ಅಕ್ರಮ ದತ್ತು ಪಡೆಯಲು ಅನುಕೂಲವಾಗುವಂತೆ ನಕಲಿ ದಾಖಲೆ ಸೃಷ್ಟಿ; ಮುಂಬೈ ವೈದ್ಯನ ಬಂಧನ

ಅಕ್ರಮ ದತ್ತು ಪಡೆಯಲು ಅನುಕೂಲವಾಗುವಂತೆ ಈ ಹಿಂದೆ ಗಂಡು ಮಗುವಿನ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಆರೋಪದ ಮೇಲೆ ಮುಂಬೈನ ಶಿವಾಜಿನಗರದ ವೈದ್ಯನನ್ನು ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಅಕ್ರಮ ದತ್ತು ಪಡೆಯಲು ಅನುಕೂಲವಾಗುವಂತೆ ಈ ಹಿಂದೆ ಗಂಡು ಮಗುವಿನ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಆರೋಪದ ಮೇಲೆ ಮುಂಬೈನ ಶಿವಾಜಿನಗರದ ವೈದ್ಯನನ್ನು ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಗಂಡು ಮಗುವನ್ನು ದತ್ತು ಪಡೆದಿದ್ದ ಕುಟುಂಬದ ಸಂಬಂಧಿಯೊಬ್ಬರು ಮುಂಬೈ ಪೊಲೀಸರನ್ನು ಸಂಪರ್ಕಿಸಿ ಜನನ ಪ್ರಮಾಣಪತ್ರ ಸೇರಿದಂತೆ ದಾಖಲೆಗಳು ನಕಲಿ ಎಂದು ದೂರಿದ್ದಾರೆ. ರಾಜಸ್ಥಾನದಲ್ಲಿ ಮಗುವಿನ ಜನನವಾಗಿದ್ದರೂ ಮಗು ತನ್ನ ಆಸ್ಪತ್ರೆಯಲ್ಲಿ ಜನಿಸಿದೆ ಎಂದು ಮುಂಬೈ ಮೂಲದ ದಂಪತಿಗೆ ತಿಳಿಸಿದ್ದಾನೆ ಎಂದು ಅಧಿಕಾರಿ ಹೇಳಿದರು.

ಮಗು ಮುಂಬೈನಲ್ಲೇ ಜನಿಸಿದೆ ಎಂದು ತೋರಿಸುವ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮುಂಬೈ ಮೂಲದ ಕುಟುಂಬವೊಂದಕ್ಕೆ ದತ್ತು ನೀಡುವಲ್ಲಿ ಯಶಸ್ವಿಯಾಗಿದ್ದಾನೆ. ಮಗುವಿಗೆ ಈಗ ಎರಡು ವರ್ಷ ದಾಟಿದೆ. ಅಲ್ಲದೆ ಇತ್ತೀಚೆಗೆ ದಾಖಲಾದ ಅಕ್ರಮ ದತ್ತು ಕುರಿತ ದೂರು ಮಗುವನ್ನು ದತ್ತು ಪಡೆದ ಕುಟುಂಬ ಮತ್ತು ಅವರ ರಕ್ತಸಂಬಂಧಿ ನಡುವಿನ ವಿವಾದದ ಪರಿಣಾಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸದ್ಯ ವೈದ್ಯನಿಗೆ ಜಾಮೀನು ಸಿಕ್ಕಿದ್ದು, ಮಗುವನ್ನು ದತ್ತು ಪಡೆದ ಪೋಷಕರನ್ನು ಪ್ರಶ್ನಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com