ಒಂದೇ ದಿನ ದೇಶದ 80 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ: ದಾಖಲೆಯ ಲಸಿಕೆ ವಿತರಣೆ ಸಂಖ್ಯೆ ಸಂತಸ ತಂದಿದೆ ಎಂದ ಪ್ರಧಾನಿ ಮೋದಿ

ದಾಖಲೆ ಸಂಖ್ಯೆಯ ಕೋವಿಡ್ ಲಸಿಕೆ ಡೋಸ್ ಗಳನ್ನು ಸೋಮವಾರ ದೇಶದ ಜನತೆಗೆ ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಸಾಧನೆಯನ್ನು "ಸಂತೋಷಕರ" ಎಂದು ಶ್ಲಾಘಿಸಿದ್ದಾರೆ. ರೋಗದ ವಿರುದ್ಧ ಹೋರಾಡಲು ಲಸಿಕೆ ನಮ್ಮ ಪ್ರಬಲ ಅಸ್ತ್ರವಾಗಿದೆ ಎಂದು ಹೇಳಿದ್ದಾರೆ.
ಪಿಎಂ ಮೋದಿ
ಪಿಎಂ ಮೋದಿ

ನವದೆಹಲಿ: ದಾಖಲೆ ಸಂಖ್ಯೆಯ ಕೋವಿಡ್ ಲಸಿಕೆ ಡೋಸ್ ಗಳನ್ನು ಸೋಮವಾರ ದೇಶದ ಜನತೆಗೆ ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಸಾಧನೆಯನ್ನು "ಸಂತೋಷಕರ" ಎಂದು ಶ್ಲಾಘಿಸಿದ್ದಾರೆ. ರೋಗದ ವಿರುದ್ಧ ಹೋರಾಡಲು ಲಸಿಕೆ ನಮ್ಮ ಪ್ರಬಲ ಅಸ್ತ್ರವಾಗಿದೆ ಎಂದು ಹೇಳಿದ್ದಾರೆ.

ಪರಿಷ್ಕೃತ ಲಸಿಕೆ ಮಾರ್ಗಸೂಚಿಗಳು ಜಾರಿಗೆ ಬಂದ ಮೊದಲ ದಿನ ಸೋಮವಾರ ಸಂಜೆ ತನಕ 80 ಲಕ್ಷ ಡೋಸ್‌ಗಳನ್ನು ನೀಡಲಾಯಿತು. ಅಂತಿಮ ಸಂಖ್ಯೆ ಇನ್ನಷ್ಟು ಹೆಚ್ಚಿರಬಹುದು.

"ಇಂದಿನ ದಾಖಲೆ ಮುರಿದಿರುವ ಲಸಿಕೆ ಅಭಿಯಾನದ ಸಂಖ್ಯೆಯು ಸಂತಸ ತಂದಿದೆ. ಕೋವಿಡ್19 ರ ವಿರುದ್ಧ ಹೋರಾಡಲು ಲಸಿಕೆ ನಮ್ಮ ಪ್ರಬಲ ಅಸ್ತ್ರವಾಗಿದೆ. ಮೋಡಿ ಮಾಡುವ ಲಸಿಕೆ ಮತ್ತು ಈ ಲಸಿಕೆ ಪಡೆದ ಎಲ್ಲಾ ಮುಂಚೂಣಿಯ ವಾರಿಯರ್ಸ್ ಗಳಿಗೆ ಅಭಿನಂದನೆಗಳು. ವೆಲ್ ಡನ್ ಇಂಡಿಯಾ!" ಮೋದಿ ಹೇಳಿದ್ದಾರೆ.

ಈ ಹಿಂದಿನ ಗರಿಷ್ಟ ಲಸಿಕೆ ವಿತರಣೆ ಏಪ್ರಿಲ್ 1 ರಂದು 48 ಲಕ್ಷ ಡೋಸ್ ಆಗಿದೆ.

ಜನವರಿ 16 ರಿಂದ 28.33 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಜೂನ್‌ನಲ್ಲಿ ಇದುವರೆಗೆ ಭಾರತವು ದಿನಕ್ಕೆ ಸರಾಸರಿ 31 ಲಕ್ಷ ಲಸಿಕೆ ವಿತರಿಸಿದೆ. ದೇಶವು ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಮೇ ಮೊದಲ ವಾರದಲ್ಲಿ ಸರಾಸರಿ ಒಂದೇ ದಿನ ಸುಮಾರು 16 ಲಕ್ಷ ಲಸಿಕೆ ವಿತರಣೆ ಆಗಿದ್ದವು. 

