ಮಹಾರಾಷ್ಟ್ರದ ನಾಗ್ಬುರದಲ್ಲಿ ಕುಟುಂಬದ ಐವರನ್ನು ಕೊಂದು, ವ್ಯಕ್ತಿ ಆತ್ಮಹತ್ಯೆ
45 ವರ್ಷದ ವ್ಯಕ್ತಿಯೊಬ್ಬ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ತನ್ನ ಕುಟುಂಬದ ಐದು ಸದಸ್ಯರನ್ನು ಕೊಂದ ಬಳಿಕ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಮುಂಜಾನೆ ನಾಗ್ಪುರದ ಪಚ್ಪೋಲಿ ಪ್ರದೇಶದಲ್ಲಿ ನಡೆದಿದೆ. ಎಂದು ಪೊಲೀಸರು ತಿಳಿಸಿದ್ದಾರೆ.
Published: 21st June 2021 09:08 PM | Last Updated: 21st June 2021 09:08 PM | A+A A-

ಸಂಗ್ರಹ ಚಿತ್ರ
ನಾಗ್ಪುರ: 45 ವರ್ಷದ ವ್ಯಕ್ತಿಯೊಬ್ಬ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ತನ್ನ ಕುಟುಂಬದ ಐದು ಸದಸ್ಯರನ್ನು ಕೊಂದ ಬಳಿಕ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಮುಂಜಾನೆ ನಾಗ್ಪುರದ ಪಚ್ಪೋಲಿ ಪ್ರದೇಶದಲ್ಲಿ ನಡೆದಿದೆ. ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅಲೋಕ್ ಮಾತುಕರ್ ತನ್ನ ಪತ್ನಿ ವಿಜಯ (40) ಮತ್ತು ಮಗಳು ಪಾರಿ (14), ಮಗ ಸಾಹಿಲ್ (12) ಕತ್ತನ್ನು ಕೊಯ್ದು ಕೊಂದಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸುನಿಲ್ ಪುಲಾರಿ ಸುದ್ದಿಗಾರರಿಗೆ ತಿಳಿಸಿದರು.
ಆ ನಂತರ ಆರೋಪಿ ತಮ್ಮ ಅತ್ತೆ ಲಕ್ಷ್ಮಿ ಬೊಬ್ಡೆ (55) ಮತ್ತು ಅತ್ತಿಗೆ ಅಮಿಶಾ ಬೊಬ್ಡೆ (21) ಅವರ ಮನೆಗೆ ತೆರಳಿ ಅವರ ಕತ್ತನ್ನೂ ಕತ್ತರಿಸಿದ್ದಾರೆ ಎಂದು ಎಸಿಪಿ ಹೇಳಿದರು. ಮಾತುಕರ್ ಇಷ್ಟೆಲ್ಲಾ ಮಾಡಿದ ನಂತರ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
"ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಮನೆಯ ಬಾಗಿಲು ಮುಚ್ಚಿರುವುದನ್ನು ಮಾತುಕರ್ ಕುಟುಂಬದ ಅಕ್ಕಪಕ್ಕದವರು ಗಮನಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ನೆರೆಹೊರೆಯವರು ಕಿಟಕಿಯಿಂದ ಇಣುಕಿ ನೋಡಿದಾಗ, ಸಾಹಿಲ್ ಡ್ರಾಯಿಂಗ್ ರೂಂನಲ್ಲಿ ಹಾಸಿಗೆಯ ಮೇಲೆ ನಿಸ್ತೇಜವಾಗಿ ಮಲಗಿರುವುದು ಕಂಡುಬಂದಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ."ಎಂದು ಹೆಚ್ಚುವರಿ ಸಿಪಿ ಹೇಳಿದರು.
ತಹಸಿಲ್ ಪೊಲೀಸರು ಮನೆಯ ಬಾಗಿಲು ತೆರೆದಾಗ ಮಾತುಕರ್, ವಿಜಯ, ಮಗಳು ಪಾರಿ ಮತ್ತು ಮಗ ಸಾಹಿಲ್ ಅವರ ಶವಗಳನ್ನು ಪತ್ತೆ ಹಚ್ಚಿದರೆ, ಅಮಿಶಾ ಮತ್ತು ಲಕ್ಷ್ಮಿ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಮಾತುಕರ್ ಅವರ ಮೃತದೇಹದಿಂದ ಸುಮಾರು 200 ಮೀಟರ್ ದೂರದಲ್ಲಿ ಪತ್ತೆಯಾಗಿದೆ ಎಂದು. ಹೇಳಿದರು.
ಮಾತುಕರ್ ಟೈಲರಿಂಗ್ ಮಾಡುತ್ತಿದ್ದ, ಮತ್ತು ಕೌಟುಂಬಿಕ ಕಲಹಗಳ ಪರಿಣಾಮದಿಂದ ಈ ಕೊಲೆಗಳು ಹಾಗೂ ಆತ್ಮಹತ್ಯೆ ನಡೆದಿದೆ ಎಂದು ತೆಹಿಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.