ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ

ಮಹಾರಾಷ್ಟ್ರದಲ್ಲಿ ಬಿಜೆಪಿ ಸಂಸದ ನಾರಾಯಣ್ ರಾಣೆ, ಶಿವಸೇನಾ ಬೆಂಬಲಿಗರ ನಡುವೆ ಘರ್ಷಣೆ

ಮಹಾರಾಷ್ಟ್ರದ ಸಿಂಧು ದುರ್ಗ್ ಜಿಲ್ಲೆಯ ಕುಡಲ್ ನಲ್ಲಿ ಇಂದು ಬಿಜೆಪಿ ಸಂಸದ ನಾರಾಯಣ್ ರಾಣೆ ಮತ್ತು ಶಿವಸೇನಾ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಶಿವಸೇನಾ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಶಿವಸೇನಾ ಹೈಲೈಟ್ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಸಿಂಧು ದುರ್ಗ್ ಜಿಲ್ಲೆಯ ಕುಡಲ್ ನಲ್ಲಿ ಇಂದು ಬಿಜೆಪಿ ಸಂಸದ ನಾರಾಯಣ್ ರಾಣೆ ಮತ್ತು ಶಿವಸೇನಾ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಶಿವಸೇನಾ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಶಿವಸೇನಾ ಹೈಲೈಟ್ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಸೇನಾ ಕೇಂದ್ರ ಕಚೇರಿ ಹೊರಗಡೆ  ಶಿವಸೇನಾ ಹಾಗೂ ಬಿಜೆಪಿ ಕಾರ್ಯಕರ್ತರು ಹೊಡೆದಾಡಿಕೊಂಡ ಎರಡು ದಿನಗಳ ಬಳಿಕ ಈ ಘಟನೆ ನಡೆದಿದೆ. 

ಸ್ಥಳೀಯ ಶಿವಸೇನಾ ಶಾಸಕ ವೈಭವ್ ನಾಯಕ್ ಮತ್ತು ಅವರ ಬೆಂಬಲಿಗರು ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ ವಾಹನಗಳ ಮಾಲೀಕರಿಗೆ ಇಂಧನ ಹಾಕಿಸಲು ಕುಡಲ್ ನ ಪೆಟ್ರೋಲ್ ಬಂಕ್ ವೊಂದರ ಬಳಿ ಇಂದು ಬೆಳಗ್ಗೆ  ಹಣ ವಿತರಿಸುತ್ತಿದ್ದರು.  ಆ ಪೆಟ್ರೋಲ್ ಬಂಕ್ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣ ರಾಣೆ ಅವರ ಆಪ್ತರೊಬ್ಬರಿಗೆ ಸೇರಿತ್ತು. ಕೂಡಲೇ ಅಲ್ಲಿ ಜಮಾಯಿಸಿದ ಬಿಜೆಪಿ ಬೆಂಬಲಿಗರು ನಾಯಕ್ ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದಾರೆ. ನಂತರ ಪರಸ್ಪರ ವಾಗ್ಯುದ್ದ ನಡೆದು ಘರ್ಷಣೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಉಭಯ ಪಕ್ಷಗಳ ಕಾರ್ಯಕರ್ತರನ್ನು ಅಲ್ಲಿಂದ ಚದುರಿಸಿದ್ದಾರೆ. ನಾಯಕ್ ಮತ್ತು ಅವರ ಬೆಂಬಲಿಗರು, ಮತ್ತೊಂದು ಪೆಟ್ರೋಲ್ ಬಂಕ್ ಹತ್ತಿರ ಅದೇ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಶಿವಸೇನಾ ಶಾಸಕ ಹಾಗೂ ಅವರ 12 ಬೆಂಬಲಿಗರು ಮತ್ತು ಬಿಜೆಪಿಯ ಆನಂದ್ ಶಿರ್ ವೈಕರ್ ಮತ್ತಿತರ 20 ಮಂದಿ ವಿರುದ್ಧ ಕುಡಲ್ ಪೊಲೀಸ್ ಠಾಣೆಯಲ್ಲಿ ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ಆದಾಗ್ಯೂ, ಈವರೆಗೂ ಯಾರನ್ನು ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com