ರೇಟಿಂಗ್‌ ತಗ್ಗಿದರೂ ಜಾಗತಿಕ ನಾಯಕರಿಗಿಂತಲೂ ಪ್ರಧಾನಿ ಮೋದಿ ಮುಂದೆ!

ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೇ.66ರಷ್ಟು ಜನರು ಅನುಮೋದಿಸಿದ್ದಾರೆ ಎಂದು ವಿಶ್ವದ ನಾಯಕರ ಬಗ್ಗೆ ಸಮೀಕ್ಷೆ ನಡೆಸಿರುವ ಅಮೆರಿಕಾ ಮೂಲದ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ತಿಳಿಸಿದೆ.

Published: 19th June 2021 12:24 AM  |   Last Updated: 19th June 2021 12:43 PM   |  A+A-


PM Modi

ಪ್ರಧಾನಿ ಮೋದಿ

Posted By : Srinivas Rao BV
Source : The New Indian Express

ನವದೆಹಲಿ: ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೇ.66ರಷ್ಟು ಜನರು ಅನುಮೋದಿಸಿದ್ದಾರೆ ಎಂದು ವಿಶ್ವದ ನಾಯಕರ ಬಗ್ಗೆ ಸಮೀಕ್ಷೆ ನಡೆಸಿರುವ ಅಮೆರಿಕಾ ಮೂಲದ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ತಿಳಿಸಿದೆ.

2019 ರ ಆಗಸ್ಟ್ ನಲ್ಲಿ ಮೋದಿ ಅವರನ್ನು ಶೇ.82 ರಷ್ಟು ಮಂದಿ  ಅಂಗೀಕರಿಸಿದ್ದರು. ಈಗ ಸುಮಾರು 20 ರಷ್ಟು ಪಾಯಿಂಟ್  ಕಡಿಮೆಯಾಗಿದೆ. ಆದರೂ, ಇತರ ಪ್ರಪಂಚ ನಾಯಕರಿಗಿಂತ ಮೋದಿ ಮುಂದಿದ್ದಾರೆ. 

ಅಮೇರಿಕನ್ ಡಾಟಾ ಇಂಟೆಲಿಜೆನ್ಸ್ ಏಜೆನ್ಸಿ 'ಮಾರ್ನಿಂಗ್ ಕನ್ಸಲ್ಟ್' ಅನೇಕ ದೇಶಗಳ ಆಡಳಿತ ನಡೆಸುವ ನಾಯಕರ ಕುರಿತ ಸಾರ್ವಜನಿಕರು ಹೊಂದಿರುವ ಅಭಿಪ್ರಾಯ ಪತ್ತೆ ಮಾಡುತ್ತದೆ. ಗುಪ್ತಚರ ಸಂಸ್ಥೆಗಳ ಮೂಲಕ ರಾಜಕೀಯ ಮಾಹಿತಿ ಸಂಗ್ರಹಿಸಿ ಕ್ರೋಡೀಕರಿಸುತ್ತದೆ.

2019 ಆಗಸ್ಟ್ ನಲ್ಲಿ ಜಮ್ಮು ಕಾಶ್ಮೀರದ ಸಂವಿಧಾನ ವಿಧಿ 370 ಅನ್ನು ರದ್ದುಪಡಿಸಿದಾಗ, ಅವರ ಅನುಮೋದನೆ ರೇಟಿಂಗ್ ಶೇಕಡಾ 82 ಆಗಿತ್ತು. ಕೇವಲ ಶೇ.11ರಷ್ಟು ಮಂದಿ ಮಾತ್ರ ಅವರನ್ನು ವಿರೋಧಿಸಿದ್ದರು. ಈ ಜೂನ್ ವೇಳೆಗೆ, ರೇಟಿಂಗ್ ಶೇ.66 ಕ್ಕೆ ಇಳಿದಿದೆ. ಶೇ.28 ರಷ್ಟು ಮಂದಿ ನಿರಾಕರಿಸಿದ್ದಾರೆ. ಆದರೆ, ಅಮೆರಿಕಾ, ಯುಕೆ, ರಷ್ಯಾ, ಕೆನಡಾ, ಬ್ರೆಜಿಲ್, ಫ್ರಾನ್ಸ್ ಹಾಗೂ ಜರ್ಮನಿ           ಸೇರಿದಂತೆ 13 ದೇಶಗಳಲ್ಲಿ ವಿಶ್ವ ನಾಯಕರಿಗಿಂತಲೂ ಮೋದಿ ಮುಂದಿದ್ದಾರೆ ಎಂದು ಮಾರ್ನಿಂಗ್ ಕನ್ಸಲ್ಟ್ ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಅಮೆರಿಕಾ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಜೋ ಬೈಡನ್, ಶೇ.53 ರಷ್ಟು ರೇಟಿಂಗ್ ಹೊಂದಿದ್ದಾರೆ. ಈ 13 ದೇಶಗಳ ಪೈಕಿ ಜಪಾನಿನ ಪ್ರಧಾನಿ ಯೋಶಿಹಿಡೆ ಸುಗಾ ಕೇವಲ ಶೇ. 29 ರೇಟಿಂಗ್ ಹೊಂದಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆ ಭಾರತವನ್ನು ತತ್ತರಿಸುವಂತೆ ಮಾಡಿತು. ಹಾಸಿಗೆಗಳು, ಆಮ್ಲಜನಕ ಕೊರತೆ, ವೈದ್ಯಕೀಯ ವ್ಯವಸ್ಥೆಯ ದೋಷಗಳನ್ನು ಅನಾವರಣಗೊಳಿಸಿತು. ಕೆಲವು ಕಡೆ ವೈದ್ಯಕೀಯ ಸೇವೆಗಳ ವ್ಯತ್ಯಯದಿಂದಾಗಿ ಕೊರೊನಾ ಸೋಂಕಿತರು ಪ್ರಾಣ ಕಳೆದುಕೊಂಡಿದ್ದರು. ಮತ್ತೊಂದೆಡೆ ಕೋವಿಡ್ ನಿರೋಧಕ ಲಸಿಕೆ ಅಭಿಯಾನದಲ್ಲಿಯೂ ಸಹ ನಿರೀಕ್ಷಿತ ವೇಗ ಕಂಡುಬರಲಿಲ್ಲ ಈ ಎಲ್ಲ ಅಂಶಗಳಿಂದ ಮೋದಿ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿದೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp