ಆಯ್ಕೆಗಳನ್ನು ನೀಡಲಾಗಿದೆ. ಪ್ರತಿ ಕುಟುಂಬಕ್ಕೆ 5.4 ಲಕ್ಷ ಪರಿಹಾರ ಮತ್ತು 250 ಚದರ ಗಜ ಫ್ಲಾಟ್ ಅಥವಾ ಪುನರ್ವಸತಿ ಕಾಲೋನಿಯಲ್ಲಿ 2 ಬಿಹೆಚ್ ಕೆ ಮನೆಯೊಂದಿಗೆ 7.5 ಲಕ್ಷ ಹಣವನ್ನು ನೀಡಲಾಗುತ್ತದೆ. 2019ರಲ್ಲಿ ಮಲ್ಲಯ್ಯ ಎರಡನೇಯದ್ದನ್ನು ಆಯ್ಕೆ ಮಾಡಿಕೊಂಡಿದ್ದರು. 

ಕಳೆದ ವರ್ಷದಿಂದ ಅನೇಕ ಸಮಸ್ಯೆಗೆ ಸಿಲುಕಿರುವ ಮಲ್ಲಯ್ಯ, 9 ತಿಂಗಳ ಹಿಂದಷ್ಟೇ ಕ್ಯಾನ್ಸರ್ ನಿಂದಾಗಿ ಪತ್ನಿಯನ್ನು ಕಳೆದುಕೊಂಡಿದ್ದಾರೆ. ಇದನ್ನು ತಿಳಿದ ಕಂದಾಯ ಇಲಾಖೆ ಅಧಿಕಾರಿಗಳು, ಮನೆಯಲ್ಲಿ ಒಬ್ಬರೇ ಇರುವುದಾದರೆ  ಮನೆಯನ್ನು ಕೊಡುವುದಿಲ್ಲ ಎಂದು ಮಲ್ಲಯ್ಯ ಅವರಿಗೆ ಹೇಳಿದ್ದಾರೆ.ಆತನ ಮದುವೆಯಾಗಿದ್ದ ಮೂವರು ಪುತ್ರಿಯರಲ್ಲಿ ಇಬ್ಬರು ತಮ್ಮ ಗಂಡನೊಂದಿಗೆ ಮರಣ ಹೊಂದಿದ್ದಾರೆ.
 
ಇದರಿಂದ ಮನನೊಂದ ಮಲ್ಲಯ್ಯ, ಗುರುವಾರ ತನ್ನ ನೆಲಸಮಗೊಳಿಸಲಾದ ಮನೆಯಿಂದ ಕಟ್ಟಿಗೆಗಳನ್ನು ಸಂಗ್ರಹಿಸಿದ್ದಾನೆ. ಇದನ್ನು ನೋಡಿದ ಕೆಲವರು ಮಾರಾಟಕ್ಕೆ ಸಂಗ್ರಹಿಸುತ್ತಿಬಹುದು ಎಂದುಕೊಂಡಿದ್ದಾರೆ. ದುರಾದೃಷ್ಟವಶಾತ್ ಈ ಕಟ್ಟಿಗೆಗಳೆ ಮಲ್ಲಯ್ಯನಿಗೆ ಚಿತೆಯಾಗಿವೆ. ಮಲ್ಲಯ್ಯ ತನ್ನ ಉಳಿದಿರುವ ಮಗಳು ಮತ್ತು ಸೊಸೆಯೊಂದಿಗೆ ಹೊಸದಾಗಿ ನಿರ್ಮಿಸಿದ 2 ಬಿಎಚ್‌ಕೆ ಮನೆಗೆ ಹೋಗಲು ಯೋಜಿಸುತ್ತಿದ್ದ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com