ಪಂಜಾಬ್'ನ ದೇರಾ ಬಾಬಾ ನಾನಕ್ ನಲ್ಲಿ ಪಾಕ್ ಡ್ರೋಣ್ ಪತ್ತೆ!

ಪಂಜಾಬ್ ರಾಜ್ಯದ ಗುರುದಾಸ್ಪುರ ಜಿಲ್ಲೆಯ ದೇರಾ ಬಾಬಾ ನಾನಕ್ ನಲ್ಲಿ ಪಾಕಿಸ್ತಾನದ ಡ್ರೋಣ್ ವೊಂದನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಪತ್ತೆ ಹಚ್ಚಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪಂಜಾಬ್ ರಾಜ್ಯದ ಗುರುದಾಸ್ಪುರ ಜಿಲ್ಲೆಯ ದೇರಾ ಬಾಬಾ ನಾನಕ್ ನಲ್ಲಿ ಪಾಕಿಸ್ತಾನದ ಡ್ರೋಣ್ ವೊಂದನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಪತ್ತೆ ಹಚ್ಚಿದೆ ಎಂದು ತಿಳಿದುಬಂದಿದೆ.

ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಡ್ರೋಣ್ ಪತ್ತೆಯಾಗಿದೆ ಎಂದು ಬಿಎಸ್'ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೇರಾ ಬಾಬಾ ನಾನಕ್ ಬಳಿ ಡ್ರೋಣ್ ಹಾರಾಡುತ್ತಿರುವುದು ಇಂದು ಬೆಳಿಗ್ಗೆ 4.30ರ ಸುಮಾರಿಗೆ ಕಣ್ಣಿಗೆ ಬಿದ್ದಿತ್ತು. ಈ ವೇಳೆ ಬಿಎಸ್‌ಎಫ್‌ನ ಗಸ್ತು ಪಡೆಗಳು ಗುಂಡು ಹಾರಿಸಿ ಹೊಡೆದುರುಳಿಸಲಾಗಿದೆ. ಇದೀಗ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಬಿಎಸ್ಎಫ್ ಮೂಲಗಳು ಮಾಹಿತಿ ನೀಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com