ಹಿಂದಿನ ದಿನ ಪ್ರಧಾನಿ ಮೋದಿ, ಕೇಂದ್ರ ಸರ್ಕಾರವು ಇಂದಿನಿಂದ ಪ್ರತಿಯೊಬ್ಬ ಭಾರತೀಯನಿಗೂ ಉಚಿತ ಲಸಿಕೆ' ಅಭಿಯಾನವನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿದ್ದರು. "ಭಾರತದ ಲಸಿಕೆ ಅಭಿಯಾನದ  ಈ ಹಂತದ ಅತಿದೊಡ್ಡ ಫಲಾನುಭವಿ ದೇಶದ ಬಡವರು, ಮಧ್ಯಮ ವರ್ಗ ಮತ್ತು ಯುವಕರು. ನಾವೆಲ್ಲರೂ ಲಸಿಕೆ ಪಡೆಯುವುದಾಗಿ ಪ್ರತಿಜ್ಞೆ ಮಾಡಬೇಕು. ಒಟ್ಟಾಗಿ ನಾವು ಕೋವಿಡ್ 19 ಅನ್ನು ಸೋಲಿಸುತ್ತೇವೆ" ಎಂದು ಅವರು ಹೇಳಿದರು.

ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಕೇಂದ್ರವು ಉಚಿತವಾಗಿ ನೀಡುವ ಲಸಿಕೆ ಪ್ರಮಾಣವನ್ನು ಜನಸಂಖ್ಯೆ, ರೋಗದ ಪ್ರಮಾಣ ಮತ್ತು ಲಸಿಕೆ ಅಭಿಯಾನ ಪ್ರಗತಿಯಂತಹ ಮಾನದಂಡಗಳ ಆಧಾರದ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ತದೇಶಕ್ಕೆ ಹಂಚಲಾಗುತ್ತದೆ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರೂ ಉಚಿತ ಲಸಿಕೆಗೆ  ಅರ್ಹರಾಗಿರುತ್ತಾರೆ

ಲಸಿಕೆ ವ್ಯರ್ಥವಾಗುವಿಕೆ ಕೇಂದ್ರದ ಲಸಿಕೆ ಹಂಚಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ದೇಶದಲ್ಲಿ ಉತ್ಪಾದಿಸುವ 75 ಪ್ರತಿಶತದಷ್ಟು ಲಸಿಕೆಗಳನ್ನು ಕೇಂದ್ರವು ಈಗ ಸಂಗ್ರಹಿಸಲಿದೆ. ಪ್ರಕ್ರಿಯೆಯ ವಿಕೇಂದ್ರೀಕರಣದ ಬೇಡಿಕೆಗಳನ್ನು ಅನುಸರಿಸಿ ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು 50 ಪ್ರತಿಶತದಷ್ಟು ಲಸಿಕೆಗಳನ್ನು ಸಂಗ್ರಹಿಸಲು ಈ ಹಿಂದೆ ಅವಕಾಶ ನೀಡಿತ್ತು. ಆದರೆ, ಹಲವಾರು ರಾಜ್ಯಗಳು ಹಣ ಸೇರಿದಂತೆ ಸಮಸ್ಯೆಗಳ ಬಗ್ಗೆ ದೂರು ನೀಡಿದ ನಂತರ, ಪ್ರಧಾನ ಮಂತ್ರಿ ಲಸಿಕೆ ಮಾರ್ಗಸೂಚಿಗಳ ಪರಿಷ್ಕರಣೆಯನ್ನು ಜೂನ್ 8 ರಂದು ಪ್ರಕಟಿಸಿದರು.

ಲಸಿಕೆ ತಯಾರಕರು ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಹೊಸ ಲಸಿಕೆಗಳನ್ನು ಉತ್ತೇಜಿಸಲು, ದೇಶೀಯ ಲಸಿಕೆ ತಯಾರಕರಿಗೆ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಗಳನ್ನು ನೇರವಾಗಿ ಒದಗಿಸುವ ಆಯ್ಕೆಯನ್ನು ನೀಡಲಾಗುತ್ತದೆ. ಇದನ್ನು ಅವರ ಮಾಸಿಕ ಉತ್ಪಾದನೆಯ 25 ಪ್ರತಿಶತಕ್ಕೆ ಸೀಮಿತಗೊಳಿಸಲಾಗುವುದು ಎಂದು ಹೊಸ ಮಾರ್ಗಸೂಚಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com