ಕೊರೋನಾ 3ನೇ ಅಲೆ ಖಚಿತ: ಮುಂದಿನ 6 ರಿಂದ 8 ವಾರಗಳಲ್ಲಿ ಭಾರತಕ್ಕೆ ಅಪ್ಪಳಿಸುವ ಸಾಧ್ಯತೆ: ಏಮ್ಸ್ ಮುಖ್ಯಸ್ಥ ಗುಲೇರಿಯಾ

ಭಾರತಕ್ಕೆ ಕೊರೋನಾ ವೈರಸ್ ಸಾಂಕ್ರಾಮಿಕದ ಮೂರನೇ ಅಲೆ ಖಚಿತವಾಗಿದ್ದು, ಮುಂದಿನ 6 ರಿಂದ 8 ವಾರಗಳಲ್ಲಿ 3ನೇ ಅಲೆ ಆರಂಭವಾಗುವ ಸಾಧ್ಯತೆ ಇದೆ ಎಂದು ದೆಹಲಿ ಏಮ್ಸ್ ಮುಖ್ಯಸ್ಥ ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ
ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ

ನವದೆಹಲಿ: ಭಾರತಕ್ಕೆ ಕೊರೋನಾ ವೈರಸ್ ಸಾಂಕ್ರಾಮಿಕದ ಮೂರನೇ ಅಲೆ ಖಚಿತವಾಗಿದ್ದು, ಮುಂದಿನ 6 ರಿಂದ 8 ವಾರಗಳಲ್ಲಿ 3ನೇ ಅಲೆ ಆರಂಭವಾಗುವ ಸಾಧ್ಯತೆ ಇದೆ ಎಂದು ದೆಹಲಿ ಏಮ್ಸ್ ಮುಖ್ಯಸ್ಥ ರಂದೀಪ್ ಗುಲೇರಿಯಾ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, 'ಪ್ರಸ್ತುತ ಸ್ಥಿತಿಯಲ್ಲಿ ಭಾರತ ಕೋವಿಡ್ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸೂಕ್ತ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಿಸಬಹುದು. ಮುಂದಿನ 6 ರಿಂದ 8 ವಾರಗಳ ಅಂತರದಲ್ಲಿ  ಮೂರನೇ ಅಲೆ ಭಾರತಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂಜು ಹೇಳಿದರು.

ಇದೇ ವೇಳೆ ವಾರಗಳ ಕಟ್ಟುನಿಟ್ಟಿನ ನಿರ್ಬಂಧಗಳ ನಂತರ ದೇಶದ ಕೆಲವು ಭಾಗಗಳಲ್ಲಿ ಅನ್ಲಾಕ್ ಮಾಡಲಾಗಿದೆ. ನಾವು ಅನ್ಲಾಕ್ ಮಾಡಲು ಪ್ರಾರಂಭಿಸಿದಂತೆ, ಮತ್ತೆ ಕೋವಿಡ್-ಸೂಕ್ತವಾದ ನಡವಳಿಕೆಯ ನಿಭಾವಣೆಯಲ್ಲಿ ಕೊರತೆ ಕಾಣುತ್ತಿದೆ. ಮೊದಲ ಮತ್ತು ಎರಡನೆಯ ಅಲೆಗಳ ನಡುವೆ ಏನಾಯಿತು  ಎಂಬುದನ್ನು ನಾವು ಪಾಠ ಕಲಿತಂತೆ ಕಾಣುತ್ತಿಲ್ಲ. ಮತ್ತೆ ಜನಸಂದಣಿ ಹೆಚ್ಚುತ್ತಿದೆ. ಸೋಂಕು ಪ್ರಸರಣವಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ಇದು ಮುಂದಿನ ಆರರಿಂದ ಎಂಟು ವಾರಗಳಲ್ಲಿ 6 ರಿಂದ 8 ವಾರಗಳಲ್ಲಿ 2ನೇ ಅಲೆ  ಸಂಭವಿಸಬಹುದು ಎಂದು ಡಾ ಗುಲೇರಿಯಾ ಹೇಳಿದ್ದಾರೆ.  

