ನೆರೆ ರಾಷ್ಟ್ರಗಳ ಭದ್ರತಾ ಸವಾಲುಗಳು ಐಎಎಫ್‌ನಲ್ಲಿ ಪ್ರಮುಖ ಪರಿವರ್ತನೆಗೆ ಕಾರಣವಾಗಿದೆ: ಭದೌರಿಯಾ

ನೆರೆ ರಾಷ್ಟ್ರಗಳ ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ಭದ್ರತಾ ಸವಾಲುಗಳು ಭಾರತೀಯ ವಾಯುಪಡೆಯಲ್ಲಿನ ಪ್ರಮುಖ ಪರಿವರ್ತನೆಗೆ ಕಾರಣವಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ ಹೇಳಿದ್ದಾರೆ.
ಭಾರತೀಯ ವಾಯುಪಡೆ ಮುಖ್ಯಸ್ಥ ಆರ್ ಕೆಎಸ್ ಭದೌರಿಯಾ
ಭಾರತೀಯ ವಾಯುಪಡೆ ಮುಖ್ಯಸ್ಥ ಆರ್ ಕೆಎಸ್ ಭದೌರಿಯಾ

ನವದೆಹಲಿ: ನೆರೆ ರಾಷ್ಟ್ರಗಳಲ್ಲಿನ ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ಭದ್ರತಾ ಸವಾಲುಗಳು ಭಾರತೀಯ ವಾಯುಪಡೆಯಲ್ಲಿನ ಪ್ರಮುಖ ಪರಿವರ್ತನೆಗೆ ಕಾರಣವಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ ಹೇಳಿದ್ದಾರೆ.

ನಮ್ಮ ಕಾರ್ಯಾಚರಣೆಯ ಪ್ರತಿಯೊಂದು ಅಂಶಗಳಲ್ಲೂ ಸ್ಥಾಪಿತ ತಂತ್ರಜ್ಞಾನ ಮತ್ತು ಯುದ್ಧ ಶಕ್ತಿಯ ತ್ವರಿತ ಕಾರ್ಯ ಈಗಿನಂತೆ ಎಂದೂ ತೀವ್ರವಾಗಿರಲಿಲ್ಲ. ಇದಕ್ಕೆ ಕಾರಣ ನಮ್ಮ ನೆರೆಹೊರೆಯಲ್ಲಿ ಮತ್ತು ಅದರಾಚೆ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಅನಿಶ್ಚಿತತೆ. ಭದ್ರತಾ ಸವಾಲುಗಳಿಂದಾಗಿ ಅಭೂತಪೂರ್ವ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದೇವೆ ಎಂದರು. 

ಪೂರ್ವ ಲಡಾಕ್‌ನ ವಾಸ್ತವ ನಿಯಂತ್ರಣ ರೇಖೆಯ(ಎಲ್‌ಎಸಿ) ಉದ್ದಕ್ಕೂ ಅನೇಕ ಹಂತಗಳಲ್ಲಿ ಭಾರತ ಮತ್ತು ಚೀನಾ ಒಂದು ವರ್ಷಕ್ಕೂ ಹೆಚ್ಚು ಕಾಲ ಸಂಘರ್ಷ ನಡೆದಿತ್ತು. 2020ರ ಮೇನಲ್ಲಿ ನಾರ್ತ್ ಬ್ಯಾಂಕ್ ಆಫ್ ದಿ ಪಾಂಗೊಂಗ್ ತ್ಸೋದ ಫಿಂಗರ್ 4,  ಚೀನಾ ಸೈನಿಕರು ಹಾಗೂ ಭಾರತೀಯ ಯೋಧರ ನಡುವೆ ಘರ್ಷಣೆ ನಡೆಸಿತ್ತು. ಹೀಗಾಗಿ ನಮ್ಮ ಸೇನೆಯನ್ನು ಅನೇಕ ಹಂತಗಳಲ್ಲಿ ಸ್ಟ್ಯಾಂಡ್‌ಆಫ್ ಮೋಡ್‌ನಲ್ಲಿ ಸಜ್ಜುಗೊಳಿಲಾಗಿತ್ತು. ಲಡಾಕ್‌ನಲ್ಲಿ 826 ಕಿಲೋಮೀಟರ್ ಉದ್ದದ ಎಲ್‌ಎಸಿಯ ಎರಡೂ ಬದಿಗಳಲ್ಲಿ ಟ್ಯಾಂಕ್‌ಗಳು, ಫಿರಂಗಿ ಬಂದೂಕುಗಳು, ಕ್ಷಿಪಣಿಗಳು ಮತ್ತು ಸಲಕರಣೆಗಳೊಂದಿಗೆ 50,000ಕ್ಕೂ ಹೆಚ್ಚು ಸೈನಿಕರನ್ನು ಪ್ರಸ್ತುತ ನಿಯೋಜಿಸಲಾಗಿದೆ.

ವಾಯುನೆಲೆಯಲ್ಲಿ ವಿಮಾನಗಳು ಸಕ್ರಿಯವಾಗಿವೆ. ಇದು ಗಡಿಯುದ್ದಕ್ಕೂ ಯಾವುದೇ ಅಚಾನಕ್ ಘಟನೆ ನಡೆದರೆ ಪ್ರತಿಕ್ರಿಯಿಸಲು ಸನ್ನದ್ದವಾಗಿದೆ ಎಂದರು. 

ವಾಯುಪಡೆಯ ಪಾತ್ರದ ಬಗ್ಗೆ ಮಾತನಾಡಿದ ಭದೌರಿಯಾ, 'ಕಳೆದ ಕೆಲವು ದಶಕಗಳಲ್ಲಿ ಯಾವುದೇ ಸಂಘರ್ಷದಲ್ಲಿ ಮೇಲುಗೈ ಸಾಧಿಸುವಲ್ಲಿ ವಾಯುಪಡೆ ಪಾತ್ರ ನಿರ್ಣಾಯಕ ಎಂಬುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿಯೇ ಐಎಎಫ್‌ನಲ್ಲಿ ನಡೆಯುತ್ತಿರುವ ಸಾಮರ್ಥ್ಯ ವರ್ಧನೆಯು ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com