ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಗಂಗಾ ಪ್ರಸಾದ್ ಶರ್ಮಾ, ಮತ್ತಿತರರು ಟಿಎಂಸಿಗೆ ಸೇರ್ಪಡೆ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮತ್ತೊಂದು ದೊಡ್ಡ ಹೊಡೆತ ಬಿದಿದ್ದೆ. ಅಲಿಪುರ್ದಾರ್ ಜಿಲ್ಲಾ ಅಧ್ಯಕ್ಷ ಗಂಗಾ ಪ್ರಸಾದ್ ಶರ್ಮಾ ಸೋಮವಾರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಗಂಗಾ ಪ್ರಸಾದ್ ಶರ್ಮಾ
ಗಂಗಾ ಪ್ರಸಾದ್ ಶರ್ಮಾ

ಕೊಲ್ಕತ್ತಾ:  ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮತ್ತೊಂದು ದೊಡ್ಡ ಹೊಡೆತ ಬಿದಿದ್ದೆ. ಅಲಿಪುರ್ದಾರ್ ಜಿಲ್ಲಾ ಅಧ್ಯಕ್ಷ ಗಂಗಾ ಪ್ರಸಾದ್ ಶರ್ಮಾ ಸೋಮವಾರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಇತ್ತೀಚಿಗೆ ಹಿರಿಯ ಮುಖಂಡ ಮುಕುಲ್ ರಾಯ್ ಟಿಎಂಸಿಗೆ ವಾಪಸ್ಸಾಗಿದ್ದರು. ಇದು ಪಶ್ಚಿಮ ಬಂಗಾಳದಲ್ಲಿ ಕೇಸರಿ ಪಕ್ಷದ ಆರಂಭ ಎಂದು ಹೇಳಿದ್ದರು. ಈ ವಲಯದಿಂದ ಏಳು ಮಂದಿ ಬಿಜೆಪಿ ಮುಖಂಡರು ಶರ್ಮಾ ಅವರ ಹೆಜ್ಜೆಯನ್ನು ಅನುಸರಿಸಿದ್ದು, ಮಮತಾ ಗುಂಪಿಗೆ ಸೇರ್ಪಡೆಯಾದರು.

ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ತಳಮಟ್ಟದ ಕಾರ್ಯಕರ್ತರ ಭಾವನೆಗಳನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂದು ಶರ್ಮಾ ಆರೋಪಿಸಿದರು. ನಮ್ಮನ್ನು ನಿರ್ಲಕ್ಷಿಸಲಾಗಿದೆ ಅನ್ನಿಸುತ್ತಿದೆ ಆದರೂ, ಅಲಿಪುರ್ದಾರ್ ಜಿಲ್ಲೆಯಲ್ಲಿ ಐದು ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸಾಧ್ಯವಾದಷ್ಟು ಬಿಜೆಪಿಗೆ ಕೊಡುಗೆ ನೀಡಿದ್ದೇವೆ. ಆದರೆ, ಈಗ, ಮಮತಾ ಬ್ಯಾನರ್ಜಿ ನ್ಯಾಯಕತ್ವದಡಿ ಜನರಿಗಾಗಿ ಕೆಲಸ ಮಾಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲಿಲ್ಲ ಎಂದು ಬಿಜೆಪಿಯನ್ನು ತೊರೆದಿದ್ದಾರೆ ಎಂಬ ಸುವೇಂದು ಅಧಿಕಾರಿ ಹೇಳಿಕೆಯನ್ನು ತಳ್ಳಿ ಹಾಕಿದ ಶರ್ಮಾ, ಚುನಾವಣೆ ಸಂದರ್ಭಧಲ್ಲಿ ಸುವೇಂದು ಅಧಿಕಾರಿ ಏಕೆ ಬಿಜೆಪಿಗೆ ಸೇರ್ಪಡೆಯಾದರು. ಹಿರಿಯ ಮುಖಂಡ ಮನೋಜ್ ತಿಗ್ಗಾ ಇದ್ದರೂ ಏಕೆ ಸುವೇಂದು ಅಧಿಕಾರಿ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕನ್ನಾಗಿ ನೇಮಿಸಲಾಯಿತು ಎಂಬುದನ್ನು ತಿಳಿಯಲು ಬಯಸುವುದಾಗಿ ಶರ್ಮಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com