ದೇಶದ ಪ್ರಮುಖ ಸವಾಲು ಭಾರಿ ಜನಸಂಖ್ಯೆಗೆ ಲಸಿಕೆ ನೀಡುವುದಾಗಿದ್ದು, ಕೋವಿಶೀಲ್ಡ್ ಡೋಸ್ ಅಂತರಗಳ ಹೆಚ್ಚಳವು ಹೆಚ್ಚಿನ ಜನರಿಗೆ ಲಸಿಕೆ ಹಾಕುವ ಉದ್ದೇಶವನ್ನು ಹೊಂದಿದೆಯೇ ಹೊರತು, ಕೆಟ್ಟದಲ್ಲ. ವೈರಸ್ ರೂಪಾಂತರವನ್ನು ಇನ್ನಷ್ಟು ಅಧ್ಯಯನ ಮಾಡಲು ಕೋವಿಡ್-19 ವಿರುದ್ಧದ ಭಾರತದ  ಹೋರಾಟದಲ್ಲಿ ಹೊಸ ಗಡಿಯನ್ನು ಅಭಿವೃದ್ಧಿಪಡಿಸಬೇಕಾಗಿದೆ. ಕೋವಿಡ್-19 ರ ಡೆಲ್ಟಾ ರೂಪಾಂತರದಿಂದ ವಿಕಸನಗೊಂಡು ಹೊಸದಾಗಿ ಪ್ರಚೋದಿಸುತ್ತದೆ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಯ ಬಗ್ಗೆ ಕಾಳಜಿ ಇದೆ. ದೇಶದ ಜನಸಂಖ್ಯೆಯ ಸುಮಾರು 5 ಪ್ರತಿಶತದಷ್ಟು ಜನರಿಗೆ ಎರಡು ಡೋಸ್ ಲಸಿಕೆ  ನೀಡಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ದೇಶದ 130 ಕೋಟಿಗೂ ಅಧಿಕ ಜನರಿಗೆ 108 ಕೋಟಿ ಲಸಿಕೆ ಹಾಕುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಗುಲೇರಿಯಾ ಹೇಳಿದರು.

ಹೊಸ ತರಂಗವು ಸಾಮಾನ್ಯವಾಗಿ ಮೂರು ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಕೋವಿಡ್-19 ಸೂಕ್ತವಾದ ನಡವಳಿಕೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಳೆದ ಬಾರಿ ಹೊರದೇಶದಿಂದ ಬಂದ ಹೊಸ ರೂಪಾಂತರಿ ವೈರಸ್ ದೇಶದಲ್ಲಿ ಅಭಿವೃದ್ಧಿಗೊಂಡು ಸಾಕಷ್ಟು ಸೋಂಕು ಪ್ರಕರಣ ಹೆಚ್ಚಾಗಲು  ಕಾರಣವಾಗಿತ್ತು. ಹೀಗಾಗಿ ಹಾಲಿ ಪರಿಸ್ಥಿತಿಯಲ್ಲಿ ಕೋವಿಡ್ ಹಾಟ್ ಸ್ಪಾಟ್ ಗಳ ಪರಿಣಾಮಕಾರಿ ನಿರ್ವಹಣೆಯ ಅಗತ್ಯವಿದೆ.  ಲಸಿಕೆ ನೀಡದಿದ್ದಲ್ಲಿ, ಮುಂಬರುವ ತಿಂಗಳುಗಳಲ್ಲಿ ನಾವು ದುರ್ಬಲರಾಗುತ್ತೇವೆ. ಇದು ಶೇಕಡಾ 5 ಕ್ಕಿಂತ ಹೆಚ್ಚಿನ ಸಕಾರಾತ್ಮಕ ದರ ಹೆಚ್ಚಳಕ್ಕೆ ಸಾಕ್ಷಿಯಾಗಿ, ದೇಶದ ಯಾವುದೇ ಭಾಗದಲ್ಲಿ  ಮಿನಿ-ಲಾಕ್‌ಡೌನ್ ಗಳು ಮತ್ತೆ ಬೇಕಾಗುತ್ತದೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com